ಪುಟ:ರಜನೀ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ wwwwwwwwwwwwwwwwwwwwww AYAN ಸ್ವರೂಪವಾಗಿಯೂ ವಾಯ 'ವಿಗೆ ನಾನಿಲ್‌ ಸ್ವರೂಪವಾಗಿಯ , ಅವನ ಆರೋಗ್ಯದಲ್ಲಿ ಸರಸ್ವರೂಪಳಾಗಿಯೂ ಇದ್ದಳು. ಕಣ್ಣುಗಳು ಇಲ್ಲ. ಲಲಿತಲವಂಗತೆಯನ್ನು ನಾನು ಯಾವಾಗಲೂ ನೋಡಿಲ್ಲ. ಆದರೆ ಅವಳು ಸುರೂಪಿಯೆಂದು ಕೇಳಿದ್ದೇನೆ. ರೂಪ ಹೋಗಲಿ ಒಳ್ಳೆ ಗುಣವಂತ ಳೆಂತಲ ಕೇಳಿದ್ದೇನೆ, ಲವಂಗತೆಯು ವಾಸ್ತವಿಕವಾಗಿ ಗುಣವತೀ, ಗೃಹಕಾರ ದಲ್ಲಿ ನಿಪುಣಳು, ದಾನದಲ್ಲಿ ಮುಕ್ತ ಹಸ್ತಳು, ಹೃದಯದಲ್ಲಿ ಸರಳತೆ ಮಾತಿನಲ್ಲಿ ಮಾತ್ರ ವಿಷಮಯ ಅವಳ ಎಲ್ಲಾ ಗುಣಗಳಿಗಿಂತಲೂ ಹೆಚ್ಚಾದುದು ಏನೆಂದರೆ; ಆ ವಯಸ್ಸಾದ ಗಂಡನಲ್ಲಿ ಅತ್ಯಂತವಾದ ಪತಿಭಕ್ತಳು. ಯಾವ ಯೌವನಸ್ಥಳೂ ಕೂಡ ಎಂತಹ ಯುವಕನಾದ ಸೌಂದರನಂದ ಸ್ವಾಮಿಯಲ್ಲಿಯೂ ಅಷ್ಟು ಭಕ್ತಿಯು ಳ್ಳವಳಾಗಿರಳು, ಆ ಮನೆ ಉಪಚಾರಗಳನ್ನೆಲ್ಲ ಸ್ವಂತವಾಗಿ ಮಾಡುವಳು. ಗಂಡನು ಅಂಚು ಇಲ್ಲದ ಧೋತ್ರವನ್ನುಟ್ಟು ಕೊಂಡರೆ ಅದನ್ನು ಕೂಡದೆಂದು ಹೇಳಿ ಭಾರಿ ಧೋತ್ರಗಳನ್ನು ಆಗಸುಗೆ ಹಾಕಿ, ತಾನೇ ಸ್ವಂತವಾಗಿ ಒಗೆದು ಅದನ್ನು ಟ್ಟು ಕೆಳ ಬೇಕೆಂದು ಉಟ್ಟುಕೊಳ್ಳುವ ಹಾಗೆ ಮಾಡಿ, ಆ ಅಂಚಿಲ್ಲದ ವಸ್ತ್ರಗಳನ್ನು ದರಿದ್ರರಾ ದವರಿಗೆ ಕೊಟ್ಟು ಬಿಡುವಳು. ಬಲವಂತದಿ:ದ ಸುಗಂಧವಾದ ಅತ್ತರುಗಳನ್ನು ಹಚ್ಚು ವಳು, ಗಂಡನ ಸುಲೋಚನಗನ್ನು ಅಸಿಗೆ ತಿಳಿಯದೆ ತೆಗೆದುಕೊಂಡು ಒಡದುಹಾ ಕಿಬಿಟ್ಟು ಅದರ ಭಂಗಾರದ ಕಟ್ಟಗಳನ್ನು ಯಾರಿಗಾದರೂ ಮದುವೆಗೆ ಕೊಟ್ಟು ಬಿಡು ವಳು. ಯಾವಾಗಲೂ ಅವನ ಸುಖಕ್ಕೆ ಅನುಕೂಲಳಾಗಿದ್ದಳು. ಲವಂಗತೆಯು ನಮ್ಮಲ್ಲಿ ಹೂವನ್ನು ತೆಗೆದುಕೊಳ್ಳುವಳು, ನಾಲ್ಕಾಣೆ ಬಾಳುವ ಹೂವನ್ನು ತೆಗೆದುಕೊಂಡು ಎರಡು ರೂಪಾಯಿ ಕೊಡುವಳು. ಏತಕ್ಕೆ೦ದರೆ, ನಾನು ಕಣ್ಣಿಲ್ಲದವಳಾಗಿದ್ದೆ. ನನಗೆ ಉಪಕಾರವಾಗಲೆಂದು ಕೊಡುವಳು. ಆದರೆ ಹೂವನ್ನು ಕೈಗೆ ಕೊಟ್ಟ ಕೂಡಲೇ ಇಂತಹ ಕೆಟ್ಟ ಮಾಲೆ ಗಳನ್ನು ಏತಕ್ಕೆ ತಂದೆ ಎಂದು ಗದರಿಸಿಕೊಳ್ಳುವರು. ದುಡ್ಡು ಕೊಡುವಾಗ ಮಾತ್ರ ಬೇಕೆಂದು ಆರು ಕಾಸಿನ ಬಿಲ್ಲೆಗೆ ಳೊಂದಿಗೆ ರೂಪಾಯಿಗಳನ್ನು ಕೊಟ್ಟು ಬಿಡುವಳ. ರೂಪಾಯಿ ಹಿಂದಕ್ಕೆ ಕೊಡು ವುದಕ್ಕೆ ಹೋದರೆ ಅದು ತನ್ನ ದಲ್ಲ ಎಂದು ಹೇಳಿಬಿಡುವಳು. ಇನ್ನೊಂದುತಡವೆ ಒತ್ತಿ ಹೇಳಿದರೆ ಬೈದು ಓಡಿಸಿಬಿಡುವಳು. ಅವಳನ್ನು ಧರ್ಮಿಷ್ಟಳೆಂದು ಹೊಗಳಿದರೆ ಹೊಡಿ ಯುವುದಕ್ಕೆ ಬರುವಳು ವಾಸ್ತವವಾಗಿ ರಾಮಸದಯನ ಮನೆ ಇಲ್ಲದಿದ್ದರೆ ನಮ್ಮ ಕಾಲಕ್ಷೇಪ ನಡೆಯುವುದು ಬಹು ಕಷ್ಟವಾಗುತಲಿತ್ತು. ಆದರೂ ನಮ್ಮ ತಾಯಿಯು ಅವಳಿಂದ ಹೆಚ್ಚು ತೆಗೆದುಕೊಳ್ಳುತ್ತಿರಲಿಲ್ಲ. ನಮಗೆ ಕಾಲಕ್ಷೇಪವಾದರೆ ಅದರಿಂದ