ಪುಟ:ರಮಾನಂದ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ವಾಗಿಯೂ, ಹಿತಕರವಾಗಿಯ, ಅರ್ಥವತ್ತಾಗಿ ಇರುವಂತೆ ವಿಷಯಸ್ವರೂಪವನ್ನು ಪ್ರದರ್ಶಿಸುವುದೇ ನಮ್ಮ ನಾಟಕಸಂಘದವರ ಮುಖ್ಯೋದ್ದೇಶವಾಗಿರಬೇಕು, ಅಲ್ಲದೆ, ನಮ್ಮಲ್ಲಿ ದ್ವೇಷಾಸೂಯೆ ಗಳಿಗೆ ಕಾರಣಗಳಾದ ಮತದೂಷಣೆಯೇ ಮೊದಲಾದ ಪರುಷಭಾಷಣ ವಿರಬಾರದು, ಸಕಲ ಜನಾಂಗಕ್ಕೂ ಮುಖ್ಯವಾಗಿರುವ ಮತವನ್ನೇ-- 5 ಎಂದರೆ, ಸತ್ಯದ ಘನತೆಯೊಂದನ್ನ ನಮ್ಮ ಏಕನಿಷ್ಠೆಯಲ್ಲಿರಿಸಿ, ಭಕ್ತಿ, ವಿನಯ, ವಿವೇಚನೆ, ಮನೋನಿಗ್ರಹ- ನಾಧನ ಬಲಗಳನ್ನು ಪ್ರಕಾಶ ಪಡಿಸುವ ವಸ್ತುಸ್ಥಿತಿ ನಿರೂಪಣವು ಕಾಲೋಚಿತವಾಗಿ ಪ್ರದರ್ಶಿಸಲ್ಪ ಡಬೇಕು, ನಮ್ಮ ಬಾಲಕ-ಬಾಲಿಕೆಯರು, ವಿದ್ಯಾಭ್ಯಾಸ-ಗುರುಕುಲ ವಾಸಗಳಿಂದ ಜಿತಚಿತ್ತರಾಗಿ, ದೇಶಸೇವಕರೆನ್ಸಿ ಸುವಂತೆ ಮಾಡುವ 10 ಹಿತೇಚ್ಛೆಯು, ನಮ್ಮೆಲ್ಲರ ಅಂತರಂಗದಲ್ಲಿಯೂ ಬಲವಾಗಿರಬೇಕು. ಇದಿಲ್ಲವಾದರೆ, ನಮ್ಮ ಪ್ರಯತ್ನ ವೂ, ಉದ್ದೇಶವೂ ಶ್ರಮವೂ ಸಾರ್ಥ ಕವೆನ್ನಿ ಸಲಾರವು. ಅಂತಹದರಿಂದ ನಮ್ಮ ದೇಶದ ಅಭಿವೃದ್ಧಿಗೆ ಆತಂ ಕವನ್ನೇ ತಂದೊಡ್ಡಿದಂತಾದೀತು, ಇದನ್ನು ತಿಳಿಯಲೊಲ್ಲದೆ, ಬರಿಯ ಪಾಮರ ಮನರಂಜನೆಯನ್ನು ಉಂಟುಮಾಡುತ್ತಿರುವುದರಿಂದಲೇ 15 ನಮ್ಮ ನಾಟಕವರ್ಗದವರು ಬಹುಜನರ ಅಪನಿಂದೆಗೆ ತುತ್ತಾಗಿ ಹೋಗುತ್ತಿರುವರು, ಯಾರ ಬಾಯಲ್ಲಿ ನೋಡಿದರೂ ನಾಟಕಾವ ಲೋಕನದಿಂದ ಮನಸ್ಸು ವಿಷಯಾತುರದಲ್ಲಿ ಬಲಿ ಬೀಳುವುದೆಂಬ ನಿಂದೆಯೇ ಹೊರಹರಡುವಂತಾಗಿರುವುದು, ಇದು ಸಾಲುದುದಕ್ಕೆ ಪಾಶ್ಚಾತ್ಯ ನಾಗರಿಕತೆಯೆಂಬದೊಂದು ಬೇರೆ ಮುಂದೆ ಬಂದು, ಪಾಶಾ 20 ಪಾತ್ರವನ್ನೂ, ವ್ಯಕ್ತಿ-ಸ್ವಭಾವ-ಧರ್ಮಗಳನ್ನೂ ನೋಡದೆ ಮನಬಂ ದಂತ ಕುಣಿದಾಡುತ್ತಿರುವದು-ನಾ ನಾಟಕಸಂಘಕ್ಕೂ ನಾಟಕ ಯುಗವನ್ನು ನಿರ್ಮಿಸಿದ ಮಹನೀಯರಿಗೂ ಕಲಂಕವನ್ನ ಹೊರೆಯಿ ಸುವಂತಾಗಿ ತಿರುಗಿದೆ, ಇನ್ನು ಮುಂದೆಯಾದರೂ ನಾವು ಕಣ್ಣೆರೆದು | ನೋಡದೆ, ನಮ್ಮ ಆರ ಧರವನ್ನು ವಿಚಾರವಿಮರ್ಶೆಯಿಂದ ಪ್ರಸಾರಕ್ಕೆ 25