ಪುಟ:ರಘುಕುಲ ಚರಿತಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦y ಶ್ರೀ ಶಾ ರ ದ . ರಾಮನು ನಿಮಿತ್ತವಶದಿಂದ ಮಾನುಷ ದೇಹವನ್ನು ಬಿಟ್ಟು, ಪರಮಾತ್ಮ ದೇಹವನ್ನು ಹೊಂದಿದ ಹಾಗೆ, ಈಕುಶಾವತಿಯನ್ನು ಬಿಟ್ಟು, ಕುಲರಾ ಜಧಾನಿ ಯೆನಿಸಿರುವ ಅಯೋಧ್ಯೆಯಾದ ನನ್ನನ್ನು ಹೊಂದಲು ತಕ್ಕವನಾ ಗಿದ್ದೀಯೆ ಎಂದಳು. ರಘುಕುಲಾಗ್ರಗಣ್ಯ ನಾದ ಕುಶನು - ಅಕೆಯಯಾಚ ನೆಯನ್ನು ಸಂತೋಷದಿಂದ ಹಾಗೆಯೇ ಆಗಲೆಂದು ಒಪ್ಪಿಕೊಂಡನು. ಮರಿ ಮತಿಯಾಗಿದ್ದ ಅಯೋಧ್ಯೆಯ ಪ್ರಸನ್ನ ಮುಖಳಾಗಿ ಮಾನುಷ ದೇಹವನ್ನು ಬಿಟ್ಟು, ದೈವರೂಪದಿಂದ ಅದೃಶ್ಯಳಾದಳು. ಬೆಳಗಾಯಿತು, ಕುಶನರಸಾಲನು ಎಂದಿನಂತೆ ಸಭೆಗೈತಂದು ಧರಾಸ ನದಲಿ ಕುಳಿತನು, ಸಭಾಸದರೆಲ್ಲ ನೆರದಿದ್ದರು. ಆಗ ಅಲ್ಲಿದ್ದ ಬೃಹವರ ರಿಗೆಲ್ಲ ರಾತ್ರಿ ನಡೆದ ಅದ್ಯತವೃತ್ತಾಂತವನ್ನು ಅರುಹಿದನು, ಅವರು ಕುಲರಾಜ ಧಾನಿಯು ಇದಿರಿಗೆಬಂದು ಪತಿಯಾಗುವಂತೆ ವರಿಸಿದುದನ್ನು ಕೇಳಿ ಬಹಳವಾಗ ಅಭಿನಂದಿಸಿದರು. ಬಳಿಕ ಕುಶನೃಪತಿಯು - ಕುಶಾವತಿಯನ್ನು ಪ್ರೋತ್ರಿಯರಾದ ಬ್ರಾಹ್ಮಣರಿಗಿತ್ತು, ಪ್ರಯಾಣಕ್ಕೆ ಅನುಕೂಲವಾದ ದಿವಸದಲ್ಲಿ ಅಂತಃಪುರ ಸಿಜನರಿಂದ ಸಹಿತನಾಗಿ, ಮೇಘಸಮುದಾಯಗಳಿಂದ ವಾಯುವು ಹೇಗೋ ಹಾಗೆ, ಸೈನ್ಯಗಳಿಂದೊಡಗೂಡಿ, ಅಯೋಧ್ಯಾಭಿಮುಖನಾಗಿ ಹೊ ಹೊರಟನು. ಆಗ - ಧ್ವಜಪಟ್ಟಿಯೆಂಬ ಉಪವನ ಗಳುಳ್ಳುದೂ, ಮಹಾ ಗಜಗಳೆಂಬಆಟದ ಬೆಟ್ಟಗಳುಳ್ಳದೂ, ರಥಗಳೆಂಬಉತ್ತಮಗೃಹಗಳುಳ್ಳುದಾ ಆಗಿರುವ, ಸೇನೆಯು ಆ ರಾಜನನ್ನು ಹಿಂಬಾಲಿಸಿ ನಡೆದು ಬರುತಲಿರುವ ರಾಜಧಾನಿಯಂತೆ ಕಂಗೊಳಿಸುತಲಿದ್ದಿ ತು, ಮತ್ತು – ಬೆಳ್ಕೊಡೆಯನ್ನುಳ ಆ ಪೊಡವಿಯೊಡೆಯನಾಣತಿಯಿಂದ ಪೊರಮಡುತಲಿರುವ ಪಡೆಯು - ಉಡುರಾಜನಿಂದ ತಡಿಗೈದಿಸಲ್ಪಡುವ ಕಡಲಿನಂತೆ ಕಾಣಬರುತಲಿದ್ದಿತು. ಇಂತು ಪಯಣವನ್ನು ಬೆಳಸುತಲಿರುವ ಸೇನೆಯತುಳಿತದ ತೊಂದರೆಯನ್ನು ತಾಳಲಾರದೆ ವಸುಂಧರೆಯು ಎರಡನೆಯ ವಿಷ್ಣು ಪದವನ್ನು ಕುರಿತು ಏರು ಮೂತಿದ್ದಿ ತು, ಮತ್ತು ಆ ದಳವು - ಕುಶಾವತಿಯನ್ನು ಬಿಟ್ಟು ಹೊರಡುತ ಲಿರುವಲ್ಲಿಯ, ನಡುವೆ ನಡೆದು ಬರುವಲ್ಲಿಯ ಮುಂದೆ ಇಳಿಯುತಲಿವ ಇಂದು, ಎಲ್ಲೆಲ್ಲಿ ನೋಡಿದರೂ ನೋಟಕರಿಗೆ ಪರಿಪೂರ್ಣವಾಗಿರುವಂತೆ