ಪುಟ:ರಘುಕುಲ ಚರಿತಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ರಘುಕುಲಚರಿತಂ, ೧೦೧ ನಿಸಿದ ವಸುಂಧರೆಯು ಕಾಣಿಸಿಕೊಂಡಳು, ಮತ್ತು ಪತಿಯನ್ನೇ ದುರ ದುರನೆ ದಿಟ್ಟಿಸಿ ನೋಡುತಲಿರುವ ಸೀತೆಯನ್ನು ಆಕೆಯ ವಲ್ಲಭನು- ಬೇಡ ಬೇಡವೆಂದು ಹೇಳುತ್ತಿರುವಾಗಲೇ ತನ್ನ ತೊಡೆಯಮೇಲೆ ಕೂಡಿಸಿಕೊಂ ಡು ಪಾತಾಳವನ್ನು ಹೊಕ್ಕಳು, ಮರಳಿ ಮಹೀದೇವಿಯು- ಮಹಿಳೆಯ ನ್ನು ಒಪ್ಪಿಸುವಳೆಂದು ಬಯಸುತಲಿದ್ದ ಬಿಲ್ಲಾಳಾದ ರಾಮನಿಗೆ ಧರೆಯ ವಿಷಯದಲ್ಲಿ ಉಂಟಾದ ರೋಷದ ಸಡಗರವನ್ನು, ಆಗತಕ್ಕುದನ್ನು ( ವಿಧಿಯನ್ನು ) ಮಾರಲು ಯಾರಿಗೂ ಆಳವಲ್ಲ, ೨” ಎಂದು ಹೇಳಿ ಬ್ರಹ್ಮ ನು ಶಮನಮಾಡಿದನು. ಯಜ್ಞ ಭಾಗವೆಲ್ಲ ನೆರವೇರಿತು, ತನ್ನಿಂದ ಗೌರವಿಸಲ್ಪಟ್ಟ ಮುನಿಗ ಳನ್ನ ಮಿತ್ರರನ್ನೂ, ಪ್ರಜಾಪಾಲಕನಾದ ರಾಮನು- ತಂತಮ್ಮ ಸ್ಥಾನಗ ೪ಗೆ ಕಳುಹಿಸಿಕೊಟ್ಟನು, ಸೀತೆಯಲ್ಲಿದ್ದ ಪ್ರೀತಿಯನ್ನು ಆಕೆಯ ಮಕ್ಕ ೪ಾದ ಕುಶಲವರಲ್ಲಿಟ್ಟನು. ತರುವಾಯು ಭರತನ ಸೋದರದ ಮಾವ ನಾದ ಯುಧಾಚಿತ್ತಿನ ಅನುಮತಿಯಂತೆ ಬಹಳವಾದ ಐಶರದೊಡನೆ ಸಿಂಧುದೇಶವನ್ನು ಭರತನಿಗೆ ಒಪ್ಪಿಸಿದನು, ಭರತನು ಆ ಸಿಂಧುದೇ ಶಕ್ಕೆ ತೆರಳಿ, ಅಲ್ಲಿದ್ದ ಗಂಧರ್ವರನ್ನೆಲ್ಲ ಕಾಳಗದಲ್ಲಿ ಗೆದ್ದು' ಕೃಲಿದ್ದ ಆಯುಧಗಳನೆಲ್ಲ ಬಿಸುಡಿಸಿ, ವೀಣೆಯೊಂದನ್ನು ಮಾತ್ರವೆ ಅವರು ಹಿಡಿದಿ ರುವಂತೆ ಮಾಡಿದನು, ಮತ್ತು - ಅಭಿಷೇಕಕ್ಕೆ ಅರ್ಹರಾಗಿದ್ದ ತನ್ನ ಮಕ್ಕಳಲ್ಲಿ ತಕ್ಷನೆಂಬುವವನಿಗೆ ತಕ್ಷಶಿಲೆಯೆಂಬ ಗಾಜಧಾನಿಯಲ್ಲಿಯ, ಪುಷ್ಕಲನೆಂಬುವವನಿಗೆ ಪುಷ್ಕಲಾವತಿಯೆಂಬ ನಗರಿಯಲ್ಲಿಯೂ ಪಟ್ಟಗಟ್ಟಿ ಮರಳಿ ರಾಮನ ಸನ್ನಿಧಿಗೆ ಬಂದನು, ಸಾವಿತ್ರಿಯ - ರಘನಾಥನ ಶಾಸನದಿಂದ, ತನ್ನ ಪುತ್ರರಾದ ಅಂಗದ ಚಂದ್ರಕೇತುಗಳೆಂಬಿಬ್ಬರನ್ನೂ ತಾರಾಪಥ ದೇಶಗಳ ಗರಸರನ್ನಾಗಿ ಮಾಡಿದನು. ಇಂತು ರಾಮಾದಿಗಳು - ತಂತಮ್ಮ ಮಕ್ಕಳಿಗೆ ರಾಜ್ಯಾಭಿಷೇಕ ವನ್ನು ಮಾಡಿ ಸುಖದಿಂದಿರುವಲ್ಲಿ, ಕಾಲವಶದಿಂದ ದಿವಂಗತರಾದ ಕೌಸಲ್ಯ ಮೊದಲಾದ ಜನನಿಯರಿಗೆ ಕ್ರಮವಾಗಿ ಉತ್ತರಕ್ರಿಯೆಗಳನ್ನು ನೆರವೇರಿಸಿ ದರು. ತರುವಾಯ ಒಂದು ಸಮಯದಲ್ಲಿ - ಅಂತಕನು ಮುನಿವೇಷಧಾರಿ ಯಾಗಿ ಬಂದು, ರಾಘವನನ್ನು ಕಂಡು, ಎಲೈ ದಾಶರಥಿಯೇ ! ಗುಟ್ಟಾಗಿ