ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೯೧


(ರಮಾನಂದನು ಮುಂದೆಬಂದು ಗುರುಪತ್ನಿಗೆ ನಮಸ್ಕರಿಸುವನು)
ಗುರುಪತ್ನಿ:-(ತಲೆಯನ್ನು ಹಿಡಿದೆತ್ತಿ) 'ಮಗುವೆ! ದೇವರು ನಿನ್ನನ್ನು ರಕ್ಷಿಸಲಿ.'
ರಮಾ: -ಜನನಿ ! ಬರೆಹೇಳಿದ್ದುದೇಕೆ ?
ಗುರುಪತ್ನಿ:-ಮಗುವೆ! ಈಗ ಒದಗಿರುವ ಅನರ್ಧಗಳನ್ನು ನಿನಗೆ 5 ಹೇಗೆಹೇಳಲಿ? ಹೇಳದಿದ್ದರೆ ನಿರ್ವಾಹವಾಗುವುದಾದರೂ ಹೇಗೆ ?
ರಮಾ:-ತಾಯಿ ! ಈ ಬಾಲಕನು ನಿರಪರಾಧಿ, ನಿಷ್ಕಪಟ ಮತ್ತು ನಿರಂತರ ವಿಧೇಯನಾಗಿರುವವನು. ಮಾತಾಪಿತೃಗಳಿಂದ ಪ್ರೇರಿತನಾಗಿ ಬಂದುದು ಮೊದಲು, ನಾನು ತಮ್ಮನ್ನಲ್ಲದೆ, ಮತ್ತಾರನ್ನೂ ಕಂಡವನಲ್ಲ, ಸಾಕ್ಷಾತ್ ಮಾತಾಪಿತೃಗಳ೦ತೆಯೇ ಕಾಣುತ್ತಿರುವ 10 ತಾವು, ಈ ಬಾಲಕನು ತಿಳಿಯದೆ ಏನಾದರೂ ತಪ್ಪಿ ನಡೆದಿದ್ದರೆ, ಶಿಕ್ಷಿಸುವುದಕ್ಕೂ ಮತ್ತು ರಕ್ಷಿಸುವದಕ್ಕೂ ಕರ್ತರಾಗಿರುವಿರಲ್ಲವೆ?
ಗುರುಪತ್ನಿ :-(ನಿಟ್ಟುಸಿರಿಟ್ಟು) “ಸುಕುಮಾರ!ನೀನು, 'ಮಧುಕರಿ' ಎಂಬ ವೇಶೆಯನ್ನೇನಾದರೂ ಬಲ್ಲೆಯಾ? ಅವಳಿಗೂ ನಿನಗೂ ಸ್ನೇಹಬಾಂಧವ್ಯವುಂಟೇ? ಮರೆಮಾಚದೆ ಹೇಳು, ” 15
ರಮಾ:- ತಾಯಿ ! ನನಗೆ ಇಂದಿನವರೆಗೂ ಅವಳ ಹೆಸರು ಕೂಡ ತಿಳಿದಿರಲಿಲ್ಲ. ಈ ದಿನ ರಾತ್ರಿ, ನಾನು ಆಯಾಸ ವಿಶ್ರಾಂತಿಗಾಗಿ ತೋಟಕ್ಕೆ ಹೋಗಿದ್ದ ವೇಳೆ, ಅವಳ ಪರಿಚಾರಿಣಿಯೆಂದು ಒಬ್ಬ ದಾಸಿಯು ಬಂದು, ನನ್ನನ್ನು ಕೂಗಿಕೊಂಡುದರಮೇಲೆ, ನಾನು ಬಂದು ಏನೆಂದು ಕೇಳಿದುದಕ್ಕೆ, ಮಧುಕರಿಯು ನನ್ನ ವಿಚಾರವಾಗಿ 20 ಬಹುಮುಖದಿಂದ ಕೇಳಿರುವುದಾಗಿಯೂ, ಆದುದರಿಂದ ನನ್ನನ್ನು ನೋಡಲು ಬಂದಿರುವುದಾಗಿಯೂ, ಅವಳನ್ನು ನೋಡಲು ಬರಬೇ ಕೆಂದೂ ಬಹುವಾಗಿ ಕೇಳಿಕೊಂಡಳು. ನಾನು ಅವಳ ಪ್ರತಿಯೊಂದು ಮಾತನ್ನೂ ಮುರಿದು, ಅವಳು ಅಲ್ಲಿಗೆ ಬಂದುದಕ್ಕಾಗಿ ಅವಳನ್ನು ತಿರಸ್ಕರಿಸಿ ಹೊರಟುಹೋದನು, ಅಲ್ಲಿಗೆ ಹೋಗುತ್ತಿದ್ದಾಗಲೇ 25