ಪುಟ:ರಘುಕುಲ ಚರಿತಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ರಘುಕುಲಚಗಿತು. ဂဝ ಆಳಿದುಬಂದಿರುವ ವಿಮಾನವನ್ನು ಏರಲಿಕ್ಕೆ, ತನ್ನನ್ನು ಹಿಂಬಾಲಿಸಿರುವ ಪ್ರಜೆಗಳಿಗೆ ಸರಯವೇಣಿಯನ್ನು ಏಣಿಯನ್ನಾಗಿ ಮಾಡಿದನು, ಆಗಲಾ ಸರಯೂ ನದಿಯಲ್ಲಿ ಮುಳುಗುತಲಿರುವವರ ಗದ್ದಲವು - ಗೋವುಗಳ ಪ್ರತರಣದಂತೆ ಎಂದರೆ ಹಾರಾಟದಂತೆ ಇದ್ದುದರಿಂದಲೇ, ಆ ಪ್ರದೇಶವು ಇಂದಿಗೂ ಈ ಭೂಮಿಯಲ್ಲಿ ಗೊಪ್ರತರವೆಂಬ ಪಾವನವಾದ ತೀರ್ಥವೆಂದು ಹೆಸರುವಾಸಿಗೆ ಬಂದಿತು. ಬಳಿಕ ಪ್ರಭುವಾದ ಶ್ರೀರಾಮನು - ದೇವತೆ ಗಳ ಅಂಶಗಳಿಂದ ಅವತರಿಸಿದ್ದ ಸುಗ್ರೀವ ಮುಂತಾದವರು ತಂತಮ್ಮ ಮೂಲಸ್ಥಾನಗಳನ್ನು ಸೇರಿದರು, ಹಾಗೆಯೇ ದೇವಭೂಮಿಯನ್ನು ಸೇರಿದ, ಪ್ರಜೆಗಳು ಹೊಸಬರಾದ ದೇವತೆಗಳಾಗಲು, ಅವರಿಗೆಲ್ಲ ಬೇರೊಂದು ಸ್ವರ್ಗವನ್ನು ಕಲ್ಪಿಸಿಕೊಟ್ಟನು. ಇಂತು ಶ್ರೀಮಹಾವಿಷ್ಣುವು – ಭೂಲೋಕದಲ್ಲಿ ಮನುಜರೂಪ ದಿಂದ ರಾಮನಾಗಿ ಅವತರಿಸಿ, ದೇವತೆಗಳಿಗೆ ಕರವ್ಯವಾಗಿದ್ದ ರಾವಣನ ಶಿರಚ್ಛೇದವೆಂಬ ಕಾರವನ್ನು ನೆರವೇರಿಸಿ, ಲಂಕಾನಾಥನಾದ ವಿಭೀಷಣ, ಪವನತನಯನಾದ ಹನುಮಂತ ಎಂಬೀ ಇಬ್ಬರನ್ನು, ಉತ್ತರದಿಕ್ಕಿನ ಹಿಮಾ ಲಯದಲ್ಲಿಯೂ, ದಕ್ಷಿಣದೆಶೆಯೊಳಿರುವ ಚಿತ್ರಕೂಟದಲ್ಲಿಯೂ, ಕ್ರಮ ವಾಗಿ ಎರಡು ಜಯಸ್ತಂಭಗಳಂತೆ ನೆಲೆಗೊಳಿಸಿ, ಸರ್ವಲೋಕಕ್ಕೂ ಆತ್ರ ಯವಾಗಿರುವ ತನ್ನ ದಿವೃದೇಹವನ್ನ ಪ್ರವೇಶಿಸಿದನು. ಇಂತು ಶ್ರೀರಾಮ ಸ್ವರಾ ರೋಹಣವೆಂಬ ಹದಿನೈದನೆಯ ಅಧ್ಯಾಯಂ,