ತಲೆಯ ಮೇಲೆ ಗಂಟನ್ನು ಹೊತ್ತು ಕೊಂಡು ಬರುತ್ತಿದ್ದನು. ನಾನು ಎಲ್ಲಿಗೆ ಹೋಗುತ್ತಿರುವೆ' ಎಂದು ಕೇಳಿದುದಕ್ಕೆ ಆತನು ನಮ್ಮ ಕುಮಾರನು ಅಪಮಾನಿತನಾದುದರಿಂದ, ಇಲ್ಲಿರಲೊಪ್ಪದೆ ಆರಣ್ಯ ವಾಸಕ್ಕೆ ಹೊರಟುಹೋದನು, ಆತನನ್ನು ಅನುಸರಿಸುತ್ತ ನಾನೂ ಅಲ್ಲಿಗೇ ಹೋಗುತ್ತಿರುವೆನು ' ಎಂದು ಹೇಳಿ ಹೊರಟುಹೋದನು.
ನೆನಗೆ ಇಷ್ಟು ಮಾತ್ರವೇ ಗೊತ್ತಿದೆ.
ಉಪಾ:- ಹಾಗಿದ್ದರೆ, ರಮಾನ೦ದನು ಕದ್ದ ಕಳ್ಳ ನಾಗಿ ಓದಿ ಹೋಗಿರುವನೇ?
ಸುಮುಖ:- ರಮಾನಂದನು ಕದ್ದು ಹೋಗುವಷ್ಟು ತಪ್ಪಿತವ ನ್ನೇನೂ ಮಾಡಿಲ್ಲ.
( ಸತ್ಯಸೇನನ ಪ್ರವೇಶ. )
ಸತ್ಯ:- ಪೂಜ್ಯರೆ! ನಾನೂ ಎಲ್ಲೆಲ್ಲಿಯೋ ಹುಡುಕಿ ಸಾಕಾ ದೆನು, ರಮಾನ೦ದನು ಮಾತ್ರ ಇನ್ನೂ ಗೋಚರವಾಗಿಲ್ಲ
ಉಪಾ:-ಹಾಗಿದ್ದರೆ ಅವನೇ ಕಳ್ಳನಾಗಿರಬೇಕು.
ಸುಮುಖ:- ಹಿರಿಯರು ಬೇಕಾದಂತೆ ಹೇಳಿಕೊಳ್ಳಬಹುದು. ರಮಾನಂದನ ಸತ್ವ ಪರೀಕ್ಷೆಗೆ ಇದೇ ಸುಮುಹೂರ್ತವೆಂದು ನಂಬಿ ಸುಮ್ಮನಿರುವೆವು, ಸಂಶಯ ನಿವಾರಣೆಗೆ ನಮ್ಮ ಜನಕನಾದ ಕ್ಷೇಮದರ್ಶಿಯನ್ನು ಕರೆಯಿಸಿದರೆ ಎಲ್ಲವೂ ಪ್ರತ್ಯಕ್ಷ ಪ್ರಮಾಣಕ್ಕೆ ಬರುವವು.
ಉಪಾ:- ಹಾಗೂ ಆಗಲಿ, ಎಲೈ ಸತ್ಯ ಸೇನ! ನೀನು ಈಗಲೆ ಹೋಗಿ ಕ್ಷೇಮದರ್ಶಿಯನ್ನು ಬೇಗ ಬರಹೇಳು.
ಸತ್ಯಸೇನ:- ಆಗಬಹುದು, (ಎಂದು ಹೋಗಿ, ಮತ್ತೆ ಓಡಿಬಂದು) ಪೂಜ್ಯರೇ 'ಕ್ಷೇಮದರ್ಶಿ' ಬ್ರಾಹ್ಮಣೋತ್ತಮರು ಚಂಡಾಲಾಧಿಪನಾದ ಚಿತ್ರಕನೊಡನೆಯೂ, ಮುಖ್ಯ ಸೇವಕನಾದ ತಾರಣನೊಡನೆಯು
ಇಲ್ಲಿಗೆ ಅತ್ಯವಸರವಾಗಿ ಬರುತ್ತಿರುವರು.
( ಸುಮುಖಾದಿಗಳು ಉತ್ಸಾಹದಿಂದ ನೋಡುವರು, ಕ್ಷೇಮದರ್ಶಿಯ)