(ತೆರೆಯಲ್ಲಿ ) ಯಾರು ಮಾತನಾಡುತ್ತಿರುವವರು? ಯುವಾನನೇ
ರಮಾನಂದನೇ ? ಬೇಗ ಹೇಳಿರಿ.!
ಯುವಾನ:- ಯಾರದು ? ಸುಮುಖನೇ ಬಾ, ಬಾ, ಇಲ್ಲಿರುವೆವು; ಬೇಗ ಬಾ.
5'.
ಸುಮುಖ:- (ಮುಂದೆ ಬಂದು ) ಯುವಾನವೇ | ಮೊದಲು ಹೇಳು, ಕುಮಾರನೆಲ್ಲಿರುವನು ?
ರಮಾನಂದ:-(ಮುಂದೆ ಬಂದು ಕೈಹಿಡಿದು) ಸುಮುಖ ನಾನು ಇಲ್ಲಿಯೇ ಇರುವೆನು. ಇದೇಕಿಷ್ಟು ಭಯಪಟ್ಟಿರುವೆ ಹೇಳು ?
ಸುಮುಖ: ~ (ಬಳಲಿಕೆಯಿಂದ) ಕುಮಾರ ಹೇಳುವುದೇನು ? 10 ಕುಹಕರ ಕೃತ್ರಿಮಕ್ಕೆ ಈಗ ನಾವೆಲ್ಲರೂ ಪಕ್ಕಾಗಿ ನರಲುವಂತಾಗಿದೆ.
ಎಲ್ಲರ ಮಾತೂ ಹಾಗಿರಲಿ, ದೇವರು ನಿನ್ನನ್ನು ಈ ಸಂಕಟದಿಂದ ಪಾರಾಗಿಸಬಲ್ಲ ನಾದರೆ ಸಾಕಾಗಿದೆ.
ರಮಾ:- ಭಕ್ತವತ್ಸಲನಾದ ಭಗವಂತನಲ್ಲಿ ಭರವಸೆಯಿಟ್ಟಿದ್ದರೆ ಕೇಡೆಂದಿಗೂ ಆಗುವದಿಲ್ಲ. ಬ೦ದುದೆಲ್ಲವೂಬರಲಿ; ಗೋವಿಂದನ ದಯೆಯೊಂದಿರಲಿ! ” ಎಂಬ ನಾಣ್ಣುಡಿ ತಪ್ಪೇನು? ಮೊದಲು
ವಿಚಾರವೇನೆಂಬುದನ್ನು ತಿಳಿಯಹೇಳು, ಈ ವರೆಗೂ ನೀನೆಲ್ಲಿಗೆ ಹೋಗಿದ್ದೆ ?
ಸುಮುಖ:- ನಾನು ಎಲ್ಲಿಗೂ ಹೋಗಿರಲಿಲ್ಲ. ಗುರುಗಳು. ಆಗ್ರಹಯುಕ್ತರಾಗಿ ನಡೆಸಿದುದನ್ನೂ ಅಲ್ಲಿಂದ ಬಂದವರು ಪತ್ನಿಯಲ್ಲಿ 20 ಹೇಳಿದುದನ್ನೂ ಮತ್ತು ರವಿವರ್ಮಾದಿಗಳು ಹಾರಾಡುತ್ತ ಮಧುಕರಿಯ ಮನೆಗೆ ಹೋದುದನ್ನೂ ಎಲ್ಲವನ್ನೂ ನೋಡಿದೆನು, ಮತ್ತು ಗುರುಪತ್ನಿಯವರು ಬರಹೇಳಿದ್ದುದರಿಂದ ಅಲ್ಲಿಗೂ ಹೋಗಿದ್ದೆನು.
ರಮಾನಂದ:- ಮತ್ತೇನು ವಿಚಾರ |
ಸುಮುಖ:- ಹೇಳುವುದೇನು ? ನಿನ್ನ ಹೆಸರಿನಲ್ಲಿ ಮಧುಕರಿಗೆ ಬರೆದ ಕಾಗದಗಳೂ, ಮಧುಕರಿಯಿಂದ ನಿನ್ನ ಹೆಸರಿಗೆ ಬರೆಯ
ಪುಟ:ರಮಾನಂದ.djvu/೧೦೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೮
ಸತೀಹಿತೈಷಿಣೀ