ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ.

ಮತ್ತು ಸುಲಭವಾಗಿ ಹೊಂದುವಂತಹದೂ ಅಲ್ಲ, ಬಹುಕಾಲದ ಪುಣ್ಯಫಲವೇ ಸಹಕರಿಸಿರಬೇಕು, ಇಂಥವರ ದರ್ಶನದಿಂದ ಅಕ್ಷಯ ವಾದ, ಅನಂತವಾದ, ಅಮೋಘವಾದ--ಸುಖಸಂಗತಿಯು ಸಂಗಡಿಸು ವುದು. ಆದುದರಿಂದ ಈ ಮಹನೀಯರನ್ನು ಒಂದು ಮುಹೂರ್ತ ಮಾತ್ರವಾದರೂ ಸೇವಿಸಿ, ಕೃತಾರ್ಥನಾಗಬೇಕೆಂದು ಭಾವಿಸುತ್ತೇನೆ.
ನಟ:-ಅಭಿಮತವು ಅತ್ಯುತ್ತಮವಾದುದೇ ಸರಿ. ನನಗೇನಪ್ಪಣೆ?
ಸೂತ್ರ:-ಮತ್ತೇನು? ದಯಾಘನರಾದ ಈ ಮಹನೀಯರನ್ನು ಯಾವುದಾದರೂ ಒಂದು ನಾಟಕಾಭಿನಯದಿಂದ ನಲವಡಿಸಬೇಕೆಂದಿರುವೆನು.
ನಟ:- ಅಭ್ಯಂತರವೇನು?
ಸೂತ್ರ:- ಅಭ್ಯಂತರವೇನೂ ಇಲ್ಲ; ಆದರೆ, ಇವರು ನನ್ನನ್ನು ಕುರಿತು ಹೀಗೆಂದು ಆಜ್ಞಾಪಿಸಿರುವರು.
ನಟ:- ಹೇಗೆಂದು ?
ಸೂತ್ರ:- "ಬಾಲಕರಿಗೆ ಸುಬೋಧವಾಗಿಯ, ವಿದ್ಯಾರ್ಥಿಗಳಿಗೆ ಜ್ಞಾನಪ್ರದವಾಗಿಯೂ, ಸತ್ಯಸಂಕಲ್ಪರಿಗೆ ಸಂತೋಷಪ್ರದವಾಗಿಯೂ, ದುರ್ಜನರಿಗೆ ದಂಡಾಧಿಕಾರಿಯಾಗಿಯೂ ಇರುವ ಯಾವುದೇ ಒಂದು ರೂಪಕಾಭಿನಯದಿ೦ದಾದರೂ ನಮ್ಮನ್ನುನಲವಡಿಸಬೇಕು."
ನಟ:-(ತಲೆದೂಗಿ) ಆರ್ಯನೇ! ಮಹನೀಯರು ಚೆನ್ನಾಗಿಯೇ ಕಟ್ಟುಮಾಡಿರುವರಲ್ಲವೆ? ದುರಾಚಾರರಾದ ನಾಸ್ತಿಕವಾದಿಗಳಿಂದ ಅಪದೆಸೆಗೀಡಾಗುತ್ತಿರುವ ಸನಾತನ ಧರ್ಮಸೂತ್ರಗಳನ್ನು ಇಂಥವರಲ್ಲದೆ ಮತ್ತಾರು ಉದ್ಧರಿಸಬೇಕು?
ಸೂತ್ರ:- ನಿಜ! ಆದರೆ ಇವರನ್ನು " ರಮಾನಂದ" ರೂಪ ಕಾಭಿನಯದಿಂದ ತೃಪ್ತಿಪಡಿಸಬಹುದಷ್ಟೆ? 25