ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ.
೧೩

 ಸುದ್ದಿಯು ಸಂತೋಷಪ್ರದವೇ ಸರಿ, ಹೇಗಾದರೂ ಆತನು ದಾರಿಗೆ ಬಂದರೆ ಸಾಕಾಗಿದೆ.
ಕರಣಿಕ:- ಸ್ವಾಮಿ! ತಮ್ಮ ಪರಿಶುದ್ಧಾಂತ:ಕರಣದ ತಪೋ ಬಲದಿಂದ ಎಲ್ಲವೂ ಶುಭವೇ ಆಗುವುದು.
ತೆರೆಯಲ್ಲಿ-" ಇತ್ತ ಬರಬೇಕು, ಇಲ್ಲಿಯೇ ಶ್ರೀಮಂತನಿರುವುದು,”
5, ಕರಣಿಕ:- (ತೆರೆಯ ಕಡೆಗೆ ನೋಡಿ) ಇದೊ ಇದೊ, ಉಪಾಧ್ಯಾ ಯರೊಡನೆ ಪ್ರಧಾನಿಯೇ ಬರುವಂತಿದೆ.
ಶ್ರೀಮಂತ:- ಎಲ್ಲಿ ?' (ಎಂದು ಸಂಭ್ರಮದಿಂದ ಎದ್ದು ನಿಲ್ಲುವನು)
(ಕ್ಷೇಮದರ್ಶಿಯೊಡನೆ ವಿದ್ಯಾವಾಗೀಶನ ಪ್ರವೇಶ.)
ಶ್ರೀಮಂತ:- (ಕೈ ಮುಗಿದು ಪೂಜ್ಯರಿಗೆ ವಂದನೆ ! ಸುಖಾಸೀನರಾಗಿ ಅನುಗ್ರಹಿಸಬೇಕೆಂದು ಪ್ರಾರ್ಥನೆ.
ವಿದ್ಯಾ:- ಕಲ್ಯಾಣಮಸ್ತು; ಎಲ್ಲರೂ ಕುಳ್ಳಿರಿ.

(ಎಂದು ಎಲ್ಲರೊಡನೆ ಕುಳಿತುಕೊಳ್ಳುವನು.)

ಶ್ರೀಮಂತ:- ಪೂಜ್ಯರೆ! ಸತ್ಪುರುಷರ ಸಂಗತಿಗೂ ಹೆಚ್ಚಾದ ತಪೋಶಕ್ತಿಯಿಲ್ಲವಾದುದರಿಂದ, ತಮ್ಮ ಇಂದಿನ ದರ್ಶನ-ಸಂಭಾಷಣಾದಿಗಳಿಂದ ನಾನೇ ಕೃತಾರ್ಥನಾದನೆಂದು ಭಾವಿಸುತ್ತೇನೆ.
ವಿದ್ಯಾ:- ಸಂತೋಷ; ಕರೆಯಿಸಿದ ಉದ್ದೇಶವೇನು ?
ಶ್ರೀಮಂತ:- ನನ್ನ ದ್ವಿತೀಯ ಪುತ್ರ, ರಮಾನಂದ ಕುಮಾರನನ್ನು ಪ್ರೌಢಶಿಕ್ಷಣಕ್ಕೆಂದು ತಮ್ಮ ವಶಪಡಿಸುವ ಸಂಕಲ್ಪ.
ವಿದ್ಯಾ:- ಕುಮಾರನ ವಯಸ್ಸು ?
ಶ್ರೀಮಂತ:- ಹದಿನಾರು.
ವಿದ್ಯಾ:- ಈ ವರೆಗೆ ಆಗಿರುವ ವ್ಯಾಸಂಗ ?
ಶ್ರೀಮಂತ:- ಜ್ಞಾನೋತ್ಪತ್ತಿಯಾಗುವವರೆಗೆ, ಎಂದರೆ ಪ್ರಾಥಮಿಕ ಶಿಕ್ಷಣಾಭಾಗವೆಲ್ಲವೂ ಕ್ರಮವಾಗಿ ನಡೆದಿರುವುದು
ವಿದ್ಯಾ:- ಶಿಕ್ಷಿತ ಸ್ಥಲವೊ?