ಈ ಪುಟವನ್ನು ಪ್ರಕಟಿಸಲಾಗಿದೆ
೮
ಸಶೀಹಿತೈಷಿಣೀ
ಲೀಗ ನಿನ್ನ ಪ್ರಯತ್ನವು ಸಾಧು. "
ನಟ:-(ವಿಸ್ಮಯದಿಂದ ಕರೆಯಕಡೆ ತಿರುಗಿ) (ಆರ್ಯ! ಅದಾರು? ಸಾಧು ವಾದನ ಮಾಡುತ್ತ ಈ ಕಡೆಯೇ ಬರುತ್ತಿರುವರು?'
ಸೂತ್ರ:- ( ತೆರೆಯಕಡೆ ನೋಡಿ ಸಂಭ್ರಮದಿಂದ ) ' ನಟರಾಜ! ಈತನೇ ಸ್ವರ್ಣನಗರಿಗೆ ಒಡೆಯನಾದ ಶ್ರೀಮಂತರಾಯನ ಸಚಿವನ್ನೂ, ಹಿತಚಿಂತಕನೂ, ನ್ಯಾಯಮೂರ್ತಿಯೂ ಆದ 'ಕ್ಷೇಮದರ್ಶಿ' ನಾಮಕಸುಬ್ರಾಹ್ಮಣನು, ಈತನು ರವಾನಂದ ಕುಮಾರನ ಅಭ್ಯುದಯ ಕಾಂಕ್ಷಿಯಾಗಿ, ವಿದ್ಯಾವಾಗೀಶ ಮಹಾಮಹೋಪಾಧ್ಯಾಯರ ಬಳಿಗೆ ಬರುತ್ತಿರುವನು. ಇನ್ನು ನಾವಿಲ್ಲಿ ವಿಳಂಬಿಸುವುದು ಸರಿಯಲ್ಲ. ಮುಂದಿನ ಪಾತ್ರಗಳನ್ನು ಸಿದ್ದ ಪಡಿಸುವಾ ನಡೆ.' (ಇಬ್ಬರೂ ತೆರಳುವರು.)
ಇದು ಪ್ರಸ್ತಾವನೆ