ಪುಟ:ರಜನೀ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ NAMMಂ ಆಗ ಲಜ್ಜೆಗೆ ತರ್ಪಣವನ್ನು ಕೊಟ್ಟು ತಾಯಿಯ ಕಾಲುಗಳ ಮೇಲೆ ಅಡ್ಡ ವಾಗಿ ಬಿದ್ದು ಅಳುವುದಕ್ಕೆ ತೊಡಗಿದೆನು, ಕೈ ಮುಗಿದುಕೊಂಡು, ನನಗೆ ಮದುವೆ ಮಾಡಬೇಡ, ನಾನು ಹೀಗೆಯೇ ಮುದಿಯಾಗುವೆನೆಂದು ಹೇಳಿಕೊಂಡೆನು. ತಾಯಿಯು ವಿಸ್ಮಿತಳಾಗಿ ಏತಕ್ಕೆ ? ಎಂದು ಕೇಳಿದಳು. ಏತಕ್ಕೆ ? ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಲಾರದೆ ಹೋದೆನು, ಸುಮ್ಮನೆ ಕೈ ಮುಗಿದುಕೊಂಡು ಸುಮ್ಮನೆ ಅಳುತ್ತಿದ್ದನು. ತಾಯಿಯು ವಿರಕ್ತಳಾಗಿ ಕೋಪಗೊಂಡು ಬೈದಳು. ಕಡೆಗೆ ತಂದೆಗೆ ಹೇಳಿಬಿಟ್ಟಳು, ತಂದೆಯೂ ಬೈದು ಹೊಡಿಯುವುದಕ್ಕೆ ಬಂದನು. ಏನೇನೂ ಹೇಳಲಾರದ ಹೋದೆ, ಉಪಾಯವಿಲ್ಲ : ನಿಷ್ಮತಿಯಿಲ್ಲ ! ಮುಣುಗಿದೆ ! ಆ ದಿನ ಸಾಯಂಕಾಲ ಮನೆಯಲ್ಲಿ ನಾನೊಬ್ಬಳೇ ಇದ್ದೆ. ತಂದೆಯು ಮದುವೆ ಖರ್ಚಿಗೆ ಹಣವನ್ನೊದಗಿಸಲು ಹೊರಗೆ ಹೋಗಿದ್ದನು. ತಾಯಿಯ ಬೇಕಾದ ಸಾಮಾನುಗಳನ್ನು ತರುವುದಕ್ಕೆ ಹೋಗಿದ್ದಳು. ಆ ವೇಳೆಯಲ್ಲಿ ಮನೆಯ ಬಾಗಲನ್ನು ಸುಮ್ಮನೆ ಮುಚ್ಚಿದ್ದೆನು. ವಾಮಾಚರಣನು ನನ್ನ ಸಂಗಡ ಇರುತ್ತಿದ್ದನು. ಯಾರೋ ಒಬ್ಬರು ಬಾಗಲು ತಳ್ಳಿ ಕೊಂಡು ಒಳಗೆ ಬಂದರು. ನನಗೆ ಗೊತ್ತಿದ್ದ ಕಾಲುಶಬ್ದವಾ ಗಿರಲಿಲ್ಲ. ಯಾರಮ್ಮ ? ಎಂದು ಕೇಳಿದೆ. ಉತ್ತರ-ನಿನ್ನ ಯಮ. ಮಾತೇನೋ ಕೋಪಯುಕ್ತವಾದ ಮಾತಾಗಿತ್ತು, ಆದರೆ ಧ್ವನಿಯಲ್ಲಿ ಸ್ತ್ರೀ ಕಂಠವಾಗಿತ್ತು. ನಾನು ಭಯಪಡಲಿಲ್ಲ. ನಕ್ಕು, ನನ್ನ ಯಮ ಯಾರು ಇದ್ದಾನೆ ? ಹಾಗಿದ್ದರೆ ಇಷ್ಟು ದಿನವೆಲ್ಲಿದೆ ? ಎಂದೆನು. ಹೆಂಗಸಿಗೆ ಕೋಪವು ಶಾಂತವಾಗಲಿಲ್ಲ, ಅವಳು, ಈಗ ಗೊತ್ತಾಗಿ ತಿಳಿಯುವೆ, ದೊಡ್ಡ ಮದುವೆಯ ಗದ್ದಲ ! ಕೆಟ್ಟ ಮೋರೆಯವಳೆ ! ದುರ್ಭಾಗ್ಯಳೆ ! ಎಂದು ಮುಂತಾಗಿ ಬೈಗಳ ಪರಂಪರೆಗೆ ಪ್ರಾರಂಭಿಸಿದಳು. ಬೈಗಳು ಸಮಾಪ್ತವಾದ ಮೇಲೆ ಆ ಮಧುರಭಾಷಿಯು ನೋಡೆ ! ಕುರುಡಿ ! ನನ್ನ ಗಂಡನಿಗೆ ಮದುವೆಯಾದೆಯೋ, ಮದುವೆಯಾಗಿ ಯಾವ ದಿನ ನಮ್ಮ ಮನೆಗೆ ಬರುವೆಯೋ, ಆ ದಿನವೇ ನಿನಗೆ ವಿಷ ವನ್ನು ತಿನ್ನಿಸಿ ಕೊಂದುಹಾಕುತ್ತೇನೆಂದಳು. - ಸ್ವಯಂ ಚಂಪಾ ಎಂದು ಗೊತ್ತಾಯಿತು. ಆದರದಿಂದ ಕೂಡಮ್ಮ ಎಂದು ಹೇಳಿದೆ. ಹೇಳಿ, ಕೇಳಮ್ಮ, ನಿನ್ನ ಸಂಗಡ ಮಾತನಾಡುವದುಂಟೆಂದು ಹೇಳಿದೆ. ಅಷ್ಟು ಬೈಗಳಿಗೆ ಪ್ರತಿಯಾಗಿ ಆದರದಿಂದ ಮಾತನಾಡಿದ್ದನ್ನು ಕೇಳಿ ಚಂಪಳು ಸ್ವಲ್ಪ ಶೀತಳ ಮಾಗಿ ಕುಳಿತುಕೊಂಡಳು,