ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೧

ಉಪಾ:-( ಭಯದು:ಖಗಳಿಂದ ಆಸನದಲ್ಲಿ ಕುಕ್ಕರಿಸಿಬಿದ್ದು) ಆಯ್ಯೋ! ಕಷ್ಟ ಕಷ್ಟ !! ಹಾ! ವತ್ಸಾ ! ಸುಕುಮಾರ ರಮಾನಂದ! ಎಲ್ಲಿರುವೆ ? ಏನಾದೆ? ಅಕಾಲಮೃತ್ಯುವಶನಾದೆಯಾ? ಪವಿತ್ರಾಂತ:ಕರಣನಾದ ನಿನ್ನನ್ನು ಹಲವು ಬಗೆಯಾಗಿ ನಿಷ್ಣುರಪಡಿಸಿದನೇ? ಅಯ್ಯೋ! ಸುಕುಮಾರ ಇನ್ನು ಮು೦ದೆ ನಿನ್ನಂತಹ ಶಿಷ್ಯರತ್ನವನ್ನು ನೋಡುವೆನೇ? ಎಲ್ಲಿರುವೆ? ರಮಾನಂದ ಈಗ ನೀನೆಲ್ಲಿರುವೆ? ಏನು ಮಾಡುತ್ತಿರುವೆ? ಬಾ, ಮೈದೋರು! ಒಂದು ಬಾರಿ ಮೈದೋರು, ಮತ್ತೊಮ್ಮೆ ನಿನ್ನ ಆ ಅಮೃತೋಪಮವಾದ ಕೋಮಲಸ್ವರದಿಂದ (ಗುರುದೇವ' ಎಂದು ಕೂಗಿ ನನ್ನ ಕಿವಿಗೆ ಅಮ್ಮತವನ್ನು ಸುರಿಸಲಾರೆಯಾ? ( ನಿಟ್ಟುಸಿರಿಡುವನು)
(ರವಿವರ್ಮನು ಕಳಿಂಗನ ಕಡೆಗೆ ತಿರುಗಿ ನಿಟ್ಟುಸಿರಿಡುವನು.) 1
ಕ್ಷೇಮ:- (ಉಪಾಧ್ಯಾಯನನ್ನು ಕುರಿತು) 'ಪೂಜ್ಯರೇ! ಸಮಾಧಾ ನವನ್ನು ವಹಿಸಬೇಕು, ರಮಾನಂದನಿಗೇನೋ ಅಪಘಾತವಾಗಿಲ್ಲ ಭೃತ್ಯನು ಮಾತ್ರ ಹೋಗಿರುವನು. ರಮಾನಂದನ ಸೌಶೀಲ್ಯ, ಸೌಕು ಮಾರ್ಯ, ಸೌಜನ್ಯಗಳನ್ನೆಲ್ಲ ನೋಡಿ, ಈ ಚಿತ್ರಕನು ಆತನನ್ನು ಕೊಲ್ಲದೆ ತನ್ನ ದುಷ್ಕಾರ್ಯಕ್ಕಾಗಿ ಆತನಲ್ಲಿ ಕ್ಷಮೆಬೇಡಿ, ಕುಮಾರನನ್ನು ಹೆಗಲಮೇಲಿರಿಸಿಕೊಂಡು ನಮ್ಮಲ್ಲಿಗೆ ಕರೆತರುತ್ತಿದ್ದನು. ಅಷ್ಟರಲ್ಲಿಯೇ ನಾನು ಸುಮುಖನ ಮುಖದಿಂದ ವಿಚಾರವನ್ನು ತಿಳಿದು ಹೀಗಾಗಬಹುದೆಂದು ಯೋಚಿಸಿ, ಮಂದಾರಣ್ಯಕ್ಕೆ ಬರುತ್ತಾ ಇವನನ್ನು ಸಂಧಿಸಿ, ವಿಚಾರವನ್ನು ತಿಳಿದು, ಕುಮಾರನನ್ನು ಮನೆಗೆ ಕರದೊಯ್ದು ಗುಪ್ತವಾಗಿರ ಹೇಳಿ ನಿಜಾಂಶವನ್ನು ಹೊರಗೆಡಹುದೇಕೆಂದು ಸಂಕಲ್ಪಿಸಿ ಹೊರಟುಬಂದೆನು, ಪ್ರಯತಕ್ಕೆ ತಕ್ಕಂತೆ ತಾರಣ, ಸುಮುಖ ಇವರಿಬ್ಬರಿಂದ ಎಲ್ಲವೂ ಅನುಕೂಲಸ್ಥಿತಿಗೆ ಬರುವಂತಾ ದುವು
. ಉಪಾ:-(ನಿಟ್ಟುಸಿರಿಟ್ಟು) 'ಕ್ಷೇಮದರ್ಶಿ! ನಿಜವಾಗಿ ಹೇಳುವೆ ಯಾ? ನಿಜವಾಗಿ ರಮಾನಂದನು ಜೀವಿಸಿರುವನೇ? ಏನೂ ಅಪ