ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨
ಸತೀಹಿತೈಷಿಣೀ

ಸತ್ಯವ್ರತನು ವಂದನಾಪೂರ್ವಕವಾಗಿ ನಿವೇದಿಸುವುದೇನೆಂದರೆ:-
ತಮ್ಮ ಆಯುಷ್ಯಂತನಾದ ರವಿವರ್ಮನನ್ನು ತಮ್ಮ ನಿರೂಪ
ದಂತಯೇ ಸರ್ವ ಪ್ರಯತ್ನದಿಂದಲೂ ಪರೀಕ್ಷಿಸಿದುದಾಯಿತು, ಈ
ಕಾಲದ ಸೊಕ್ಕಿನ ಮಕ್ಕಳಲ್ಲಿ ಕಾಣುವ ಆವಿಚಾರ, ದುರಹಂಕಾರ,
ಪರಸ್ವಾ ಪಹಾರ, ದುರಾಹಾರ, ವಿಹಾರಗಳೆಲ್ಲವೂ ತೋರಿಬಂದುವು.
ಇದಕ್ಕೆ ಕಾರಣಗಳೇನೆಂದು ವಿಚಾರಮಾಡುವಲ್ಲಿ, ಸಹವಾಸವು ಸರಿ
ಯಾಗಿಲ್ಲ ಎಂದು ತಿಳಿದುಬಂದಿತು,ಇದಕ್ಕಾಗಿ ಪ್ರಯಾಸಪಟ್ಟು,ನಯ
ಭಯದಿಂದ ಕುಮಾರನಿಗೆ ಬುದ್ದಿ ಗಲಿಸಿ, ದುಸ್ಸಹವಾಸವನ್ನು ಬಿಡಿಸಿ, ಕೇವಲ ಮನೆಯವರೊಡನೆ ಮಾತ್ರವೇ ವ್ಯಾಸ೦ಗಿಸುವಂತೆ ಮಾಡಿರು ವುದು, ಈ ವರೆಗೆ ಅವಿಧೇಯನಾಗಿದ್ದವನು, ಈಗೀಗ ವಿನಯವನ್ನು ಅಭ್ಯಾಸಕ್ಕೆ ತರುತ್ತಿರುವುದರಿಂದ ಮುಂದೆಯಾದರೂ ಸುಸ್ಥಿತಿಗೆ ಬಂದಾ ನೆಂಬ ಆಶಾಂಕುರವುಂಟಾಗಿದೆ. ಅದುದರಿಂದ ಈ ವೇಳೆಯಲ್ಲಿ ಅವನ ಮನಸ್ಸು ಪರಿಪಕ್ವ ಹೊಂದುವಂತೆ, ನಯಮಾರ್ಗದಲ್ಲಿ ಯೇ, ನೀತಿ ಬೋಧೆಗಳನ್ನು ತಮ್ಮ ಸ್ವಹಸ್ತಾಕ್ಷರದಿಂದಲೇ ಬರೆದು ಕಳುಹುತ್ತಿರ ಬೇಕೆಂದು ಕೋರುತ್ತಿರುವೆನು. ಈ ವಿಚಾರವನ್ನು ನನ್ನ ಪೂಜ್ಯ ಭಗಿನಿಗೆ ನಿವೇದಿಸಬೇಕಲ್ಲದೆ, ರವಿವರ್ಮನನ್ನು ಬಾಲ್ಯದಿಂದ ಮುದ್ದಿಸಿ , ಬೆಳೆಸಿದುದಕ್ಕೆ ಈಗ ಹೊಂದುತ್ತಿರುವ ಫಲವನ್ನು ನೆನಪಿನ ಲ್ಲಿಟ್ಟು, ರಮಾನಂದ ಕುಮಾರನ ಸುಶಿಕ್ಷಣದಲ್ಲಿಯಾದರೂ ವಿಶೇಷ ಗಮನವಿಡಬೇಕೆಂದೂ, ಆತನ ಶಿಷ್ಟಾಚಾರದ ಮಹಿಮೆಯಿಂದಲಾ ದರೂ ರವಿವರ್ಮನು ಸನ್ಮಾರ್ಗಗಾಮಿಯಾಗುವಂತ ಭಗವಂತನು ಅನುಗ್ರಹಿಸಬೇಕೆಂದೂ ಕೋರುತ್ತಿರುವೆನು.

ಇತಿ ನಿರಂತರ ವಿಧೇಯನಾದ


ಸತ್ಯವ್ರತ "


ಶ್ರೀಮ೦ತ:- ಆಯ್ಯ! ಈ ವರೆಗೆ ಕುಶಲವಾರ್ತೆಯನ್ನೇ ಕೇಳದಿದ್ದ ನನಗೆ, ಇಂದು ಮಗನು ಒಳ್ಳೆಯ ದಾರಿಗೆ ಬರುವನೆಂಬ