ಪುಟ:ರಮಾನಂದ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಶ್ರೀ | ಪ್ರಥಮಾಂಕ ಪ್ರಾರಂಭ. ( ಕ್ಷೇಮದರ್ಶಿಯ ಪ್ರವೇಶ, ) ಕ್ಷೇಮ:- ( ಮೇಲೆ ನೋಡಿ ) ತ್ರಿಕಾಲವಂದ್ಯನಾದ ಭಗವಾನ್ ದಿನನಾಥನಿಗೆ ವಂದನೆ, ( ಸಭೆಯ ಕಡೆಗೆ ತಿರುಗಿ ) ಲೋಕದಲ್ಲಿ ಪ್ರತಿ ಮಾನವನ ಉನ್ನತಿಗೂ, ಅವನತಿಗೂ ಸಹವಾಸವೇ ಕಾರಣವೆನ್ನ ಬೇಕು, ಸಹವಾಸವು ಸರಿಯಾಗಿಲ್ಲ ದಿದ್ದರೆ, ಸತ್ಕುಲದಲ್ಲಿ ಹುಟ್ಟಿದ ಮಾತ್ರದಿಂದ ಉನ್ನತಿಯನ್ನು ಪಡೆಯಲಾರನು. ಇದಕ್ಕೆ ಉದಾಹರ ಣೆಗೆಂದರೆ ನಮ್ಮ ಶ್ರೀಮಂತನ ಕುಮಾರರೀರ್ವರ ವಿಚಾರವನ್ನು ತೆಗೆದು ಕೊಂಡರೆ ಸಾಕಾಗಿದೆ. ಆದರೆ, ಸುಜನರ ಸಹವಾಸವನ್ನು ಹೊಂದು ವುದಕ್ಕೆ ಬಾಲ್ಯ ಸುಶಿಕ್ಷಣೆ ಸಹಕಾರಿಯಾಗುವುದೆಂದರೆ ತಪ್ಪಾಗದು. ಅದಿಲ್ಲವಾದರೆ ಪಾತ್ರಸ್ವರೂಪಜ್ಞಾನವೂ, ಅದರಿಂದಾಗುವ ಫಲಾನು ಭವವೂ ಅವರ ಮನಸ್ಸಿಗೆ ಹೊಳೆಯಲಾರವು, ಈ ವಿಚಾರದಲ್ಲಿ ತಾಯ್ತಂದೆಗಳೂ, ಪೋಷಕರೂ ಅಥವಾ ಗುರುಜನರೂ ಬಹು ಜಾಗರೂಕರಾಗಿರಬೇಕಾದುದು ಅತ್ಯವಶ್ಯಕವ. ( ಕೆಲವು ಹೊತ್ತು ಸುಮ್ಮನಿದ್ದು ಬಳಿಕ ಎಚ್ಚತ್ತು ) ಏನಿದು ! ಸಹವಾಸದ ಫಲಾನುಭವದ ವಿಚಾರವನ್ನು ವಿಮರ್ಶಿಸುತ್ಯ, ನಾನು ಬಂದ ಕೆಲಸವನ್ನೇ ಮರೆತಿದ್ದೆ ನು. ಈಗಾಗಲೇ ಬಿಸಲೇರುತ್ತ ಬರುತ್ತಲಿದೆ. ಇನ್ನು ತಡಮಾಡಿದರೆ ನನಗೆ ಮಹೋಪಾಧ್ಯಾಯರ ದರ್ಶನವು ದುರ್ಲಭವಾದೀತು, ನಾನಿನ್ನು ಹೊರಡುವೆನು, (ಹೊರಡುವನು) - ಸ್ನಾನ ೧:- ವಿದ್ಯಾವಾಗೀಶನ ಅಕ್ಕಿ ಕ ಸ್ಥಳ. ( ಕ್ಷೇಮದರ್ಶಿಯು ಪ್ರವೇಶಿಸಿ, ಮುಂದೆ ಬಗ್ಗಿ ನೋಡಿ ) ಆಹಾ! ಇದ ಇವೆ, ಪೂಜ್ಯರ ವಿದ್ಯಾಭವನವ? ( ಮುಂದಕ್ಕಡಿಯಿಟ್ಟು ನೋಡಿ )