ಯಾಗಿ ಬಂದರೆ, ನನಗೆ ಮತ್ತೂ ಸಮಾಧಾನವಾಗಬಹುದಾದರೂ, ಅವರ ಅಭಿಪ್ರಾಯವನ್ನು ತಿಳಿಯದೆ ನಡೆಯಲು ಹಿಂತೆಗೆಯಬೇಕಾಗಿದೆ.
ಸೌಮ್ಯ :- ನೀನೊಬ್ಬನೇ ಹೋಗಿ ನೋಡಿ ಬರುವುದು ಮೇಲು, ನಾವಿಬ್ಬರೂ ಮಂದಿರದಲ್ಲಿರುವೆವ, ನೀನೂ ಬೇಗ ಬಂದು ಮಂದಿರದಲ್ಲಿ ನಮ್ಮನ್ನು ಮತ್ತೆ ನೋಡುವೆಯು ಹೈ ?
ರಮಾ:- ಅದನ್ನೂ ಹೇಳಬೇಕೇ? ಇನ್ನು ನಡೆಯಿರಿ.
(ಮೂವರೂ ಹೊರಟುಹೋಗುವರು.)
ಸ್ನಾನ ೨:- ಗುರುವಿನ ಮನೆಯ ಅಂಗಳ
(ಚಿಂತಾಸಕ್ತಳಾದ ಗುರುಪತ್ನಿಯು, ಸತ್ಯಸೇನನೊಡನೆ ಮಾತನಾಡುತ್ತಿರುವಳು.)
ಗುರು ಪತ್ನಿ :- ಸತ್ಯ ಸೇನ! ನೀನೂ ನೋಡಿದೆಯಾ? ನಿಜವಾಗಿ ಹೆಂಗಸು ಬಂದಿದ್ದಳೇ?
ಸತ್ಯ:-ತಾಯಿ! ನಾನೇಕೆ ಸುಳ್ಳು ಹೇಳಲಿ? ಆದರೆ ಆ ಹೆಂಗಸು ಇ೦ಥವಳೆಂಬುದನ್ನು ಮಾತ್ರ ಗೊತ್ತು ಹಿಡಿಯಲಿಲ್ಲ. ಹೇಗೂ ಸ್ತ್ರೀ ವ್ಯಕ್ತಿ ನಿಂತಿದ್ದುದನ್ನು ನೋಡಿದೆನು; ಅಷ್ಟೇ.
ಗುರುಪತ್ನಿ:- ಹಾಗಾದರೆ, ಈಗಲೂ ಆತನು ತೋಟದಲ್ಲಿಯೇ ಇರುತ್ತಾನೊ?
ಸತ್ಯ:- ಇದ್ದರೂ ಇರಬಹುದು, ಆದರೆ ಈಗ ಆತನು ತನ್ನ ಸಹಚರರೊಡನೆ ಸೇರಿರಬಹುದೆಂದು ಯೋಚಿಸುತ್ತೇನೆ. ಏಕೆಂದರೆ, ಸೌಮ್ಯನು ನನ್ನಿಂದ ಆತನಿರುವ ಸ್ಥಳವನ್ನು ತಿಳಿದು ಅಲ್ಲಿಗೆ ಹೋದನು.
ಗುರುಪತ್ನಿ :- ದೇವರಚಿತ ! ರಮಾನಂದನೆಂದರೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗೂ ಹೆಚ್ಚಾಗಿದ್ದನು. ಅ೦ಥವನು ಈ ಕೆಟ್ಟ ನಡತೆಗೆ ಬಿದ್ದನೆಂದರೆ ನಾನು ಹೇಗೆ ನಂಬಲಿ? ಭಗವಂತನೇ ಆತನನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡಿ ರಕ್ಷಿಸಲಿ.
(ತೆರೆಯಲ್ಲಿ) “ಪೂಜ್ಯ ಮಾತೆ! ಭಗವದನುಗ್ರಹವಿದ್ದರೆ, ಬಾಲಕನು
ಎಂದಿಗೂ ಅಧರ್ಮಿಯಾಗಲಾರನು; ಆಶೀರ್ವದಿಸಬೇಕು'