ಪುಟ:ರಮಾನಂದ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದಿ F8 ವಿಷಾದವನ್ನು ಹೊಂದಿರುವರು. ಅವರ ವ್ಯಕ್ತತೆಯನ್ನು ನೋಡಿ ಸಹಿಸಲಾರದೆ ಸಂಗತಿಯೇನೆಂಬುದನ್ನು ತಿಳಿಯಲು ನಿನ್ನ ನ್ನು ಕರೆಯಿಸಿ ದನು. ಇನ್ನು ಮುಂದಿನ ವಿಚಾರವು ಅವರನ್ನೇ ಸೇರಿರುವುದು, ಈ ರಾತ್ರಿಯೆಲ್ಲಾ ಹೀಗೆಯೇ ಕಳೆಯುತ್ತಿದ್ದರೆ, ದೇಹಾಯಾಸವು ಬಲ ವಾಗುವುದು, ನೀನಿನ್ನು ಹೋಗಿ ಮಲಗು.” ರಮಾ:- ಮಲಗುವುದೆಲ್ಲಿ? ಮಿಥ್ಯಾ ಪವಾದಗ್ರಸ್ತನಾಗಿರುವ ವನು ತನ್ನ ನಿಷ್ಕಲ್ಮಷ ಹೃದಯವನ್ನು ಸ್ಪಷ್ಟ ಪಡಿಸುವವರೆಗೂ ಆತನಿಗೆ ಆಹಾರ ನಿದ್ರೆಗಳಾದರೂ ರುಚಿಸುವುದೇ ? ತಾಯಿ ! ನನ್ನ ಈ ದೈನ್ಯ ಪ್ರಾರ್ಥನೆಗಳನ್ನು ಗುರುಸನ್ನಿಧಿಗೆ ನಿವೇದಿಸಬೇಕು. ಇನ್ನು ನಾನು. ಅಪ್ಪಣೆಯನ್ನು ತೆಗೆದುಕೊಳ್ಳುವೆನು. 10 ( ರಮಾನಂದನು ಹೊರಟು ಹೋಗುವನು. ) ಗುರುಪತ್ನಿ :- ಹೇ, ಜಗಜ್ಜಿ ನನೀ ಅನುಗ್ರಹಿಸು, ಇಂತಹ ಸುಗುಣ-ಚಿ೦ತಾಮಣಿಗಳಾದ ವಿದ್ಯಾರ್ಥಿಗಳನ್ನು ಈ ರೀತಿಯಾದ ಸಂಕಟಕ್ಕೆ ಗುರಿಪಡಿಸುವುದು ಸರಿಯಲ್ಲ, ಅದು ನಿನಗೆ ತಿಳಿಯದು ದಲ್ಲ ವಾಗಿ, ರಮಾನಂದನ ದಿಗ್ವಿಜಯಕ್ಕೆ ಈಗ ನೀನೇ ಬೆಂಬಲವಾಗಿ 15 ನಿಲ್ಲ ಬೇಕಲ್ಲದೆ, ಮತ್ತಾರೂ ನಿಲ್ಲು ವವರಿಲ್ಲ, ಇನ್ನು ನಿನ್ನ ಇಷ್ಟ.' (ಎಂದು ಎದ್ದು ಹೊರಡುವಳು.) ಪ್ರಾ ಧ } - . ಅಗ- ನೋರ್ಟ್, (ಕಾಯ್ಕೆ ದೇವಕಿತನಯ.) ಕಾಯೆ ಶ್ರೀರಮಾ ದೇವಿಯೆ ಸದಾ | ತೋಯಜಾಂಬಕಿಯ ಭಯವ-ಬಿಡಿಸಿ-ಭರದಿಂದ | ಕಾಯೆ || ಪ |. ಕ್ಷೀರಾಂಬೋ ನಿಧಿತನಯೆ ಹೊರೆ | ಮಾರನಯ್ಯ ನರಸಿ ಕರುಣಾ-ವೆರಸೀ ನಲವಿಂದ | ಕಾಯೆ