ಪುಟ:ರಮಾನಂದ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತ್ಯಹಿಣಿ ಚೀಟಿ:ಬಂದವನು ನೆಟ್ಟಗೆ ತಂದೆಯ ಬಳಿಗೆ ಹೊರಟು ಹೋದನು. ವಸು:- ಸುಕುಮಾರ-ರಮಾನಂದನು ಎಲ್ಲಿ ರುವನು? ಚೇಟಿ:- ಮಂತ್ರಾಲಯದಲ್ಲಿ ತಂದೆಯಬಳಿಯಲ್ಲಿ ರುವನು. “5 ವಸು:- ಕುಮಾರನನ್ನು ಪ್ರೌಢಶಿಕ್ಷಣಕ್ಕಾಗಿ ಗುರುಕುಲ ವಾಸಕ್ಕೆ ಕಳುಹಬೇಕೆಂದು ಗೊತ್ತಾಗಿದ್ದ ದಿನವೇ ಇದಲ್ಲವೆ ? ಚೀಟಿ: ಅಹುದು, ಅದಕ್ಕಾಗಿಯೇ ಮಹಾಮಹೋಪಾಧ್ಯಾ ಯ ರಾದ ವಿದ್ಯಾವಾಗೀಶರನ್ನು ಕರೆತಂದಿರುವರು. ವಸು:- (ಕುತೂಹಲದಿಂದ) ಆ ಮಹನೀಯರೇ ಇಲ್ಲಿಗೆ ಬಂದಿ 10 ರುವರೆ? ಹಾಗಿದ್ದರೆ, ನಮ್ಮ ಮತ್ತು ಸುಕುಮಾರರ ಸುಕೃತಗಳಿಗೆ ಮೇರೆಯೇ ಇಲ್ಲ ದಂತಾಗುವುದೆಂದು ಭಾವಿಸುತ್ತೇನೆ. ಚೇಟಿ:- (ಕೆರೆಯ ಕಡೆ ನೋಡಿ) ' ದೇವಿ! ಇದೊ, ರವಿವರ್ಮ ಕುಮಾರನೇ ಬರುತ್ತಿರುವನು.' (ರವಿವರ್ಮನ ಪ್ರವೇಶ.) ವಸು:- (ಹರ್ಷಾತಿರೇಕದಿಂದ) 'ವತ್ಸ ! ಸುಖವಾಗಿರುವಿಯಷ್ಟೆ? ಬಾ, ಕುಳಿತುಕೊ.? - ರವಿ: - (ಮುಂದೆ ಬಂದು, ತಾಯಿಗೆ ನಮಸ್ಕರಿಸಿ, ಆಕೆಯ ಬಳಿಯಲ್ಲಿ ಕುಳಿತು, ಅಮ್ಮ! ನಿಮ್ಮ ಆಶೀರ್ವಾದದಿಂದ ಸುಖವಾಗಿದ್ದೇನೆ, ನೀವು - ಮಗನ ಕ್ಷೇಮಲಾಭವನ್ನು ಕೇಳದಿದ್ದರೂ, ನಾನೇ ನಿಮ್ಮನ್ನು ಬಿಟ್ಟಿರ 20 ಲಾರದೆ ಬಂದಿರುವೆನು. ವಸು:- ಮಗುವೇ, ನಿನ್ನನ್ನು ಬಿಟ್ಟಿರಬೇಕೆಂದು ನನ್ನ ಇಷ್ಟ ವಾಗಿಲ್ಲ. ಆದರೆ ಮಾಡತಕ್ಕುದೇನು? ಸೋದರಮಾವನ ಬಳಿಯಲ್ಲಿ ಯಾದರೂ ವ್ಯಾಸಂಗಿಸಲೆಂಬ ಆಶೆಯಿಂದ ಬಿಟ್ಟಿದ್ದೆವು; ಅಷ್ಟೆ. - ರವಿ:- ಹೇಗಾದರೂ ಮಾಡಿರಿ; ಅಮ್ಮ ನನ್ನ ವಿಷಯದಲ್ಲಿ 25 ನೀವು ಹೇಗಾದರೂ ಇರಬಹುದು, ಅದರಿಂದ ನನಗೇನೂ ವ್ಯಸನ