ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸತೀಹಿತೈಷಿಣೀ,

ನಟ:— ಅದನ್ನು ಬಿಟ್ಟರೆ, ಮತ್ತಾವುದು ಈ ವೇಳೆಯಲ್ಲಿ ಇವರ ಮನೋರಂಜನವನ್ನುಂಟು ಮಾಡುವದು?

ಸೂತ್ರ:-ಆದರೆ, ನೋಡು; ನಮ್ಮ ಇಂದಿನ ಅಭಿನಯವು ಕೇವಲ ಮನೋರಂಜನ ಮಾತ್ರವೇ ಆಗಿರಬಾರದು, ಇದರಿಂದ ಕವಿಯ ಸಂದೇಶ, ನಾಟಕಯುಗ ಕಲ್ಪನೆಯನ್ನುಂಟು ಮಾಡಿದ ಮಹಾತ್ಮರ ಸಂಕಲ್ಪ, ಇವೆರಡೂ ಸಾಫಲ್ಯಹೊಂದುವಂತೆ, ನೋಟಕರ ಮನಸ್ಸು ಸಾರಾಸಾರ ವಿಚಾರದಿಂದ ಉತ್ಸಾಹಶಕ್ತಿಯನ್ನು ಬಲಪಡಿಸಿಕೊಳ್ಳುವಂತಿರಬೇಕು.

ನಟ:-ಯುಕ್ತವಾಗಿದೆ. ಇನ್ನು ನಾಟ್ಯವರ್ಗದವರನ್ನು ಎಚ್ಚರಿಸಬಹುದಷ್ಟೆ; ಹೇಗೆ?

ಸೂತ್ರ:-ನಿಜ! ನಮ್ಮ ನಾಟ್ಯವರ್ಗದವರನ್ನು ಈ ರೀತಿಯಾಗಿ ಎಚ್ಚರಿಸಬೇಕು.-"ರಂಗಸ್ಥಳದಲ್ಲಿ ಅತಿಯಾದ ಹಾವ-ಭಾವ ವಿಲಾಸ ಗಳನ್ನು ತೋರ್ಪಡಿಸಬಾರದು; ಶೃಂಗಾರವೇ ಪ್ರಧಾನರಸವೆಂದು ಹೇಳುತ್ತ ವಿರಹ-ವಿಹಾರ- ಸಂಭೋಗಗಳೇ ಮೊದಲಾದ ಹೇಯ ನಟನೆಗಳಿ೦ದ ನೋಟಕರ ಮನಸ್ಸನ್ನು ವಿಕಾರಕ್ಕೆ ಗುರಿಪಡಿಸುವಂತೆ ಮಾಡುವುದು ನಮ್ಮವರ ಕರ್ತವ್ಯಕ್ಕೆ ವಿರೋಧವು. ಇಲ್ಲಿ ನೆರೆದಿರ ತಕ್ಕವರಲ್ಲಿ ಅರಿವಿಲ್ಲದ ಬಾಲಕ ಬಾಲಿಕೆಯರೂ, ಅರಿತುದನ್ನು ಬಲಪಡಿಸಲು ಇನ್ನೂ ಸಾಹಸ ಪಡುತ್ತಿರುವ ತರುಣ ವಿದ್ಯಾಭ್ಯರ್ಥಿಗಳ ಸೇರಿರುವುದರಿಂದ ಇಂತವರಲ್ಲಿ ಕಾಮ, ಮೋಹ, ಮದ, ಮಾತ್ಸರ್ಯಗಳೆಂಬ ದುಷ್ಟ ಗುಣಗಳುಂಟಾಗುವಂತೆ ಮಾಡುವ ಅಭಿನಯವು ನಮಗೆ ತಕ್ಕುದಲ್ಲ. ನಮ್ಮ ಅಭಿನಯವು ಕವಿಗಳ ನಿಜವಾದ ಉದ್ದೇಶ ವೇನೆಂಬುದನ್ನು ಮಾತ್ರವೇ ತೋರಿಸುವಂತಿರಬೇಕಲ್ಲದೆ, ಅವರ ಉದ್ದೇಶ, ಕಥಾಸ್ವಾರಸ್ಯಗಳನ್ನು ಕೆಡಿಸಿ, ಅತಿಯಾದ,— ಅಸಹ್ಯಕರ ವಾದ,—ನರ್ತನೆಗಳಿಂದ ವಿಷಯಗಳನ್ನು ಹೊಲಗೆಡಿಸುವಂತಿರಬಾರದು. ಯಾವಾಗಲೂ, ಹೇಗೂ, ನಿಯಮವನ್ನು ಮೀರಿ ನಡೆಯದೆ, ಮಿತ