ಪುಟ:ರಘುಕುಲ ಚರಿತಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ? ರಘುಕುಲಚರಿತಂ LA • • hm ony •• • • • - ಕಾಣಬರುತಲಿರುವ ರತ್ನಾಕರವನ್ನು ತೋರಿಸಿ, ತನ್ನ ಪ್ರಿಯವಲ್ಲಭ ಯಾದ ಸೀತೆಯನ್ನು ಕುರಿತು ಗುಟ್ಟಾಗಿ ಇಂತೆಂದನು. - .ಎಲೆ ವೈದೇ ಹಿ ! ನಾನು ಕಟ್ಟಿಸಿರುವ ಈ ಸೇತುವೆಯಿಂದವ ಲಯಪರ್ವತದವರೆಗೂ ಎರಡು ಪಾಲಾಗಿ, ಅಲ್ಲಲ್ಲಿ ನೊರೆಯನ್ನೂಳಗೊಂಡಿರುವ ಈ ಕಡಲನ್ನು ನೋಡಿದೆಯ ? ಶರದೃತುವಿನಿಂದ ನಿರ್ಮಲವೆನಿಸಿ, ಛಾಯಾಪಥದಿಂದ ಎರಡು ಭಾಗವಾಗಿ, ಅಲ್ಲಲ್ಲಿ ಅಂದವಾದ ತಾರೆಗಳ ನ್ನೊಳಗೊಂಡಿರುವ ಆಕಾಶಮಂಡಲದಂತೆ ಕಾಣಬರುತಲಿದೆ. ನಮ್ಮ ಪೂರ್ವ ಪಿತೃಗಳಲ್ಲೊ ರ್ವನಾದ ಸಗರಚಕ್ರವರ್ತಿಯು- ಪರಿಶುದ್ಧವಾದ ಅಶ್ವಮೇಧ ಯಾಗ ವನ್ನು ಮಾಡಲಾರಂಭಿಸಿ ತುರಂಗವನ್ನು ಬಿಟ್ಟನು. ಅದನ್ನು ಕವಿಲವು ನಿಯು ರಾತಲವನ್ನು ಸೇರಿದ್ದನು, ಆ ಹಯವನ್ನು ಕಂಡು ಹಿಡಿಯಲು ನಮ್ಮ ಹಿರಿಯರಾದ ಸರಪುತ್ರರು-ಇಲ್ಲಿಯೇ ನೆಲವನ್ನು ಅಗೆದು, ಇದನ್ನು ಹೆಚ್ಚಿಸಿದರಂತೆ, ಅದರಿಂದ ಈ ಸಾಗರವು ನಮಗೆ ಪೂಜ್ಯವಲ್ಲವೆ?ಅರ್ಕಮ ರೀಚಿಗಳು - ಈ ಅಂಬುರಾಶಿಯಿಂದಲೇ ಜಲಮಯವಾದ ಗರ್ಭವನ್ನು ಧರಿಸತಕ್ಕುದು, ಇದರಿಂದಲೇ ಈ ಪಾರಾವಾರವು ಲೋಕೋಪಕಾರಿ ಎನಿಸಿದೆ, ರತ್ನಗಳಲ್ಲಿ ಇದರಲ್ಲಿಯೇ ಬೆಳೆವಳಿಗೆಯನ್ನು ಹೊಂದುವುದು. ತೇಜೋಮಯನಾಗಿ, ಲೋಕಾನಂತಕನೆನಿಸಿರುವ ಚಂದ್ರನೇ ಮೊದ ಲಾದ ಶ್ರೇಷ್ಠ ವಸ್ತುಗಳಿಗೆ ಜನ್ಮಭೂಮಿ. ಆದುದರಿಂದಲೇ ರತ್ನಾಕರ ವೆಂಬ ಹೆಸರುವಾಸಿಯೂ ಬಂದಿದೆ, ಉದಕವೇ ಕಾವ್ಯವಾಗಿರುವ ಅಗ್ನಿ ಯೂ ಇದರಲ್ಲಿ ಅಡಗಿದೆ, ಅಪಕರಿಸಿದರೂ ಆಶ್ರಿತರನ್ನು ತೊರೆಯದಿರುವು ದು ಈ ಶರಧಿಯ ಶ್ಲಾಘ್ರಗುಣವಲ್ಲವೆ ? ನಾನಾ ಆಕಾರಗಳನ್ನು ಪಡೆದಿ ರುವುದರಿಂದಲೂ, ಎಲ್ಲದಿಕ್ಕುಗಳಲ್ಲಿಯೂ ಹರಡಿರುವುದರಿಂದಲೂ, ಮಹಾ ವಿಷ್ಣುವಿನ ಹಾಗೆ, ಈ ಮಹೋದಧಿಯ ರೂಪವನ್ನು ಈ ಪ್ರಕಾರ ವಿರುವುದೆಂದಾಗಲೀ, ಇಷ್ಟ ಪರಿಮಾಣ ವುಳುದೆಂದಾಗಲೀ ಗೊತ್ತು ಮಾಡಲಿಕ್ಕೆ ಸಾಧ್ಯವೇ ಅಲ್ಲ, ಕಲ್ಲಾವಾನದಲ್ಲಿ-ಪುರಾಣ ಪುರುಷನಾದ ನಾರಾಯನು-ಸಕಲ ಲೋಕಗಳನ್ನೂ ತನ್ನಲ್ಲಿ ಅಡಗಿಸಿಕೊಂಡು, ತನ್ನ ಕೇವಲಸ್ವರೂಪವನ್ನು ಅವಲಂಬಿಸುವಿಕೆಯೆಂಬ ಯೋಗನಿದ್ರೆಯನ್ನಾ ಶಯಿಸಿ, ತನ್ನಯ ನಾಭಿಕಮಲದಿಂದುದಿಸಿ, ದಕ್ಷನೇ ಮೊದಲಾದವರಿಗೆ