ಸತ್ಯಸೇನನು ನೋಡಿದ್ದು ದು, ಇಷ್ಟಲ್ಲದೆ ನಾನು ಮತ್ತೇನನ್ನೂ ಕಂಡವನಲ್ಲ, ಇದು ಸತ್ಯವಾದ ಮಾತು.
ಗುರುಪತ್ನಿ:- ನಾಟಕಕ್ಕೇನಾದರೂ ಹೋಗಿದ್ದೆಯಾ? ಆವರಿ ಗೇನಾದರೂ ಸಾಲವನ್ನು ಕೊಡಬೇಕೆ?
ರಮಾ:- ತಾಯೆ | ನಾನು ವಿದ್ಯಾಶಾಳ, ವಿದ್ಯಾರ್ಥಿಮಂದಿರ ಮತ್ತು ಬಾಲೋಧ್ಯಾನ-ಇವುಗಳನ್ನಲ್ಲದೆ, ಈ ವರೆಗೂ ಇನ್ನೆಲ್ಲಿ ಗೂ ಹೋದವನಲ್ಲ, ಮತ್ತೇನು ಹೇಳಲಿ?
ಗುರುಪತ್ನಿ :-(ಕುತೂಹಲದಿಂದ)'ಹಾಗಾದರೆ ಈ ಪತ್ರಗಳೆಲ್ಲವೂ ನಿನಗೆಲ್ಲಿಂದ ಬಂದವು? ನಿನ್ನ ಹಾಸಿಗೆಯಲ್ಲಿ ಈ ಹೆಂಗಸಿನ ಚಿತ್ರವು ಸೇರಿರುವದಕ್ಕೆ ಕಾರಣವೇನು? " (ಸುಮುಖನು ಸೂಚಿಸಿದ್ದಂತೆ ಪತ್ರಗ
ಳನ್ನೂ ಪಠವನ್ನೂ ಮುಂದಿಡುವಳು.)
ರಮಾ:-ತಾಯೆ! ನನಗಧಾವುದೂ ತಿಳಿಯದು, ತಾವು ಮತ್ತು ನನ್ನ ತಾಯಿ, ಇವರಲ್ಲದೆ ಮತ್ತಾವ ಸ್ತ್ರೀಯರನ್ನೂ ನಾನು ನೋಡಿ
ರುವುದಾಗಲೀ, ನೋಡುವುದಾಗಲೀ ಇಲ್ಲ. ಭಾವಚಿತ್ರವೆಂದರೆ, ಶಾರದಾಚಿತ್ರವೊಂದಲ್ಲದೆ ಮತ್ತಾವುದನ್ನೂ ನನ್ನ ಬಳಿಯಲ್ಲಿರಿಸಿಕೊಂ
ಡಿರುವುದಿಲ್ಲ, ನಮ್ಮ ಅನುಗ್ರಹಬಲದಿಂದ ನನ್ನನ್ನು ವಿಧ್ಯಾವಿಚಾರ ವೊಂದಲ್ಲದೆ ಇತರ ದುರ್ವ್ಯಸನವಾವುದೂ ಮುಟ್ಟುವಂತಿಲ್ಲ, ಇದೆ ಲ್ಲವೂ ಹೀಗಾಗಿರುವುದಕ್ಕೆ ಕಾರಣವಾಗಲೀ, ಕಾರ್ಯಕಾರಿಗಳಾಗಲಿ
ಇಂತಹವರೆಂಬದನ್ನು ನಾನು ಬಾಯ್ದೆರೆದು ಹೇಳುವವನಲ್ಲ , ಪ್ರತ್ಯಕ್ಷ ಪ್ರಮಾಣಧಿ೦ದ ನಿದರ್ಶನಕ್ಕೆ ಬರುವಂತಾಗಲೆಂದೂ, ಮಾಡಿದವರನ್ನು
ಭಗವಂತನು ಕ್ಷಮಿಸಿ, ರಕ್ಷಿಸುವಂತೆಯ, ಆಶಿರ್ವದಿಸಬೇಕಾಗಿ ಕೋರುವೆನು , ಮತ್ತೇನನ್ನು ಪ್ರಾರ್ಥಿಸಲಿ?
ಗುರುಪತ್ನಿ;- (ಅನುಕಂಪಿತಸ್ಟ ರದಿಂದ) 'ಸುಕುಮಾರ | ಭಗವಂ ತನು ಅನುಗ್ರಹಿಸಲಿ, ನಿನ್ನ ಮೇಲೆ ಬಿದ್ದಿರುವ ಅಪವಾದಕ್ಕಾಗಿಯೂ , ಈಗ ತೋರಿಬಂದಿರುವ ಕಾರಣಗಳಿಗಾಗಿ ನಿನ್ನ ಗುರುವು ಅತ್ಯಂತ
ಪುಟ:ರಮಾನಂದ.djvu/೧೧೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೯೨
ಸತೀಹಿತೈಷಿಣಿ