ಪುಟ:ರಜನೀ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32

MAAnnMwnwnwantanAMMA 9 ಕಜಚಂದ್ರನು ವಿಸ್ಮಿತನಾಗಿ ರಜನಿಗೆ ಅಂತಹ ನದಿಯಲ್ಲಿ ಬಿದ್ದು ಸಾಯ ಬೇಕೆಂಬ ದುಃಖ ಯಾವದೂ ನಾನರಿಯೆ. ಅವಳು ಅಂಧಳು, ಅದೇನೋ ಹೆಚ್ಚು ದುಃಖವೇ ಹೌದು. ಆದರೆ ಅದಕ್ಕೋಸ್ಕರ ಇಷ್ಟು ದಿನಗಳಮೇಲೆ ನದಿಯಲ್ಲಿ ಬಿದ್ದು Mಯುವುದಕ್ಕೆ ಏತಕ್ಕೆ ಹೋದಾಳು ? ಇಷ್ಟು ದೊಡ್ಡವಳಾದರೂ ಮದುವೆಯಾಗ ಲಿಲ್ಲ ವಂದೇನಾದರೂ ಇರಬಹುದೆನ್ನುವುದಕ್ಕೆ ಅದಿರಲಾರದು. ವಿವಾಹವಾಗುವುದ ಇಲ್ಲ ನಿಷ್ಕರ್ಷೆ ಮಾಡಿದ್ದೆ. ವಿವಾಹವಾಗುವುದಕ್ಕೆ ಹಿಂದಿನ ರಾತ್ರಿಯಲ್ಲಿಯೇ ಎಲ್ಲಿಯೋ ಓಡಿಹೋದಳು. ನನಗೆ ಇದೊಂದು ಹೊಸ ಸಮಾಚಾರ ತಿಳಿದಹಾಗಾಯಿತು. ಆ ಮಾತು ಕೇಳಿ, ಅವಳು ಓಡಿ ಹೋದಳೆ ? ಎಂದು ಪುನಃ ಕೇಳಿದೆನು, ರಾಜ-ಹೌದು. ನಾನು ನಿನಗೆ ಹೇಳದೆ ಓಡಿಹೋದಳೆ ? ರಾಜ ಯಾರಿಗೂ ಹೇಳದೆ ಹೋದಳು. ನಾನು-ಗೊತ್ತಾಗಿದ್ದ ವರನು ಯಾರು ? ರಾಜ-ಗೋಪಾಲಬಾಬು. ನಾನು-ಗೋಪಾಲಬಾಬು ಯಾರು, ಚಂಪಾ ಗಂಡನೆ ? ರಾಜ-ನಿನಗೆ ಎಲ್ಲಾ ಗೊತ್ತು. ಅವನೇ ಹೌದು. ನನಗೆ ಒಂದು ಬೆಳಕು ಹರಿದಹಾಗಾಯಿತು. ಹಾಗಿದ್ದರೆ ಚಂಪಳು ಸವತಿ ಭಯದಿಂದ ರಜನಿಯನ್ನು ವಂಚಿಸಿ ತಮ್ಮನನ್ನ ಸಂಗಡಿಟ್ಟು ಹೋಗಲಿಗೆ ಕಳುಹಿಸಿರ ಬೇಕು. ಅಕ್ಕನ ಹೇಳಿಕೆ ಪ್ರಕಾರ ಹೀರಾಲಾಲನು ರಜನಿಯ ನಾಶಕ್ಕೆ ಪ್ರಯತ್ನ ಪಟ್ಟರ ಬಹುದೆಂದು ತೋರ. ತೃದೆ. ಇದು ಯಾವದನ್ನು ಹೇಳದೆ ರಾಜಚಂದ್ರನನ್ನು ಕುರಿತು ನಾನು ಎಲ್ಲಾ ಬಲ್ಲ, ನನಗೆ ಇನ್ನೂ ಕೆಲ ಸಂಗತಿಗಳು ಗೊತ್ತುಂಟು. ಅದನ್ನು ಮರೆಮಾಚಬೇಡ ವೆಂದು ಹೇಳಿದನು. ರಾಜ-ಏನು ? ಹೇಳಬಹುದು ! ನಾನು-ರಜನಿಯು ನಿನ್ನ ಮಗಳಲ್ಲ.