ದನು ಅವಿಧೇಯನೆಂದಾಗಲೀ ದುರಭಿಮಾನಿಯೆಂದಾಗಲೀ ಜಿಜ್ಞಾಸುಗಳಾದವರು ಹೇಳಲಾರರು.
೩. ಮೂರನೆಯ ಅಕ್ಷೇಪಕ್ಕೆ ಸಮಾಧಾನವೇನಿರಬೇಕೆಂಬುದನ್ನು ಕುರಿತು, ಒಂದೆರಡು ಮಾತುಗಳು, ಕಥೆಗೆ ಉಪಯುಕ್ತಗಳಾದ ಹಾಡುಗಳನ್ನು ಸೇರಿಸಿದ್ದರೆ ಚೆನ್ನಾಗಿತ್ತೆಂಬುದು ರಸಜ್ಞರ ಅಭಿಪ್ರಾಯಕ್ಕೆ ತಕ್ಕುದೇ ಸರಿ, ಆದರೆ ರಮಾನಂದವು ಕೇವಲ ನಾಟ್ಯ ವರ್ಗದವರ ಉಪಯೋಗಕ್ಕಾಗಿ ಮಾತ್ರವೇ ಬರೆಯಲ್ಪಟ್ಟ ನಾಟಕವಲ್ಲ ಎಂದು ಹಿಂದೆ ಹೇಳಿರುವಂತೆ, ವಿದ್ಯಾರ್ಥಿಗಳ ಜ್ಞಾನೇಂದ್ರಿಯ ವಿಕಾಸಕ್ಕೆ ಆವಶ್ಯಕ ವಾದ ತರ್ಕ ವಿತರ್ಕಗಳನ್ನು ಗೀತಾ ರೂಪದಲ್ಲಿ ವಿವರಿಸಿದರೆ ಬಾಲಕರ ಮನಸ್ಸು, ನಿರ್ದಿಷ್ಟ ಫಲವನ್ನು ಕಾಣುವ ಉತ್ಸುಕತೆಯನ್ನು ಒಂದು ಕಡೆಗಿಟ್ಟು, ಕೇವಲ ರಾಗ ದಲ್ಲಿಯೇ ಅನುರಕ್ತ ವಾಗಿ ಹೋಗಬಹುದೆಂಬ ಶಂಕೆಯಿಂದ ವಚನರೂಪದಲ್ಲಿ ಯೇ ವಿಷಯ ವಿಚಾರವಿಮರ್ಶೆಯನ್ನು ಕೊಟ್ಟಿರುವುದು, ಅಲ್ಲದೆ, ಮಕ್ಕಳ ಬುದ್ಧಿಶಕ್ತಿಯು ಯಾವುದೇ ಒಂದು ವಸ್ತುಸ್ಥಿತಿಯನ್ನು ಕುರಿತು ವ್ಯಾಖ್ಯಾ ನಮಾಡಬೇಕಾದರೂ ಸಾಮರ್ಥ್ಯವನ್ನು ಹೊಂದಬೇಕೆಂಬ ಉದ್ದೇಶದಿಂದ ಭಾಷಣವನ್ನು ಲಂಬಿಸಿ ಬರೆದಿರು ವುದು, ಇದನ್ನು ದೋಷವಾಗಿ ಪರಿಗ್ರಹಿಸು ವುದಾದರೆ ಮತ್ತೇನನ್ನು ಹೇಳಬಹುದು.
ಮತ್ತೆ ಗ್ರಂಥದಲ್ಲಿ ಪ್ರತಿಪಾದಿಸಲ್ಪ ಡುವ ವಿಷಯಗಳು ಬಾಲಕ ಬಾಲಿಕೆಯರ ಮನಸ್ಸಿಗೆ ಹಿಡಿಯುವಂತೆ ಮಹನೀಯರ ನೀತಿವಾಕ್ಯಗಳನ್ನು ಸಂಗ್ರಹಿಸಿ, ತೋರಿಸಿರು ಪುದು.
ನಮ್ಮ ಬಾಲಕ ಬಾಲಕಿಯರಲ್ಲಿ ಆದಿಯಿಂದಲೂ ದೈವಭಕ್ತಿ, ದೇಶಾಭಿಮಾನ ಗುರುಜನವಿಧೇಯತೆಗಳುಂಟಾಗಬೇಕಾದುದು ಅವಶ್ಯವಾದುದರಿಂದ ಇದರಲ್ಲಿ ಕೇವಲ ಭಗವನ್ನಾಮ ಸಂಕೀರ್ತನೆಗಳನ್ನು ಮಾತ್ರವೇ ಪ್ರತಿ ಅಂಕದ ಆದ್ಯಂತ ಭಾಗ ದಲ್ಲಿಯ ಕೊಟ್ಟಿರು ವುದು, ಇದರಿಂದ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮನಸ್ಸು ಆಹ್ಲಾದಿತವಾಗಿ ಅಲ್ಪ ಸ್ವಲ್ಪವಾದರೂ ವಿಚಾರ ಶಕ್ತಿಯನ್ನು ಹೊಂದಬಹುದಾದರೆ ನನ್ನಿ ಲೇ ಖನಶ್ರಮದ ಸುರ್ಧಕತೆಯುಂಟಾದಂತೆ ಭಾವಿಸುವನು, ಮತ್ತೇನನ್ನು ಹೇಳಲಿ?
ನನ್ನ ಈ ಲೇಖನ ಕಾರ್ಯದಲ್ಲಿ ನನ್ನನ್ನು ಪ್ರೋತ್ಸಾಹಿಸಿದ ನಮ್ಮ ಪೂಜ್ಯರ ಮತ್ತು ಉಪಾಧ್ಯಾಯರ 'ಆಜ್ಞಾಬಲದಿಂದ ನನ್ನ ಅಲ್ಪ ಬುದ್ಧಿಗೆ ತಕ್ಕಂತೆ ಬರೆದು