ಪುಟ:ರಮಾನಂದ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IV ಭಗವತಿಯ ಅನುಗ್ರಹ, ಹಿರಿಯರ ಆಶೀರ್ವಾದಗಳಿಂದ ಇಂದಿಗೆ ಕೃತಕಾರ್ಯಳೆನ್ನಿಸಿದೆ ನಲ್ಲದೆ ಸೋದರ ಸ್ನೇಹವು ಸರ್ವೋತ್ತಮವಾದುದೆಂಬುದನ್ನು ಅನುಭವ ಪೂರ್ವಕ ವಾಗಿ ನಿದರ್ಶನಕ್ಕೆ ತರಬೇಕೆಂದೆಣಿಸಿ ನನ್ನ ಸಹಜಾತನಾಗಿದ್ದು ತನ್ನ 13-14ನೆಯ ವರ್ಷದಲ್ಲಿಯೇ ಎಂದರೆ-2-11-1891 ರಲ್ಲಿ ಹುಟ್ಟಿ,26-12-1903ರಲ್ಲಿ ಗತಿ ಸಿಹೋಗಿದ್ದರೂ, ತನ್ನ ನೈಸರ್ಗಿಕವಾದ ಬಂಧುಪ್ರೇಮವನ್ನು ಅಡಿಗಡಿಗೂ ನನ್ನ ಸ್ಮೃತಿ ಪಥಕ್ಕೆ ತರುತ್ತಿರುವ ಸೋದರನ ಹೆಸರಿನಲ್ಲಿ ಈ ರಮಾನದಾಭಿಧಾನ ಗ್ರಂಥವನ್ನು ಅಂಕಿತಗೊಳಿಸಿ, ಹಿರಿಯರ ಅಭಿಪ್ರಾಯದಂತೆ ಇದರಸರ್ವಾಧಿಕಾರವನ್ನೂ ಆ ವರಮಾ ತ್ಮನ ಚರಣಾರವಿಂದದಲ್ಲಿ ಸಮರ್ಪಿಸಿರುವೆನು, ಮತ್ತು ಇದರಲ್ಲಿ ನನ್ನ ಅಜ್ಞಾತ ದೋಷದಿಂದ ಹಲವು ಕೊರತೆಗಳು ತೋರಿಬಂದರೂ , ಸುಹೃದರಾದ ನಮ್ಮ ವಾಚ ಕವರ್ಗವು ಸಹಜ ಕ್ಷಮೆಯಿಂದ ಮನ್ನಿಸಿ, ಮುಖ್ಯಾಶಯವನ್ನು ಮಾತ್ರ ಸಂಗ್ರಹಿಸಿ ಕೊಳ್ಳಬೇಕೆಂದೂ, ನ್ಯೂನಾತಿರಿಕ್ತ ದೋಷಗಳನ್ನು ತೋರಿಸಿ, ಎಚ್ಚರಿಸಬೇಕೆಂದೂ ಸವಿ ನಯವಾಗಿ ಪ್ರಾರ್ಥಿಸುವೆನು, ಸರ್ವ ಶಕ್ತನಾದ ಭಗವಂತನು ನನ್ನ ಮೇಲಿನ ಆಶಯ ವನ್ನು ಸಫಲವಾಗಿ ಮಾಡಿ, ನಿರಂತರವೂ ನನ್ನಿಂದ ಸೇವೆಯನ್ನು ಕೈಕೊಳ್ಳುತ್ತಿರುವಂ ತೆ ಅನುಗ್ರಹಿಸಬೇಕೆಂತಲೂ, ಆತನ ಅಸಾರಕೃಪಾವಲೋಕನದಿಂದ ನಮ್ಮಿರಾಷ್ಟ್ರ ವ ಸುಖಾನಂದ ದಾಯಕವಾಗಿ ಪ್ರಕಾಶಿಸುತ್ತಿರಬೇಕೆಂದೂ ಅನನ್ನ ಭಾವದಿಂದ ಬೇಡುತ್ತಿ ರವನ್ನು, ರಾ||ಸಂ|| ಮಾಘಬಹುಳ ದ್ವಿತೀಯ ಸೋಮವಾರ 21-2-1916) ಮಾತೃಮಂದಿರಂ, ನಂಜನಗೂಡು, ಇತಿ-- ನಿರಂತರ ಶ್ರೇಯಾಃಕಾಂಕ್ಷಿಣಿ ವಿದ್ಯಾರ್ಥಿನಿ.