೧೦೬ ಶ್ರೀ ಶಾ ರ ದ . ದನ್ನು ಪ್ರವೇಶಿಸಲಿಕ್ಕೆ ತೆರಳುವಾಗ ಪುರಜನರನ್ನೆಲ್ಲ ಕರದೊಯ್ದ ನಮ್ಮ ? ಅದರಿಂದಲೇ ಅನಾಥಳನಿಸಿ, ದೋಪಲೇಶವಿಲ್ಲದ ಆ ಅಯೋಧ್ಯಾ ಭಿಮಾನಿದೇವತೆಯೇ ನಾನಾಗಿರುವೆನು, ಈ ನಾನು - ಕುಬೇರನ ಅಲಕಾ ನಗರವನ್ನೂ, ಇಂದ್ರನ ಅಮರಾವತಿಯನ್ನೂ ತೊರೆದು, ಒಳ್ಳಯರಾಜ ನುಳ್ಳ ದೇಶವೆಂಬ ಹೆಸರುವಾಸಿಯಿಂದ ಉತ್ಸವಗಳ ವೈಭವವನ್ನು ಪಡೆದು, ಸರವಂಶದವನೂ, ಶಕ್ತಿ ಪರಿಪೂರ್ಣನೂ ಆಗಿರುವ ನೀನು ಇದ್ದಾಗ್ಯೂ ಈ ವಿಧವಾದ ಅವಸ್ಥೆಯನ್ನು ಪಡೆದು ಇದ್ದೇನೆ, ನನ್ನ ಮನೆಯಾದ ಪಟ್ಟಿ ಅವು - ಆಳುವದೊರೆಯಿಲ್ಲದುದರಿಂದ - ಬಿರಿದು, ಕಳಲಿ, ಉರುಳ ಲಿಕ್ಕೆ ಬಂದ ನೂರಾರು ಉಪ್ಪರಿಗೆಗಳನ್ನೊಳಗೊಂಡಿರುವುದೂ, ಸಡಿಲವಾಗಿ, ಬಗ್ಗಿ, ಓಲಿರುವ ಕೋಟೆಗೋಡೆಗಳುಳ್ಳುದೂ ಆಗಿ, ಮುಳುಗಲಿಕ್ಕೆ ಬಂದ ಸೂರನ್ನುಳುದೂ, ಬಿರುಗಾಳಿಯಿಂದ ಒಡೆದು ಚೆದರುತ್ತಿರುವ ಮೋಡಗಳುಳ್ಳುದೂ ಆಗಿರುವ ಸಂಚಯ ಹೊತ್ತನ್ನು ಹೋಲುತಲಿದೆ. ನಟ್ಟಿರುಳುಗಳಲ್ಲಿ ಯಾಮಿಕರೆಂಬ ಕಾವ ಲುಗಾರರ ಸಂಚಾರಕ್ಕೆ ಯೋಗಗಳಾಗಿದ್ದ ರಾಜಮಾರ್ಗಗಳು, ಕೊಳ್ಳಿ ಗಳಂತೆ ಹೊಳೆಯುತಲಿರುವ ನಾಲಿಗೆಗಳನ್ನು ನೀಡಿ, ಕೂಗುತ್ತ, ತಿಂಡಿ ಗಾಗಿ ಮಾಂಸವನ್ನು ಹುಡುಕಿಕೊಂಡು ಓಡಿಬರುವ ಹೆಣ್ಣು ನರಿಗಳ ತಿರುಗಾಟಕ್ಕೆ ಅಣಿಯಾಗಿವೆ. ಯಾವತಟ್ಟಣದಲ್ಲಿನ ಕೊಳಗಳ ನೀರು | ನೀರಾಟಗಳ ಸಮಯದಲ್ಲಿ ಪುರಸುಂದರಿಯರ ಕರಗಳಿಂದ ಕಲಕಲ್ಪ ಟ್ಟುದಾಗಿ, ಮನೋಹರವಾದ ಮೃದಂಗ ನಾದವನ್ನು ಅನುಸರಿಸುತಲಿ ದ್ವಿತೋ, ಅಂತಹಜಲವು – ಈಗ ಕಾಡುಕೋಣಗಳಿಂದ ಕಲಕಲ್ಪಡುತ್ತಾ ಗಟ್ಟಿಗೆ ಗೋಳಿಡುವಂತಿದೆ. ಆಸರೆಯಾಗಿದ್ದ ಮರ ಗಿಡಗಳ ಕೊನೆಗೆ ಳೆಲ್ಲ ಹಾಳಾದುದರಿಂದಲೂ, ಮದ್ದಳೆಗಳ ಸದ್ದಿಲ್ಲದೆ ಕುಣಿತವು ತಪ್ಪಿದು ದರಿಂದಲೂ, ಹೂದೋಟಗಳ ಆಟದ, ಊರನವಿಲುಗಳು – ಹಾರಿಬರು ವಾಗ ಕಾಡ್ಡಿಚ್ಚಿಗೆನಿಲುಕಿ, ರೆಕ್ಕೆ ಪುಕ್ಕಗಳೆಲ್ಲ. ನೀದುಹೋಗಲು ಕಾಡು ನವಿಲುಗಳಾಗುತಲಿವೆ, ಮತ್ತು - ಯಾವ ನನ್ನ ಹೊಳಲ ಬಾಗಿಲಿನಲ್ಲಿನ ಸೋಪಾನಗಳಲ್ಲಿ ನಗರನಾರಿಯರು - ಅರಗಿನರಸದಿಂದ ಅಂದವಾಗಿ ಅಲಂ ಕರಿಸಿಕೊಂಡಿದ್ದ ಹೆಜ್ಜೆಗಳನ್ನರಿ ನಡೆಯುತಲಿದ್ದರೋ, ಅಂತಹ ಸೋಚ
ಪುಟ:ರಘುಕುಲ ಚರಿತಂ.djvu/೧೧೩
ಗೋಚರ