ಘಾತವಾಗಿಲ್ಲ ವೆ? ನಂಬಲೇ? ಹೇಳು, ಹೇಳು.”
ಕ್ಷೇಮ;-ಸತ್ಯವಾಗಿ ಮತ್ತೆ ಮತ್ತೆ ಹೇಳುವೆನು, ರಮಾನಂದನು ಸುಕ್ಷೇಮಿಯಾಗಿರುವನು. ಅಲ್ಲದೆ, ತಮ್ಮ ಸಂದರ್ಶನದಲ್ಲಿ ಉತ್ಸುಕನಾಗಿಯೂ ಇರುವನು.
ಉಪಾಧ್ಯಾಯ:- (ಆನಂದ, ಕ್ರೋಧ; ವಿಷಾದಗಳಿಂದ ಎದ್ದು ನಿಂತು ವಿಕೃತಸ್ವರದಲ್ಲಿ) “ಎಲೆಲೆ! ದುರ್ಮಾರ್ಗಿಗಳೇ! ಪಾಮರರೇ! ಪತಿತರೇ! ಕೊಲೆಗೇಡಿಗಳೇ! ಲಜ್ಜಾಹೀನರೇ! ಧರ್ಮಚುತರಾದ ದುಷ್ಟ ಪಶು ಗಳೇ!! ನಿಮಗಿದೆ-ಇದೊ ಧಿಕ್ಕಾರಗಳು.!!! ಪಾಪಿಗಳಾದ ನಿಮಗೆ
ಈ ಬಾಹ್ಯಾ೦ಗದ ಸೌಮ್ಯ ವೇಷವೇಕೆ? ಈ ಕುಟಿಲನಟನೆಯ ವಿದ್ಯಾ ರ್ಥಿ ನಾಮಧಾರಣವೇಕೆ? ಯಾರಲ್ಲಿ ಈ ದೋಹ? ಯಾರಲ್ಲಿ ಈ
ವಂಚನೆ? ಯಾರಲ್ಲಿ ಮಾತ್ಸರ್ಯ? ನಿಷ್ಟುರರೇ ರಮಾನಂದನಲ್ಲಿ ಆ ಪರಮ ಪವಿತ್ರವರ್ತಿಯಲ್ಲಿ -ಆ ಜಿತೇಂದ್ರಿಯನಲ್ಲಿ ನಿಜವಾದ ವಿದ್ಯಾ ರ್ಥಿಯಲ್ಲಿ -ಹಿತೈಷಿಯಾದ ಸೋದರನಲ್ಲಿ, ಈ ದ್ವೇಷವೇ ? ಅವನನ್ನ ಕೊಲ್ಲುವ ಪ್ರಯತ್ನ ವೇ! ಚಿ. ಚಿ: !! ಸುಡು ಸುಡು!!! ನಿಮ್ಮಿ ಈ ದುರ್ಜಿವನಕ್ಕೆ ಧಿಕ್ಕಾರ ! ನಿಮ್ಮ ನಟನೆಯಿಂದ ನಾನೂ ವಂಚಿತ
ನಾಗಿದ್ದೆನಲ್ಲವೇ! ನಿಮ್ಮ ಹೇಳಿಕೆಯಿಂದ ರಮಾನಂದಾದಿಗಳನ್ನೇ ದ್ರೋ ಷಿಗಳೆಂದು ತಿಳಿದು ನಿಷ್ಟುರಪಡಿಸಿದೆನಲ್ಲವೇ? ನಿಮ್ಮಿಂದ ನನ್ನ ವಾಗ್ದಾ ನವೂ ವ್ಯರ್ಥವಾಗಿ, ಶ್ರೀಮಂತನೂ ವ್ಯಾಕುಲಕ್ಕೆ ಈಡಾಗುತ್ತಿದ್ದನ ಲ್ಲವೇ? ದುರಾತ್ಮರೇ ! ನಿಮ್ಮಿಂದ ಎಷ್ಟೊಂದು ಅನಾಹುತವಾಗುತ್ತಿದ್ದಿತು ?
ಕ್ಷೇಮ:-( ನಿಟ್ಟುಸಿರಿಟ್ಟು'ಪೂಜ್ಯರೇ! ಈ ನೀತಿ ಬಾಹಿರರಿಗೆ ಮಾನಮರ್ಯಾದೆಗಳಲ್ಲಿ ಗಮನವಿದ್ದರಲ್ಲವೇ ಈ ಮಾತುಗಳು? ತಾಯಿ ತಂದೆಗಳ ಮನಸ್ಸನ್ನು ನೋಯಿಸಬಾರದೆಂಬವಿಚಾರವೂ ಈ ರವಿ
ವರ್ಮ ನಲ್ಲಿರುತ್ತಿದ್ದರೆ, ಈ ದುರ್ಮಾರ್ಗಿಗಳಾದ ಕಳಿಂಗಾದಿಗಳ ದುರ್ಬೋಧನೆಗೆ ವಶವಾಗಿ, ಹೀಗೆ ಕೆಟ್ಟು ಹೋಗುತ್ತಿದ್ದನೇ? ದುಸ್ಸಹ
ಪುಟ:ರಮಾನಂದ.djvu/೧೩೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೨
ಸತೀಹಿತೈಷಿಣಿ