ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೧೯

ನಿನ್ನನ್ನು ಮನ್ನಿಸಲಿ.
ಕ್ಷೇಮ -ವಿದ್ಯಾ:- (ರವಿವರ್ಮನ ಕೈಹಿಡಿದು) ಅಯ್ಯ| ಈ ವರೆಗೆ ನಡೆದುದಕ್ಕಾಗಿ ನೀನಿನ್ನು ವೃಥಾ ವ್ಯಥೆಪಡಬಾರದು. ಇದೆಲ್ಲ ವೂ ಸಹವಾಸ, ಅಭ್ಯಾಸ ಶಿಕ್ಷಣೆಗಳ ನಿಜಸ್ವರೂಪವನ್ನು ನಿದರ್ಶನಕ್ಕೆ ತರ ಬೇಕೆ೦ಬ ಭಗವದ್ವಿಲಾಸವಾಗಿತ್ತೆಂದು ತಿಳಿದು, ಮುಂದೆ ಕರ್ತವ್ಯ ಜಾಗ್ರತನಾಗಿರಬೇಕೆಂಬುದೇ ನಾವು ನಿನಗೆ ಹೇಳುವ ನೀತಿ.
ರಮಾ:- ( ಮು೦ದೆಬಂದು ) ಸಾಕ್ಷಾತ್ಪರಮಾತ್ಮಸ್ವರೂಪರಾದ ಗುರುಜನರಿಗೆ ಬಾಲಕನ ದಂಡ ಪ್ರಣಾಮಗಳು.
ಶ್ರೀಮಂತ- ವಿದ್ಯಾ:- ಮಗುವೆ! ಅಭ್ಯುದಿತನಾಗುವೆ; ಎಲ್ಲಿ ಕಲ್ಯಾಣಮಂಟಪವನ್ನೇ ರು.
ರಮಾ:- ( ಕ್ಷಮಿಸಬೇಕು; ಯಾವ ಪುಣ್ಯವತಿಯ ಪ್ರೀತಿ, ವಿಶ್ವಾಸ, ವಾತ್ಸಲ್ಯ, ಕ್ಷಮಾದಕ್ಷತೆಗಳಿಂದಲೇ ನನಗೆ ಇಂದಿನ ಸುಯೋ ಗವುಂಟಾಯಿತೋ, ಅಂತಹ ಪರದೇವತೆಯೂ, ಸಮಸ್ತ ಸುಖಸ೦ಪ ತ್ತಿಗೂ ಕಾರಣಸ್ವರೂಪಿಣಿಯೂ ಆದ ಮಾತೃ ದೈವವನ್ನೂ, ಮತ್ತು ಮಾತೃವತ್ ನನ್ನ ಸನ್ಮಾರ್ಗ ಸಾಧನೆಗೆ ಆಶ್ರಯದಾತೆಯಾದ ಗುರು ಪತ್ನಿಯನ್ನ ವಂದಿಸಿ, ಅವರ ಸಮಕ್ಷದಲ್ಲಿ ಭ್ರಾತೃಸಹಾಯದಿಂದ ಉತ್ಸವವನ್ನು ನೆರವೇರಿಸುವಂತೆ ಅನುಗ್ರಹಿಸಬೇಕಾಗಿ ಕೋರುವೆನು.'
ವಿದ್ಯಾ:- ಸಾಧು! ಸಾಧು!! ಕುಮಾರ! ನಿನ್ನಿ ಸಂಕಲ್ಪವು ಪರಮ ಸಾಧು !!! ನಿನ್ನಿಷ್ಟದಂತೆಯೇ ಆಗಲಿ.( ಪಕ್ಕಕ್ಕೆ ತಿರುಗಿ )- "ಅಯ್ಯ- ಕ್ಷೇಮದರ್ಶಿ! ಅಂತಃಪುರದಲ್ಲಿ ವಸುಮತೀದೇವಿಯೊಡನೆ ನನ್ನ ಭಾರ್ಯೆಯು ಮಾತನಾಡುತ್ತಿರುವಳು, ಇಬ್ಬರಿಗೂ ಕುಮಾರನ ಇಷ್ಟಾರ್ಥವನ್ನು ತಿಳಿಸಿ, ಅವರೇನು ಹೇಳುವರೋ ತಿಳಿದು ಬರು ತೀಯಾ ? "
(ಕ್ಷೇಮದರ್ಶಿಯು ಸಂತೋಷದಿಂದ ಹೋಗಿ ಮತ್ತೆ ಬಂದು):- ದೇವಿಯರಿಬ್ಬರೂ ಕುಮಾರನ ಉತ್ಸವವನ್ನು ನೋಡಲು ಬಂದಿರುವರು.