ಪುಟ:ರಜನೀ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಭಾಗ, ಎಲ್ಲಶ ಹೇಳಿ, ಮೊದಲನೆಯ ಪರಿಚ್ಛೇದ. ಲವಂಗತೆಯ ಹೇಳಿಕೆ. ಬಹಳ ಗದ್ದಲಕ್ಕಿಟ್ಟಿತು. ನಾನು ಸನ್ಯಾಸಿಯ ಕೈಕಾಲು ಕಟ್ಟಿಕೊಂಡು ಅತ್ಯ ಕರದು, ಶಚೀಂದ್ರವನ್ನು ರಜನಿಗೆ ವಶೀಭೂತನಾಗುವ ಉಪಾಯವನ್ನು ಮಾಡುತ್ತೇನೆ, ಸನ್ಯಾಸಿಯು ತಂತ್ರಸಿದ್ದನು ; ಅವನು ಜಗದಂಬೆಯ ಕೃಪೆಯಿಂದ, ಮನಸ್ಸಿಗೆ ಬಂದುದ ನ್ನೆಲ್ಲಾ ಮಾಡಬಲ್ಲವನಾಗಿದ್ದಾನೆ : ಯಜಮಾನರು ಅಷ್ಟು ದೊಡ್ಡವರಾಗಿದ್ದರೂ ಈ ಪಾಮರಿಯಾದ ನನಗೆ ವಶೀಭೂತರ ಗಿದ್ದಾರೆ ; ಅದು ನನ್ನ ಗುಣಗಳಿ೦ದಲೋ ಅಥವಾ ಸನ್ಯಾಸಿಯ ಮಹಾತ್ಮದಿಂದಲೆ ಹೇಳುವುದಕ್ಕೆ ಕಷ್ಟವಾಗಿದೆ. ನಾನೂ ಯಮನೋವಾಕ್ಯಗಳಿಂದ ವತಿಪಾದಗಳ ಸೇವೆಯಲ್ಲಿ ಸ್ವಲ್ಪವೂ ಕಡಮೆ ಮಾಡದೆ ಅದೇ ಸೇವಾತತ್ಪರಳಾಗಿದ್ದೇನೆ. ಸನ್ಯಾಸಿಯಕೂಡ ನನಗೋಸ್ಕರ ಯಾಗ ಯಜ್ಞ, ಮಂತ್ರ, ತಂತ್ರಗಳನ್ನು ಮಾಡುವುದರಲ್ಲಿ ಕಡಿಮೆ ಮಾಡಿಲ್ಲ. ಅವನು ಯಾರಿ ಗೋಸ್ಕರ ಏನು ಮಾಡಿದರೂ ಸಫಲವಾಗಿಯೇ ಇದೆ, ಕಾಮಾಕ್ಷಮ್ಮನ ಸೊಸೆಯು ಉಕ್ಕಿನ ತುಂಡಾಗಿ ಕಲ್ಲುಗುಂಡಿನಹಾಗೆ ಮೊಂಡಿಯಾಗಿದ್ದವಳನ್ನು ಚೆಕ್ಕ ಬಂಗಾರದ ಬೊಂಬೆಯಹಾಗೆ ಮಾಡಿದ್ದಾನೆ, ಅವನ ಕೈಯಲ್ಲಿ ಆಗದಿರುವುದು ಯಾವದು ತಾನೇ ಉಂಟು ? ಅವನ ಮಂತ್ಷಧಗಳ ಸಾಮರ್ಥ್ಯದಿಂದ ಶಚೀಂದ್ರನು ರಜನಿಯಲ್ಲಿ ಅನುರಾ ಗವುಳ್ಳವನಾಗುವುನಲ್ಲದೆ ರಜನಿಯನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಆಕೆಯುಳ್ಳವ ನಾಗುವುನು, ಅದಕ್ಕೆ ಸಂದೇಹವಿಲ್ಲ. ಆದರೆ ಗದ್ದಲವು ಇನ್ನೂ ತಪ್ಪಿಲ್ಲ. ಅಮರನಾ ಥನು ಗದ್ದಲವನ್ನು ಹಚ್ಚತಾನೆ. ಅಮರನಾಥನೇ ರಜನಿಯನ್ನು ವಿವಾಹ ಮಾಡಿಕೊ ಳ್ಳುವುದಾಗಿ ಕೇಳಿದೆ ಅದು ಆಗಲೇ ನಿಷ್ಕರ್ಷೆಯಾಗಿದೆಯೆಂತಲೂ ಕೇಳಿದೆ. - ರಜನಿಯ ಚಿಕ್ಕಪ್ಪ ಚಿಕ್ಕಮ್ಮಂದಿರಾದ ರಾಜಚಂದ್ರ ಅವನ ಹೆಂಡತಿ ಇವರೆಲ್ಲಾ ನಮ್ಮ ಕಡೆಗೆ ಇದ್ದಾರೆ ; ಏತಕ್ಕೆಂದರೆ, ಅವರಿಗೆ ಯಜಮಾನರು ವಿವಾಹವಾದರೆ ನಿಮ್ಮ ಗೇನಾದರೂ ಉಡುಗೊರೆ ಕೊಡುತ್ತೇವೆಂದು ಹೇಳಿದ್ದಾರೆ. ಹೆಣ್ಣಿನ ಕಡೆಯವರಿಗೇನೋ ಕೈಬೆ ಚೊಗೆಮಾಡುವೆವು. ಆದರೂ ನೂರಾರು ಅಡ್ಡಿಗಳು ಅಡ್ಡವಾಗಿವೆ. ಹೆಣ್ಣಿನ ಕಡೆಯವರು ನಮ್ಮ ಕಡೆಯಾದರೂ ಏನೂ ಸಫಲವಾಗುವಹಾಗಿಲ್ಲ, ಅಮರನಾಥನು ಬಿಡುವಹಾ