ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸತೀಹಿತೈಷಿಣೀ,

 ದಯಾಘನನಾದ ಪರಮಾತ್ಮನೇ ಪರಮ ಪಾವನನೇ!! ನಿನ ಗಿದೆ--ಇದೆ ವಂದನೆ ! ನಿನ್ನ ಅಮೋಘವಾದ ಕೃಪಾಕಟಾಕ್ಷವು ನಮ್ಮನ್ನು ನಿರಂತರವೂ ಎಡೆಬಿಡದೆ ಸಲಹಬೇಕೆಂಬುದೇ ನಮ್ಮೆಲ್ಲರ ಸಂಪಾರ್ಥನೆ.

5
(ಸಭೆಯ ಕಡೆಗೆ ತಿರುಗಿ ಸಂತೋಷದಿಂದ ಕೈ ನೀಡಿ)

ಮಹನೀಯರಾದ ದೇಶಬಾಂಧವರೇ! ನಿಮಗಿದೋ ವಂದನೆ ಗಳು, ಪವಿತ್ರ ಪ್ರೇಮಪ್ರೇರಿತರಾಗಿ ಸಾಕ್ಷಾತ್ಕರಿಸಿರುವ ನಿಮಗಿದೆ ಧನ್ಯವಾದಗಳು, ನಿಮ್ಮಿ ದಿವ್ಯದರ್ಶನ ಲಾಭವನ್ನು ಹೊಂದುವಂತ ಮಾಡಿದ ಈ ದಿನವೇ ನಮ್ಮ ಚಿರಸ್ಮರಣೀಯವಾದ ಸುದಿನವು. 10 ನಿಮ್ಮೆಲ್ಲರ ಬಳಿಯಲ್ಲಿ ಅರೆಗಳಿಗೆಯಾದರೂ ವಸಿಸುವಂತಾದುದರಿಂದ ಸಮ್ಮಿ ಜನ್ಮದೇ ಸಾಫಲ್ಯವು, ಆದರೆ, ಬಾಲಕ-ಬಾಲಿಕೆಯರಿಂದ ಮೊದಲು, ಲೋಕಾನುಭವಜ್ಞ ರಾದ ವೃದ್ಧ ರವರೆಗೂ ತುಂಬಿ ಬೆಳಗು ತಿರುವ ಈ ನಿಮ್ಮನ್ನು ಯಾವ ಬಗೆಯ ಸತ್ಕಾರದಿಂದ ನಲವಡಿಸಿ ಧನ್ಯನಾಗಲಿ?

15
(ಕ್ಷಣಕಾಲ ಕಿವಿಗೊಟ್ಟು ಕೇಳಿ, ಆ ಬಳಿಕ ಸಂಭ್ರಮದಿಂದ)

ಸಾಧು ಸತ್ಪುರುಷರೇ! ನಾಧುಸಾಧು!! ಪರಮ ಪಾವನರಾದ ತಮ್ಮಿಂದ ಆಜ್ಞಾಪಿಸಲ್ಪಟ್ಟ ನಾನು, ತಮ್ಮ ಪರತರಾನುಗ್ರಹ ಬಲ ದಿಂದಲೇ ಕೃತಕಾರನಾದೇನೆಂದು ನಂಬಿರುವೆನು. ಇರಲಿ; ನನ್ನ ಅನುಗಾಮಿಯೊಡನೆ ಆಲೋಚಿಸುವೆನು, (ಕರೆಯಕಡೆಗೆ ತಿರುಗಿ)-ನಟ 20 ರಾಜನೆ! ಎಲೈ ನಟರಾಜನೆ!!

ನಟರಾಜ:-(ಮುಂದೆ ಬಂದು ವಿನಯದಿಂದ) ಭರತಾಚಾರನ ! ಆಜ್ಞಾಧೀನನಿಗೆ ಏನಪ್ಪಣೆ ?

ಸೂತ್ರ:-ನಟರಾಜ! ಇದೆ ಇತ್ತ ನೋಡು! ನಮ್ಮ ಪೂರ್ವದ ಪುಣ್ಯಫಲದಿಂದ ನೆರೆದಿರುವ ಈ ದಿವ್ಯಸಭೆಯನ್ನು ಕಣ್ಣಣವಂತ

25 ನೋಡು, ಸತ್ಪುರುಷರ ಸಂದರ್ಶನ-ಸಹವಾಸಗಳು ಸಾಮಾನ್ಯವಲ್ಲ;