ಪುಟ:ರಮಾನಂದ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶ್ರೀ | ದ್ವಿತೀಯ ಮುದ್ರಣದ ಪೀಠಿಕೆ. xase ಸುಹೃದರೆ! ಭಗವದರ್ಪಿತ ಬುದ್ಧಿಯಿಂದ, ಕರ್ತವ್ಯದೃಷ್ಟಿಯಿಂದ ಮಾಡುವ ಕಾರ್ಯಕ್ಕೆ ಅಕ್ಷಯವಾದ ಫಲವುಂಟಾಗುವದೆಂದು ಗುರುಮುಖದಿ೦ದ ಕೇಳಿ ತಿಳಿದಿರುವೆ, ಹಾಗೆಯೇ ಗುರುಜನರ ಉಪದೇಶದಂತೆ ನಮ್ಮ ಸೋದರೀ ಸೋದರರ ಜ್ಞಾನ ಪ್ರಸಾರವಾಗುವಂತೆ ಪ್ರಯತ್ನಿ ಸಬೇಕೆಂಬ ಅವರ ಶಾಸನದಂತೆ- ಈ ಲೇಖನ ಕಾರ್ಯದಲ್ಲಿ ಪ್ರವ ರ್ತಿ ಸಿದ ನಮ್ಮ ಪ್ರಯತ್ನ ವು ಇಂದಿನವರೆಗೆ ಸುಮುಖವಾಗಿ ನಡೆತಂದಿ ರುವದಲ್ಲದೆ, ತಕ್ಕಷ್ಟು ಪ್ರತಿಫಲವನ್ನೂ ಉಂಟುಮಾಡಿರುವುದು; ನಮ್ಮ ನಿರೀಕ್ಷೆಗೆ ಮೀರಿದಷ್ಟು ಸನ್ಮಾನವನ್ನೂ ಲಭಿಸಿಕೊಟ್ಟಿರುವುದು ನಮ್ಮ ಅಲ್ಪಾನುಭವಕ್ಕೊಳ ಪಟ್ಟು ಹೊರಡುತ್ತಿರುವ ಹಿತೈಷಿಣೀ ಗ್ರಂ ಥಮಾಲೆಯ ಈವರೆಗಿನ ೯ ಗ್ರಂಧಗಳಲ್ಲಿ ಅರ್ಧ ಭಾಗವು ದೇಶೋ ದ್ವಾರಕರೆನ್ನಿ ಸುವ ಮಹನೀಯರಾದ ಮೈಸೂರು ಮದರಾಸು ವಿದ್ಯಾಂ ಗದವರಿಂದ ಶಾಲಾ ಪುಸ್ತಕಗಳಾಗಿ ಅಂಗೀಕೃತವಾಗಿಯೂ ಇರುವವು ಎಂದರೆ ವಿದ್ಯುಲ್ಲತೆಯ ಮದರಾಸಿನ ಇಂಟರಮೀಡಿಯೇಟ ಪರೀ ಕ್ಷಗೆ ೧೯೧೮ರ ಪಠ್ಯ ಪುಸ್ತಕವಾಗಿಯ, ಸುಶೀಲೆಯು ಅಲ್ಲಿ ಯ ಸರ್ಕಾರಿ ಶವಿಲಾವುಕವಾಗಿಯ ಇಡಲ್ಪಟ್ಟಿದೆ. [ಇದನ್ನು ಅಲ್ಲಿಂದ ಬಂದಿರುವ ನಿರೂ ಪಣದೊಡನೆ ನಂದಿನಿಯಲ್ಲಿ ವಿಮರ್ಶಿಸಲಿರುವೆವು.} ಅಲ್ಲದೆ, ಈ ರಮಾನಂದ' ವು ನಮ್ಮ ಘನಹೊ೦ದಿದ ಮೈಸೂರು ವಿದ್ಯಾ ಬ್ಯಾಸದ ಮುಖ್ಯಾಧಿಕಾರಿಗಳ ಸಮಾಲೋಚನೆಗೆ ಬಂದು, ಇಲ್ಲಿ ಯ IV ಫಾರಿಗೆ ೧೯೧೬-೧ಲನೆ ವರ್ಷದ ಪಾಠಪುಸ್ತಕವಾಗಿ ಏರ್ಪಡಿಸಲ್ಪಟ್ಟ ತು, ಈ ಕಾರಣದಿಂದ ರಮಾನಂದವು ಇಷ್ಟು ಬೇಗ ದ್ವಿತೀಯ ಮುದ್ರಣಕ್ಕೆ ಬರಲನುವಾಯಿತು.