(ಎಂದು ಕಂಕುಳಲ್ಲಿದ್ದ ಪೆಟ್ಟಿಗೆಯನ್ನು ತೆಗೆದು ಮುಂದಿಡುವನು.)
ಕ್ಷೇಮ:-(ಪೆಟ್ಟಿಗೆಯ ಕದವನ್ನು ತೆರೆದು, ಅದರಲ್ಲಿದ್ದ ವಸ್ತುಗಳನ್ನು ತಗೆತಗೆದು ನೋಡುತ್ತ ಸಂಭ್ರಮದಿಂದ) ಭಲೆ! ಭಲೆ! ತಾರಣ] ಭಲೆ! ಭಲೆ!! ಇನ್ನು ದ್ರೋಹವು ನಿರ್ಧರವಾಯ್ತೆoಬುದರಲ್ಲಿ ಸಂಶಯವಿಲ್ಲ.”
ತಾರಣ:- (ಕುತೂಹಲದಿಂದ) • ವಿಶೇಷ ವೇನಾದರೂ ತಿಳಿದಿ ದೆಯೆ?”
ಕ್ಷೇಮ:- ಮತ್ತೇನಾಗಬೇಕು? ನೋಡು, ರವಿವರ್ಮ, ಕಳಿಂಗ, ನಳರು ಮೂವರೂ ಬೇರೆಬೇರೆಯಾಗಿ ಮಧುಕರಿಗೆ ಬರೆದಿ ರುವ ಪ್ರೇಮ ಪತ್ರಿಕೆಗಳೂ, ಅದರಲ್ಲಿ ಮೂವರೂ ರಮಾನಂದನ ನಡತೆ ಯಲ್ಲಿ ಕಲಂಕವನ್ನು cಟುಮಾಡಬೇಕೆಂದು ಮಾಡಿರುವ ಬೇರೆಬೇರೆ ಪ್ರಾರ್ಥನೆಗಳೂ ಅಡಗಿರುವವು.
ತಾರಣ:- ರಮಾನಂದನ ಮೇಲೆ ಹೊರಿಸಿದ ಮಾತ್ರಕ್ಕೆ, ಅವ ಳಿಗಾಗುವ ಪ್ರತಿಫಲವೇನಂತೆ?
ಕ್ಷೇಮ:- ಇದೇ ಈ ವಾಗ್ದಾನದ ಪತ್ರಿಕೆಯೇ ಹೇಳುವದು ನೋಡು-ನಮ್ಮ ಉದ್ದೇಶವನ್ನು ಸಫಲವಾಡಿಕೊಟ್ಟರೆ, ಯಾವಜ್ಜೀವವೂ ನಮಗೆಲ್ಲ ಅಧೀಶ್ವರಿಯಾಗಿರತಕ್ಕವಳೆಂದು ನಂಬುವದು, ಎಂದು ಬರೆಯಲ್ಪಟ್ಟಿದೆ, ( ಮತ್ತೂ ಪೆಟ್ಟಿಗೆಯನ್ನು ಶೋಧಿಸಿ ಗಂಟೊಂದನ್ನು ಹೊರಗೆ ತೆಗೆದು ಬಿಚ್ಚಿ): ತಾರಣ! ತಾರಣ!! ಇದೇನೋ ಕೌತುಕವ್ಯಾಪಾ ರವಾಗಿದೆ! ಇದೇ ನೋಡು, ಉಪಾಧ್ಯಾಯರ ಕರವಸ್ತ್ರವು ಇದರಲ್ಲಿ ಅವರ ಕೈ ತೊಡವು !! ಇದೆಲ್ಲಿ ಬಂತು? ಅವರಿಗೆ ರಾಜಾಸ್ಥಾ ನದಿಂದ 20 ಕೊಡಲ್ಪಟ್ಟ ಈ ಬಿರುದು ಇವಳ ಪೆಟ್ಟಿಗೆಯಲ್ಲಿ ಸೇರಲು ಕಾರಣ ವೇನು? ಇದೇನೊ ಪ್ರಮಾದವಾಗಿದೆ.”
ತಾರಣ:- ಆರ್ಯನೇ! ಅದರಲ್ಲಿರುವ ಸಂಪುಟವನ್ನು ನೋಡಿ ಯಾಯಿತೇ?
ಕ್ಷೇಮ:- [ತೆಗೆದುನೋಡಿ, ಅದರಲ್ಲಿದ್ದ ಮುದ್ರಿಕೆಯನ್ನೂ, ಅದರ ಜತೆ
ಪುಟ:ರಮಾನಂದ.djvu/೧೧೮
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೯೯