ಪುಟ:ರಮಾನಂದ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ. 0 N 11 ಶ್ರೀರಾಮ ಪ್ರಸನ್ನ || ಮಹನೀಯರಾದ ದೇಶಬಾಂಧವರೇ ! ಹಲವು ಮಹಾಕಾವ್ಯ, ನಾಟಕ, ಚಂಪೂಗ್ರಂಥಗಳನ್ನು ಅವಲೋಕಿಸಿ, ನಲಿನಲಿದಾಡುತ್ತಿರುವ ರಸಿಕ ಸಮಾಜದಲ್ಲಿ, ಅಲ್ಪ ಮತಿಯ ಆತ್ಮಕೃತಿಬದ್ಧವಾದ ಈ ರಮಾನಂದಾಭಿಧಾನದ ನೀರಸಪ್ರಬಂಧರಚನೆಯು ಹಾಸ್ಯಾಸ್ಪದವಾಗಿಯೇ ಪರಿಣಮಿಸ ಬಹುದಲ್ಲವೆ? ಸಹಜ ! ಏಕೆಂದರೆ,-, ನಾಟಕಕ್ಕೆ ಮುಖ್ಯವಾಗಿ ಅಲಂಕಾರಪ್ರಾಯಗಳಾಗಿರುವ ಶೃಂಗಾರ, ವೀರ, ಅದ್ಭುತ, ಹಾಸ್ಟರಸಗಳೂ, ತಕ್ಕಂತೆ ಹಾವ ಭಾವ, ವಿಲಾಸ ವಿಭ್ರಮಾದಿ ವರ್ಣನೆ ಗಳೂ, ವಿರಹ ಸಂತಾಪಾದಿ ವಿಷಯ ವಿಕಾರಗಳೂ ಇವಾವುದನ್ನೂ ತೋರದೆ, ಕೇವಲ ಶಾಂತಿರಸ ಪ್ರಧಾನವಾದ ರಮಾನಂದವನ್ನು ನೋಡಿ ರಸಿಕರ ಚಿತ್ತವು ಆಕ್ಷೇಪಿಸದಿರು ವುದು ಹೇಗೆ ? ಆದರೆ, ಆಕ್ಷೇಪವೆಂತಹದಾಗಿರಬೇಕು ? - ೧, ಶೃಂಗಾರಾದಿ ಪ್ರಧಾನ ರಸವನ್ನೇ ಬಿಟ್ಟಿರುವುದರಿಂದ ಅಷ್ಟಾಗಿ ಶೋಭಿಸ ಲಾರದು. ೨, ಕಥಾನಾಯಕನಾದ ರಮಾನಂದನಲ್ಲಿ ಆದ ರ್ಶಯೋಗ್ಯವಾದಷ್ಟು ವಿನಯ ಶೀಲತೆಯನ್ನುಂಟು ಮಾಡಿದ್ದರೆ ಚೆನ್ನಾಗಿ ಕಾಣುತ್ತಿದ್ದಿತು. ೩, ಕಥೆಗೆ ಉಪಯುಕ್ತಗಳಾದ ಹಾಡುಗಳನ್ನು ಕೊಡದೆ ಬಿಟ್ಟಿರುವುದೂ, ಉದ್ದುದ್ದದ ಭಾಷಣಗಳಿಂದಲೇ ತುಂಬಿಸಿರುವುದೂ ಅಷ್ಟಾಗಿ ತೃಪ್ತಿಕರವಾಗಿಲ್ಲ, ಇವೇ ಆಕ್ಷೇಪಗಳಾಗಿರಬೇಕಲ್ಲವೆ ? ಇರಲಿ, ತಕ್ಕಷ್ಟು ಸಮಾಧಾನವನ್ನು ಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಹೇಗೆಂದರೆ:- ೧ ರಮಾನಂದನಲ್ಲಿ ಶೃಂಗಾರ ರಸವಿಲ್ಲದಿರುವುದಕ್ಕೆ ಕಾರಣವೆಂದರೆ, ರಮಾ ನಂದನು ಪ್ರಾಥಮಿಕ ಶಿಕ್ಷಣದಲ್ಲಿ ಉತ್ತೀರ್ಣನಾಗಿ, ಪ್ರೌಢತರಗತಿಗೆ ಬರಲು ಅರ್ಹತೆ ಯನ್ನುಂಟುಮಾಡುವ ಗುರುಕುಲವಾಸದಲ್ಲಿರಬೇಕಾದ ವಿದ್ಯಾರ್ಥಿ, ವಿದ್ಯಾರ್ಥಿಗಳಿಗೆ ವಿಲಾಸ ವಿಭ್ರವಾದಿ ಶೃಂಗಾರ ರಸಗಳು ಸರ್ವಥಾ ಪರಿತ್ಯಾ ಜ್ಯವೆಂದು ಬಲ್ಲವರು ಹೇಳುವದಲ್ಲವೆ ?