ಪುಟ:ರಜನೀ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ರಜನಿ AYYA ಮಾತನ್ನು ಎತ್ತಿದೆ ಅಲ್ಲಿ ಮತ್ಯಾರೂ ಇರಲಿಲ್ಲ. ರಜನಿಯ ಹೆಸರು ಕೇಳುತ್ತಲೇ ಹುಡುಗನು ಹಂಸಿಯಹಾಗೆ ಕುತ್ತಿಗೆ ಎತ್ತಿಕೊಂಡು ನನ್ನ ಮುಖವನ್ನು ನೋಡುತ ಲಿರುವನು. ನಾನು ರಜನಿಯ ಪ್ರಸ್ತಾಪವನ್ನು ಮಾಡುತ್ತಿದ್ದರೆ ಯಾವುದಕ್ಕೂ ಅವನು ಉತ್ತರವನ್ನು ಹೇಳಲಿಲ್ಲ. ಆದರೆ ವ್ಯಾಕುಲವಾದ ಕಣ್ಣುಗಳಿಂದ ನನ್ನನ್ನು ನೋಡುತ್ತ ಲಿರುವನು, ಹುಡುಗನು ಬಹಳ ಅಸ್ಥಿರವಾಗುತ್ತ ಬಂದ -ಇಲ್ಲಿ ಬಿದ್ದೇಳುವುದು, ಅಲ್ಲಿ ಬಿದ್ದೇಳುವುದು, ಹೀಗೆ ಮಾಡಲಾರಂಭಿಸಿದನು. ಕಡೆಗೆ ನಾನು ರಜನಿಯನ್ನು ತಿರಸ್ಕಾರ ಮಾಡುತ್ತ ಬಂದೆನು ಅವಳು ಅತ್ಯಂತ ಧನಲುಬ್ಬಳು, ಅವಳು ನಾವು ಮಾಡಿದು ಕಾರಗಳನ್ನು ಸ್ಮರಿಸುವುದು ಕೂಡ ಇಲ್ಲವೆಂದು ಮುಂತಾಗಿ ಹೇಳಿದುದನ್ನು ಕೇಳಿ ಶಚೀಂದ್ರನು ಅಪ್ರಸನ್ನ ಭಾವವುಳ್ಳವನಾದನೆಂದು ತೋರಿತು. ಆದರೆ ಯಾವ ಮಾತೂ ಬಾಯಿ ಬಿಟ್ಟು ಹೇಳಲಿಲ್ಲ. ನಿಶ್ಚಯವಾಗಿ ಇದು ಸನ್ಯಾಸಿಯ ಮಹಿಮೆಯೆಂದು ತಿಳಿದುಕೊಂಡೆನು' ಈಗ ಸನ್ಯಾಸಿಯು ಊರಲ್ಲಿಲ್ಲ. ಅವನು ಬೇಗ ಬರುವುದಾಗಿ ವರ್ಶಮಾನವಿತ್ತು, ಅವನು ಬರುವುದನ್ನು ನಿರೀಕ್ಷಿಸಿಕೊಂಡಿದ್ದೆವು. ಅಲ್ಲದೆ ಅವನು ತಾನೇ ಬಂದು ಮಾಡುವದೇನೆಂತಲ ಯೋಚಿಸಿಕೊಂಡೆನು, ನ ನು ಸಿಬೊFಧಳಾದ ಹೆಂಗಸು. ಧನಲೋಭದಿಂದ ಹಿಂದುವುದು ನೋಡದೆ ನನಗೇ ನಾನೇ ಈ ವಿಪತ್ತನ್ನು ತಲೆಯ ಮೇಲೆ ತಂದಿಟ್ಟು ಕೊಂಡಹಾಗಾಯಿತು ! ಆಗ ರಜನಿಯ ನ್ನು ಸೊಸೆಯಾಗಿ ಮೂಡಿ ಕೊಳ್ಳಬೇಕೆಂದು ಮನಸ್ಸಿನಲ್ಲಿ ಖಂಡಿತ ಮಾಡಿ ಕೊಂಡೆನು. ಅದುತಾನೇ ಹೇಗೆ ಗೊತ್ತು ! ಕುರುಡಿಯಾದ ಹೂವಾಡಗಿತ್ತಿಯ ಕೂಡ ದುರ್ಲಭಳಾದರೆ ಮಾಡುವು ದೇನು ? ಏನು ಆಗುವುದೊ ? ಸನ್ಯಾಸಿಯ ಔಷಧವು ಹಿತದಲ್ಲಿ ವಿಪರೀತಕ್ಕೆ ಇಟ್ಟು ಬಿಟ್ಟರೆ ಮಾಡುವುದೇನು ? ಹೆಂಗಸಿನ ಬುದ್ದಿ ಅತಿ ಅಲ್ಪವಾದುದು ಎಂದು ಗೊತ್ತಿರ ಲಿಲ್ಲ. ನನ್ನ ಬುದ್ಧಿಯ ಅಹಂಕಾರದಿಂದ ನಾನೇ ಮುಣುಗಿದೆ. ನನಗೆ ಇಂತಹ ಬುದ್ದಿಯು ಹುಟ್ಟುವುದಕ್ಕೆ ಮುಂಚೆಯೇ ಪ್ರಾಣ ಹೋಗಿದ್ದರೆ ಚೆನ್ನಾಗಿತ್ತು, ಈಗಲೂ ಪ್ರಾಣಬಿಡುವುದಕ್ಕೆ ಸಿದ್ಧಳಾಗಿದ್ದೇನೆ. ಆದರೆ ಮಗು ಶಚೀಂದ್ರನ ಆರೋಗ್ಯ ಲಾಭವನ್ನು ನೋಡದೆ ಸಾಯಲಾರೆನು, ಕೆಲದಿನಗಳಮೇಲೆ ಪೂರ್ವಪರಿಚಿತನಾದ ಆ ಸನ್ಯಾಸಿಯು ಬಂದು, ಶಚೀಂದ್ರನ ಅನಾರೋಗ್ಯದ ಸಮಾಚಾರವನ್ನು ಕೇಳಿ ಬಂದೆನೆಂದು ಹೇಳಿದನು. ಅವನಿಗೆ ಈ ಸಮಾಚಾರವನ್ನು ಯಾರು ಕೊಟ್ಟರೋ ಗೊತ್ತಾಗಲಿಲ್ಲ.