ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸತೀಹಿತೈಷಿಣೀ.

ತರದೆ ಕೇವಲ ಕ್ಷಣಿಕ ವಿಷಯಗಳಲ್ಲಿಯೇ ಬೆರೆದು, ಮೆರೆದೆವಾದರೆ, ನಮಗೆ ಎಂದಿಗೂ ಅಪಕೀರ್ತಿಯು ತಪ್ಪುವುದಿಲ್ಲ."

ನಟರಾಜ:-ಆರ್ಯ! ಹಿತಸೂಚನೆಗಳನ್ನು ಶಿರಸಾವಹಿಸಿದೆನು, ಇನ್ನೂ ಉಳಿದಿರಬಹುದಾದ ಸೂಚನೆಗಳಿದ್ದರೆ, ನಿರೂಪಿಸಬೇಕು.

ಸೂತ್ರ:- ಅಯ್ಯಾ, ನಟರಾಜ! ಮೇಲೆ ಹೇಳಿದ ವಿಚಾರಗಳೆಲ್ಲವೂ ನಿನ್ನ ಸ್ಮೃತಿ ಪಥದಲ್ಲಿ ದೃಢವಾಗಿರಲಿ, ನಾವು ಈಗ ತೋರ ಬೇಕಾದ ಪ್ರದರ್ಶನವು, ಮಕ್ಕಳು ಮುಂದೆ ಮಂದಿಗಳಾಗುವಂತೆ ಮಾಡಬೇಕೆಂಬ ಉದ್ದೇಶವಾಗಿರುವದು; ಇದಕ್ಕಾಗಿ ಬಾಲ್ಯಸುಶಿಕ್ಷಣ, ಪ್ರೌಢಶಿಕ್ಷಣಗಳಲ್ಲಿ ಅವರ ಮನೋಧರ್ಮವು ಎಂತಹದಾಗಿರಬೇಕೆಂಬುದನ್ನು ಬಹು ಜಾಗರೂಕತೆಯಿಂದ ತೋರಿಸಬೇಕು.

ನಟ:- ಹೇಗೆಂಬುದನ್ನೂ ನಿರೂಪಿಸಬೇಕು.

ಸೂತ್ರ:- ಹೇಗೆಂದರೆ-ನಾವು ತೋರುವ ಉದಾಹರಣೆಯಲ್ಲಿ ಪ್ರಧಾನ ಪಾತ್ರದ ಸ್ವಭಾವ, ಧರ್ಮ, ಧೈಯಗಳೆಂತಹವೆಂಬುದನ್ನು ತಿಳಿದು, ಅದಕ್ಕನುಗುಣವಾದ ವೇಷ-ಭಾಷೆಗಳನ್ನು ಕಾಲಕ್ಕೆ ತಕ್ಕಂತೆ ಉಪಯೋಗಿಸಬೇಕು. ಅಲ್ಲದೆ, ನಾಟ್ಯ ವರ್ಗದವರು ಮದ್ಯವೇ ಮೊದಲಾದ ಮಾದಕ ದ್ರವ್ಯವನ್ನು ಖಂಡಿತವಾಗಿಯೂ ಸೇವಿಸಕೂಡದೆಂದು ಕಟ್ಟು ಮಾಡಬೇಕು, ಏಕೆಂದರೆ-ಮಾದಕದ್ರವ್ಯ ಸೇವನೆಯಿಂದ ಅದರಲ್ಲಿ ತಾರತಮ್ಯ ಜ್ಞಾನವೂ, ಜ್ಞಾಪಕಶಕ್ತಿಯ ತಪ್ಪಿಹೋಗಿ, ಬುದ್ದಿ ನಷ್ಟವಾಗುವದು, ಅದರಿಂದ ಅವರು ಅಕ್ರಮದಿಂದ ಅಭಾಸವನ್ನೇ ಉಂಟುಮಾಡುವರು. ಹಾಗಾಗದಂತೆ ನೋಡಿಕೊಳ್ಳಬೇಕೆಂಬುದೇ ನನ್ನ ಹಿತಸೂಚನೆಯಾಗಿದೆ.

ನಟ:- ಆದರೆ, ನಾಟ್ಯ ವರ್ಗದವರು ರಾತ್ರಿಯೆಲ್ಲ ನಿದ್ದೆಗೆಟ್ಟು; ಕೂಗಿ ಕೂಗಿ ಕಂಠಶೋಷಣ ಮಾಡಿಕೊಳ್ಳಬೇಕಾಗಿರುವುದು, ಅದಕ್ಕಾಗಿ ಅಷ್ಟು ಆಯಾಸವುಂಟಾಗದಿರಬೇಕೆಂದು ಮಾದಕದ್ರವ್ಯವನ್ನು ಸೇವಿಸುವುದೇ ಅವರಿಗೆ ವಾಡಿಕೆಯಾಗಿ ಬಂದಿರುವುದು, ಅದನ್ನು