ಪುಟ:ರಘುಕುಲ ಚರಿತಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ರಘುಕುಲಚರಿತಂ, ೧೦೫ ' ಹುಟ್ಟಿ, (ದಾನ) ಮದ ಧಾರೆಗಳಿಂದ ತುಂಬಿರುವ ಅಷ್ಟದಿಗ್ಗಜಗಳ ಸಂತತಿಯಹಾಗೆ, ಎಂಟಕವಲಾಗಿ ಒಡೆದು, ಭೂಮಂಡಲದಲ್ಲಿ ಹರಡಿತು. ಆ ಬಳಿಕ ಒಂದುದಿವಸ ನಟ್ಟಿರುಳಿನಲ್ಲಿ ಕುಶನು - ಮಲಗುವಮನ ಯೊಳಗೆ ಹಾಸಿಗೆಯ ಮೇಲೆ ಎಚ್ಚರದಿಂದಲೇ ಪವಳಿಸಿದ್ದನು. ಜನರೆಲ್ಲ ನಿದ್ರಿಸುತಲಿದ್ದ ರು. ದೀವಿಗೆಗಳು ಅಲುಗದಿದ್ದು ವು. ಅಂತಹಸಮಯದಲ್ಲಿ ಹಿಂದೆಲ್ಲಿಯೂ ಕಾಣಬರದಿರುವ ಒಬ್ಬವನಿತೆಯನ್ನು ಕಂಡನು. ಪತಿಯನ್ನ ಗಲಿರುವ ಶೇಷವನ್ನು ತಾಳ ಆವನಿತೆಯು - ಸಜ್ಜನರಿಗೆ ತಕ್ಕುದೆನಿಸಿರುವ ರಾಜ್ಯಸಮೃದ್ಧಿಯನ್ನು ಪಡೆದವನೂ, ದೇವೇಂದ್ರನಂತೆ ಬೆಳಗುವವನೂ, ಹಗೆಗಳನ್ಸಡಗಿಸಿದವನೂ, ಬಂಧು ಸಂಸತ್ತಿಯುಳ್ಳವನೂ ಆಗಿರುವ ಆ ಕುಶಕುಮಾರನ ಇದಿರಿಗೆ ಜಯಜಯವೆಂದು ಹರಸುತ್ತಾ ನಿಂತು, ಕರಗ ಳನ್ನು ಜೋಡಿಸಿ, ಅಂಜಲಿಯನ್ನೊಪ್ಪಿಸಿದಳು. ಕುಶನು ಬಲು ಅಚ್ಚರಿಗೊಂಡನು. ಮಲಗಿದ್ದವನು ಶರೀರದ ಪೂರ್ವಭಾಗದಿಂದ ಸ್ವಲ್ಪ ಮಾತ್ರ ಮೇಲಕ್ಕೆದ್ದು ಬಂದ ಅಂಗಯ್ಯನ್ನು ತಲೆಯ ಪಕ್ಕಕ್ಕೆ ಊಡುಮಾಡಿನೋಡಿದನು, ಎಲ್ಲಿಯ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿದೆ. ಆದರೂ, ಕನಡಿಯ ಒಳ ಹೋಗುವ ಪ್ರತಿಬಿಂಬ ರೂಪದಂತೆ ಮನೆಯೊಳಗೆ ಬಂದಿ ರುವ ಆ ವನಿತೆಯನ್ನು ಕುರಿತು ಇಂತೆಂದನು: – ಎಲೆ ಸಾಧಿಂ !” ಹೋಗಲಳವಲ್ಲದ ಆವರಣದಿಂದೊಡಗೂಡಿರುವ ಈ ಮನೆಯೊಳಗೆ ಹೇಗೆ ಬಂದೆ ? ನಿನಗೆ ಅಂತಹಯೋಗ ಮಹಿಮೆಯ ಇರುವಂತೆ ಕಾಣುವುದಿಲ್ಲ ? ತಾವರೆಯು ಬಳ್ಳಿಯು - ಹಿಮದಿಂದುಂ ಟಾದ ಉಪದ್ರವವನ್ನು ಹೇಗೋಹಾಗೆ, ದುಃಖಿಸುವವರ ಆಕಾರವನ್ನೂ ಪಡೆದಿದ್ದಿಯ; ಎಲ್‌ ಸುಮಂಗಲಿ ! ನೀನುಯಾರು ? ಮತ್ತು ಯಾರಪತ್ನಿ? ಇಂತಹನೀನು ನಾನಿರುವ ಇಲ್ಲಿಗೆ ಬರಲು ಕಾರಣವೇನು ? ಜಿತೇಂದ್ರಿಯ ರಾಗಿರುವ ರಘುಕುಲದವರ ಮನಸ್ಸು - ಪರಸ್ತಿ ಯರಲ್ಲಿ ಪ್ರವರಿ ಸತ ಕ್ಯದಲ್ಲ ಎಂಬುದನ್ನ ಚೆನ್ನಾಗಿ ತಿಳಿದು, ಪ್ರತ್ಯುತ್ತರವನ್ನು ಹೇಳು ಎಂದನು. ಆ ಮಾತಿಗೆ ಆ ವನಿತೆಯು :- ಎಲೈದೊರೆಯೆ ! ನಿಮ್ಮ ತಂದೆಯಾದ ರಾಮನು ತನ್ನ ದಿವ್ಯ ದೇಹ