ಪುಟ:ರಜನೀ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ ತಿರುವಾಗ ದಾರಿಯಲ್ಲಿ ಬಿರುಗಾಳಿ ಎದ್ದು ಸರಿವಾರವಾಗಿ ನೌಕದೊಂದಿಗೆ ಜಲಮಗ್ರ ನಾದನೆಂದು ತಿಳಿಯಬಂತು. ಅವನ ಉತ್ತರಾಧಿಕಾರಿಗಳಿರುವುದು ಗೊತ್ತಾಗಲಿಲ್ಲ. ವಿಷ್ಣು ರಾಮಬಾಬುವು ಇದರ ನಿಜತ್ವಕ್ಕೆ ಬೇಕಾದ ರುಜುವಾತಗಳನ್ನು ಒದಗಿಸಿ ಕೊಂಡು ರಾಮಸದಯನಿಗೆ ತಿಳಿಸಿದನು. ಆಗ ವಾ೦ಛಾರಾಮನ ಆಸ್ತಿಯು ಶಚೀಂದ್ರ ಮತ್ತು ಅವನ್ನ ಅಣ್ಣ ಇವರಿಬ್ಬರಿಗೆ ಬಂತು. ವಿಷ್ಣು ರಾಮಬಾಬು ಆಸ್ತಿಯನ್ನೆಲ್ಲಾ ಅವರಿಗೆ ಒಪ್ಪಿಸಿದನು. * ಈಗ ರಜಿನಿಯು ಬದುಕಿದ್ದರೆ ರಾಮಸದಯನು ಅನುಭವಿಸುವ ಆಸ್ತಿಯು ಅವಳದಾಗುವುದು, ರಜನಿಯು ಅತ್ಯಂತ ದರಿದ್ರಾವಸೆಯಲ್ಲಿದ್ದಾಳೆ. ಹುಡುಕಿ ಪತ್ತೆ ಹಚ್ಚಬೇಕು. ನನಗೆ ಬೇರೆ ಕೆಲಸವಿಲ್ಲ. - ~ ಆರನೆಯ ಪರಿಚ್ಛೇದ. ಬಂಗಾಳಗೆ ಬಂದಮೇಲೆ ಒಂದು ಗ್ರಾಮದಲ್ಲಿ ನಮ್ಮ ನೆಂಟರು ಔತನಹೇಳಿ ದ್ದರು ; ಅಲ್ಲಿಗೆ ಹೋಗಿದ್ದೆ. ಪ್ರಾತಃಕಾಲದಲ್ಲಿ ಊರು ತಿರುಗಿಕೊಂಡು ಬರೋಣ ವೆಂದು ಹೊರಟೆನು. ಒಂದು ಸ್ಥಳದಲ್ಲಿ ಅತಿ ಮನೋಹರವಾದ ನಿವೃತವಾದ ಕಾಡು, ಪಕ್ಷಿಗಳು ಸಪ್ತ ಸ್ವರಗಳನ್ನು ಸೇರಿಸಿ ಆಶ್ಚದ್ಯವಾಗಿ ಹಾಡುತಲಿದ್ದವು. ನಾಲ್ಕು ದಿಕ್ಕು ಗಳಲ್ಲಿಯೂ ವೃಕ್ಷರಾಜಿ ; ಮರಗಳು ದಟ್ಟವಾಗಿ ಬೆಳದು ಕೋಮಲತರವಾದ ಶ್ಯಾಮಲ ವರ್ಣದ ಪಲ್ಲವಗಳಿಂದ ಮರೆಮಾಡಲ್ಪಟ್ಟಿದ್ದವು. ಮರದೆಲೆಗಳು ಒಂದಕ್ಕೊಂದು ದಳದುಕೊಂಡು ಏಕಾಕಾರವಾಗಿ ಶ್ಯಾಮರೂಪವುಳ್ಳ ರಾಶಿರಾಶಿಯಾಗಿ ಕಣ್ಣಳಿಸುತ ಲಿದ್ದವು. ಒಂದೊಂದು ಕಡೆಯಲ್ಲಿ ಹೂ ಮೊಗ್ಗುಗಳು ; ಒಂದೊಂದು ಕಡೆಯಲ್ಲಿ ಸುಟಿತವಾದ ಪುಷ್ಪಗಳು ; ಒಂದೊಂದು ಕಡೆಯಲ್ಲಿ ಪಕ್ವವಾದ ಮತ್ತು ಅಪಕ್ವವಾದ ಫಲಗಳು, ಆ ವನ ಮಧ್ಯದಲ್ಲಿ ಯಾರೋ ಆರ್ತನಾದವನ್ನು ಮಾಡುತಲಿದ್ದ ಹಾಗೆ ಕೇಳಿಸಿತು. ಕೇಳಿ ಆ ವನದೊಳಗೆ ಪ್ರವೇಶಿಸಿ ನೋಡಲಾಗಿ ಒಬ್ಬ ವಿಕಟಾಕಾರವುಳ್ಳ ಪುರುಷನು ಒಬ್ಬ ಯುವತಿಯನ್ನು ಆಕ್ರಮಣಮಾಡುತಲಿದ್ದುದನ್ನು ನೋಡಿದೆನು, ನೋಡಿದ ಕೂಡಲೇ ಪುರುಷನು ಅತಿ ನೀಚ ಜಾತಿಯವನಾದ ಪಾಷಂಡನಾಗಿ ಕಂಡಿತು. ಅವನು ಹೊಲೆಯನೋ ಮಾದಿಗನೂ ಆಗಿರಬಹುದೆಂದು ತೋರಿಸು ಸೊಂಟದಲ್ಲಿ ಒಂದು ಮಚ್ಚು ಕತ್ತಿ ಇತ್ತು. ಅತ್ಯಂತ ಬಲಶಾಲಿಯಾಗಿ ಕಂಡನು