ಪುಟ:ರಘುಕುಲ ಚರಿತಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ, ೧೦೭ ವಿ ಟ ೧ S ದಿ. ಗಳಲ್ಲಿ - ಈಗ, ಹುಲಿಗಳು ಹುಲ್ಲೆ ಮರಿಗಳನ್ನಿರಿ ಎಂದು ಅವುಗಳ ಮೃಗ 'ಂದ ಸೋರಿದ ರಕ್ತದಿಂದ ನೆನದ ತಮ್ಮ ಅಡಿಗಳನ್ನಿಟ್ಟುಸಂ ಚರಿಸುತಲಿವೆ. ಇದಲ್ಲದೆ - ಯಾವ ನನ್ನಪುರದ ಅರಮನೆಯ ಗೋಡೆಗಳಮೇಲೆ ಆನೆಗಳು ಎವರೆಯ ಕೊಳಗಳಿಗಿಳಿಯುತ್ತಿರುವಹಾಗೂ, ಆಲೇಖ್ಯಗಳಲ್ಲಿನ ಹೆಣ್ಣಾನೆ ಗಳು ಕಿತ್ತು ಮುರಿದುಕೊಡುವ ತಾವರೆಯ ದಂಟುಗಳನ್ನು ಸೊಂಡಿಲಿನಿಂದ ಪಡೆಯುತ್ತಿರುವಹಾಗೂ, ಚಿತ್ರಿಸಲ್ಪಟ್ಟಿದ್ದು ವೋ, ಅವುಗಳೀಗ, ಪ್ರತ್ಯಕ್ಷ ಾಗಿ ಬಂದು ರೋಷಗೊಂಡ ಸಿಂಹಗಳ ನಖಗಳೆಂಬ ಅಂಕುಶಗಳ ಪಟ್ಟಿ ನಿಂದ ಕುಂಬಸ್ಥಲಗಳನ್ನೊಡೆದುಕೆ.೧ಳ್ಳುತಲಿವೆ. ಆ ರಾಜಭವನದ ಸೈಂಭಗ ಕೆಲ್ಲಿ ಕೆತ್ತಿರುವ ಹೆಣ್ಣು ಗೊಂಬೆಗಳು -ಮೇಲೆಹಚ್ಚಿದ್ದ ಬಣ್ಣಗಳೆಲ್ಲಾ ಹಣರಿ ರೋಗಿ ಮಲಿನಗಳಾಗಿ, ಈಗ ತಮ್ಮ ಮೇಲೆ ಹರಿದಾಡುತಲಿರುವ ಹಾವು 1ಳು ಬಿಟ್ಟ ಪರೆಗಳೆಂಬ ಪಟ್ಟು ಬಟ್ಟೆಗಳನ್ನು ಮೇಲುಹೊದಿಕೆಗಳನ್ನಾಗಿ ಮಾಡಿಕೊಂಡಿವೆ. ಉಪ್ಪರಿಗೆಗಳಮೇಲೆ ಬಳಿದಿದ್ದ ಸುಣ್ಣದ ಹೊಳಪೆ ಕಾಲ ತಶದಿಂದ ತೊಡೆದುಹೋಗಿ, ಅಲ್ಲಲ್ಲಿ ಗರಿಕೆಯಹುಲ್ಲು ಬೆಳೆದು, ಮುತ್ತುಗಳ ರದಂತಿರುವ ಚಂದ್ರಕಿರಣಗಳು ವೂರ್ವದಂತೆಯೇ ಈಗಲೂ ಬೀಳುತ್ತಿ ಕ್ಲರೂ ಪ್ರತಿಫಲಿಸುತಲಿಲ್ಲ, ಮತ್ತು - ಯಾವನನ್ನ ಪುರೋದ್ಯಾನಗಳಲ್ಲಿ ಪುರಸುಂದರಿಯರು - ಎಳೆಬಳ್ಳಿಗಳನ್ನು ಸದಯರಾಗಿ ಮೆಲ್ಲಗೆ ಬಗ್ಗಿಸಿ, ಕೂಗಳನ್ನು ಬಿಡಿಸುತ್ತಲಿದ್ದರೋ, ಅಂತಹ ಕೋಮಲಲತೆಗಳನ್ಸಿಗ ಕಪಿ ಗಳೂ, ಕಾಡು ಬೇಡರೂ ಮುರಿದು ಹಾಳುಮಾಡುತಲಿದಾರೆ, ಇರುಳಿ ರಲ್ಲಿ ದೀವಿಗೆಯ ಬೆಳಕಿಲ್ಲದಿರುವುದರಿಂದಲೂ, ಹಗಲು ಭಾಮಿನಿಯರ ಮುಖಕಾಂತಿಯು ಪಸರಿಸದಿರುವುದರಿಂದಲೂ, ಹೊಗೆಯು ಹೊರಡದಿರು ೨ುದರಿಂದಲೂ, ಗವಾಕ್ಷಗಳು - ಜೇಡರ ಹುಳಗಳ ಗೂಡುಗಳ ದಾದದಿಂದ ರುಚ್ಚಲ್ಪಟ್ಟಿವೆ. ಅರುಗಿನಲ್ಲಿನ ಮಳಲು ಬೈಲಿನಲ್ಲಿ ಪೂಜಾಸಾಮಗ್ರಿಗಳ ಅದೆಯೂ, ಸೀಗೆಯಕಾಯಿ ಪುಡಿಯೇಮೊದಲಾದ ಚೂರ್ಣಗಳ ಸಂಬಂಧ ಇಲ್ಲದೆಯ, ದಡದಲ್ಲಿ ಬರಿದಾಗಿರುವ ಲತಾಗೃಹಗಳ್ಳುಳ್ಳುವಾಗಿಯೂ, ಸಾನ. ಮಾಡತಕ್ಕವರಿಲ್ಲದೆಯೂ ಇರುವ ಸರಯೂ ನದೀಜಲಗಳನ್ನು ನೋಡಿ ತಾನು ಬಹಳ ಸಂಕಟಪಡುತಲಿದೇನೆ. ಆದಕಾರಣ - ಎಲೈಕುವಲಯಪ್ರಿಯನೆ ! ನಿಮ್ಮ ತಂದೆಯಾದ