ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
IV

ಭಗವತಿಯ ಅನುಗ್ರಹ, ಹಿರಿಯರ ಆಶೀರ್ವಾದಗಳಿಂದ ಇಂದಿಗೆ ಕೃತಕಾರ್ಯಳೆನ್ನಿಸಿದೆನಲ್ಲದೆ ಸೋದರ ಸ್ನೇಹವು ಸರ್ವೋತ್ತಮವಾದುದೆಂಬುದನ್ನು ಅನುಭವ ಪೂರ್ವಕವಾಗಿ ನಿದರ್ಶನಕ್ಕೆ ತರಬೇಕೆಂದೆಣಿಸಿ ನನ್ನ ಸಹಜಾತನಾಗಿದ್ದು ತನ್ನ 13-14ನೆಯ ವರ್ಷದಲ್ಲಿಯೇ ಎಂದರೆ-2-11-1891 ರಲ್ಲಿ ಹುಟ್ಟಿ,26-12-1903ರಲ್ಲಿ ಗತಿಸಿಹೋಗಿದ್ದರೂ, ತನ್ನ ನೈಸರ್ಗಿಕವಾದ ಬಂಧುಪ್ರೇಮವನ್ನು ಅಡಿಗಡಿಗೂ ನನ್ನ ಸ್ಮೃತಿ ಪಥಕ್ಕೆ ತರುತ್ತಿರುವ ಸೋದರನ ಹೆಸರಿನಲ್ಲಿ ಈ ರಮಾನಂದಾಭಿಧಾನ ಗ್ರಂಥವನ್ನು ಅಂಕಿತಗೊಳಿಸಿ, ಹಿರಿಯರ ಅಭಿಪ್ರಾಯದಂತೆ ಇದರಸರ್ವಾಧಿಕಾರವನ್ನೂ ಆ ವರಮಾತ್ಮನ ಚರಣಾರವಿಂದದಲ್ಲಿ ಸಮರ್ಪಿಸಿರುವೆನು, ಮತ್ತು ಇದರಲ್ಲಿ ನನ್ನ ಅಜ್ಞಾತ ದೋಷದಿಂದ ಹಲವು ಕೊರತೆಗಳು ತೋರಿಬಂದರೂ, ಸುಹೃದರಾದ ನಮ್ಮ ವಾಚಕವರ್ಗವು ಸಹಜ ಕ್ಷಮೆಯಿಂದ ಮನ್ನಿಸಿ, ಮುಖ್ಯಾಶಯವನ್ನು ಮಾತ್ರ ಸಂಗ್ರಹಿಸಿ ಕೊಳ್ಳಬೇಕೆಂದೂ, ನ್ಯೂನಾತಿರಿಕ್ತ ದೋಷಗಳನ್ನು ತೋರಿಸಿ, ಎಚ್ಚರಿಸಬೇಕೆಂದೂ ಸವಿ ನಯವಾಗಿ ಪ್ರಾರ್ಥಿಸುವೆನು, ಸರ್ವ ಶಕ್ತನಾದ ಭಗವಂತನು ನನ್ನ ಮೇಲಿನ ಆಶಯವನ್ನು ಸಫಲವಾಗಿ ಮಾಡಿ, ನಿರಂತರವೂ ನನ್ನಿಂದ ಸೇವೆಯನ್ನು ಕೈಕೊಳ್ಳುತ್ತಿರುವಂತೆ ಅನುಗ್ರಹಿಸಬೇಕೆಂತಲೂ, ಆತನ ಅಸಾರಕೃಪಾವಲೋಕನದಿಂದ ನಮ್ಮೀ ರಾಷ್ಟ್ರವು ಸುಖಾನಂದ ದಾಯಕವಾಗಿ ಪ್ರಕಾಶಿಸುತ್ತಿರಬೇಕೆಂದೂ ಅನನ್ಯ ಭಾವದಿಂದ ಬೇಡುತ್ತಿರುವೆನು.

ರಾ॥ಸಂ॥ ಮಾಘಬಹುಳ ದ್ವಿತೀಯ ಇತಿ—
ಸೋಮವಾರ( 21-2-1916) ನಿರಂತರ ಶ್ರೇಯಾಃಕಾಂಕ್ಷಿಣಿ
ಮಾತೃಮಂದಿರಂ, ನಂಜನಗೂಡು, ವಿದ್ಯಾರ್ಥಿನಿ.