ಪುಟ:ರಘುಕುಲ ಚರಿತಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

029 ಶ್ರೀ ಶಾ ರ ದ . ಮಾತನಾಡುತಲಿರುವ ನವ ರಹಸ್ಯವನ್ನು ಯಾವನು ಭಂಗಪಡಿಸುವನೋ ಅಂಧವನನ್ನು ನೀನು ತೊರೆಯಬೇಕು ಎಂದು ಹೇಳಿದನು, ರಾಮನು ಹಾಗೆಯೇ ಆಗಲೆಂದು ಸಮ್ಮತಿಸಿದನು. ಕಡಲೆ ಕಾಲನು - ಮನ್ನಿವೇಶ ವನ್ನು ಬಿಟ್ಟು, ನಿಜರೂಪದಿಂದ ಕಾಣಿಸಿಕೊಂಡು, ಎಲೈ ರಾಮಚಂದ್ರನೇ ನಿನ್ನ ಅವತಾರದಕೆಲಸವು ನೆರವೇರಿದೆ. ಬ್ರಹ್ಮನ ಶಾಸನದಿಂದ ನೀನಿನ್ನು ಸ್ವರ್ಗವನ್ನು ಕುರಿತು ಹೊರಡಬೇಕು ಎಂದನು. ಯಾರನ್ನೂ ಒಳಗೆ ಬಿಡದಂತೆ ಶಪಥದಿಂದ ಬಾಗಿಲನ್ನು ಕಾಯುತಲಿದ್ದ ಲಕ್ಷ್ಮಣನು ಜಾಣನಾ ಗಿದ್ದರೂ, ಅದೇ ಸಮಯದಲ್ಲಿ ರಾಮನ ದರ್ಶನವನ್ನು ಬಯಸಿಬಂದ ದುರ್ವಾ ಸಮುನಿಯನ್ನು ಕಂಡು, ಒಳಗೆ ಬಿಡದೆಹೋದರ ಶಾಪಕೊಡುವನೆಂದು ಹೆದರಿ, ಕಾಲರಾಮರ ಸಮಯವನ್ನು ಭೇದಿಸಿದನು, ಆಗ ರಾಮನು - ಲಕ್ಷ್ಮಣನನ್ನು ಕರೆದು, ಎಲೆ ಸಾವಿತ್ರಿಯೇ ! ನೀನಿನ್ನು ಬೇಗನೆ ಹೊರಡು, ಧನ್ನಕ್ಕೆ ಲೋಪವುಂಟಾಗಬಾರದು, ಸಾಧುಗಳಿಗೆ ವಧೆ, ತ್ಯಾಗ, ಎಂಬಿವೆರಡೂ ಸಮವೆನಿಸಿರುವುದು ಎಂದನು. ಯೋಗಮಾರ್ಗವನ್ನು ಬಲ್ಲವನಾಗಿದ್ದ ಲಕ್ಷ್ಮಣನು - ಸರಯ ತೀರಕ್ಕೆ ಬಂದು, ತನ್ನ ದೇಹತ್ಯಾ ಗದಿಂದ ಅಣ್ಣನ ಪ್ರತಿಜ್ಞೆಯನ್ನು ಸಾರ್ಥಕವಾದುದನ್ನಾಗಿ ಮಾಡಿದನು. ಬಳಿಕ ರಾಘವನು - ತನ್ನ ನಾಲ್ಕನೆಯ ಒಂದುಪಾಲು ತನಗಿಂತ ಮೊದಲು ನಾಕಲೋಕವನ್ನೆದಲು, ಮುಕ್ಕಾಲಿನಿಂದ ನೆಲದಲ್ಲಿ ನಿಂದಿರುವ ಧರದಂತೆ, ತಾನೂ ಅತಂತ್ರವಾಗಿ ನಿಂತನು. ಅಲ್ಲದೆ, ಸ್ವಲ್ಪ ಕಾಲದಲ್ಲಿಯೇಹಗೆಗಳೆಂಬ ನಾಗಗಳಿಗೆ ಅಂಕುಶದಂತಿರುವ ಕುಶಕುಮಾರನನ್ನು ಕುಶಾ ವತಿಯೆಂಬ ನಗರಿಯಲ್ಲಿ ನಿಲ್ಲಿಸಿದನು. ಹಾಗೆಯೇ ಮೃದುಮಧುರ ಭಾಷಣ ಗಳಿಂದ ಸಾಧುಗಳನ್ನಾನಂದಗೊಳಿಸುವ ಲವನೆಂಬ ಪುತ್ರನನ್ನು - ಶರಾವತಿ ಯೆಂಬ ನಗರದಲ್ಲಿ ನೆಲೆಗೊಳಿಸಿ, ಅನುಜರಾದ ಭರತಾದಿಗಳಿಂದ ಸಹಿತನಾಗಿ, ಪತಿಯಲ್ಲಿನ ಪ್ರೇಮದಿಂದ ಮನೆಗಳನ್ನುಳಿದು ಬಂದ ಅಯೋಧ್ಯೆಯೊಡನೆ ಉತ್ತರಾಭಿಮುಖನಾಗಿ ಹೊರಟನು. ಆ ರಾಮನ ಚಿತ್ತವನ್ನು ಬಲ್ಲ ಹರಿ ರಾಕ್ಷಸರೂ - ಕದಂಬಕುಸುಮದಂತೆ ಉದಿರುತ್ತಿರುವ ತೋರವಾದ ಪ್ರಜೆ ಗಳ ಕಣ್ಣೀರಿನ ಹನಿಗಳಿಂದ ನೆನದಿರುವ ಆತನ ಹಾದಿಯನ್ನು ಅನುಸರಿಸಿ ಹೊರಟರು, ಭಕ್ತವತ್ಸಲನಾದ ರಾಮನು – ಸ್ವರ್ಗಕ್ಕೆ ಕರೆದೊಯ್ಯಲು