ಪುಟ:ರಮಾನಂದ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ಹೇಗೆ ತಪ್ಪಿಸುವುದು ? ಸೂತ್ರ:- ನಟರಾಜ! ಅದನ್ನು ಯಾರೇ ಆಗಲಿ ಹತ್ತಿರಕ್ಕಾ ದರೂ ಸೇರಿಸುವುದು ಸರಿಯಲ್ಲ. ಮದ್ಯ ಸೇವನೆಯಿಂದ ಅವರ ಮಿದು ಳಿನಲ್ಲಿ ಮತ್ತು ಅವರ ಹೃತ್ಥೋಶದಲ್ಲಿ ರುವ ಸಿಗ್ಧರಸವೇ ಮಾಯವಾಗಿ, ಅನೇಕ ದುರ್ವಿಷಯಗಳು ಅಂಕುರವಾಗುವುವು, ದೇಶಹಿತೈಷಿಗಳು 5 ಅಂತಹ ತಾಮಸವೃತ್ತಿಯನ್ನು ಹಿಡಿಯದೆ, ಯಾವಾಗಲೂ ಸಾತ್ವಿಕ ತ್ರಿಯನ್ನೇ ಅವಲಂಬಿಸಬೇಕು, ಸಾತ್ವಿಕವೃತ್ತಿಗೆ ಸಾಕಾಹಾರವೇ ಬೇಕು, ದುರಾಚಾರ, ಅಪೇಯಪಾನ, ದುರಿಷಯಚಿ೦ತನೆಗಳು ಸರ್ವಥಾ ಕೂಡದು ನಟ:- ಹಾಗಾದರೆ, ಅವರ ಮನೋಲ್ಲಾಸಕ್ಕೂ, ಶಕ್ತಿ' 10 `ಗೂ, ಸ್ವತ್ತೇಜನಕ್ಕೂ ಯಾವ ಅನುದಾನವನ್ನು ವಿಧಿಸಬೇಕು? - ಸೂತ್ರ:- ನಟರಾಜ! ಕೇಳು, ನಮ್ಮ ಪೂರ್ವಜರು ಯಾವ ಸೂತ್ರವನ್ನು ಮುಂದಿಟ್ಟು ಕೊಂಡು ನಡೆಯುತ್ತಿದ್ದರೂ, ಅದನ್ನೇ ನಾವೂ ಅನುಸರಿಸಬೇಕಲ್ಲದೆ, ನಮ್ಮ ಜನ್ಮಭೂಮಿಗೂ, ದೇಹದ ರ್ಮಕ್ಕೂ ಮತ್ತು ನಮ್ಮ ಮತಾಚಾರ-ಪೂರ್ವಸಂಪ್ರದಾಯಗಳಿಗೂ 15 ಹಾನಿಯನ್ನುಂಟುಮಾಡುವ ಪಾಶ್ಚಾತ್ಯ ಪದ್ಧತಿಯನ್ನು ಹಿಡಿಯುವುದು ಸರಿಯಲ್ಲ. ಹಾಗೆ ನಮ್ಮ ನಾಟ್ಯ ವರ್ಗದವರು ಸೇವಿಸಬೇಕಾದರೆ, ಸಕ್ಕರೆ-ಕೇಸರಿಗಳಿಂದ ಕೂಡಿದ ಗೋಕ್ಷೀರವನ್ನೇ ಸೇವಿಸಲಿ, ಗೋ ಕ್ಷೀರಕ್ಕೂ ಮಿಗಿಲಾದ ಪಾನವೂ, ಆಹಾರವೂ ಮತ್ತೊ೦ದಿರುವದಿಲ್ಲ. ಅದರಿಂದ ಎಳೆಮಿದುಳಿಗೆ ಮತ್ತಷ್ಟು ರಸವಿಷಯವಿಜ್ಞಾನವು ಸುರಿಸುವ 20 ದಲ್ಲದೆ, ಮನಸ್ಸು ಶಾಂತಸ್ಥಿತಿಯಲ್ಲಿದ್ದು, ಪ್ರತಿಯೊಂದು ಕೆಲಸವನ್ನೂ ಜಾಗರೂಕತೆಯಿಂದ ನಿರ್ವಹಿಸಿ, ಸತ್ಸಹವಾಸ- ನಾರಾಸಾರ ವಿಚಾರ ಗಳಿ೦ದ ಅರ್ಥಸಿದ್ಧಿ ಹೊಂದುವಂತೆ ಮಾಡುವುದು. ತೆರೆಯಲ್ಲಿ: ಸಾಧು! ಭರತಾಬಾರನೆ! ಸಾಧುಸಾಧು !! ನಿನ್ನೀ ಉಪದೇ ಶಾಮೃತವರ್ಷವು ಸಕಲ ಜನಾಂಗಕ್ಕೂ ಜ್ಞಾನವನ್ನುಂಟುಮಾಡು ವುದಾಗಿದ್ದರೆ, ಆಗ 25