ಪುಟ:ರಮಾನಂದ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸತೀಹಿತ್ಯ ಷಿಣೀ ಮುಂಬರಿದು ಹೋಗುವಂತೆ ಮಾಡುವ ಸಹಕಾರ ಪಾತ್ರವೂ ಉಂಟಾ ಗುವವರೆಗೆ ಮಾತ್ರವೇ ತಾಯಿತಂದೆಗಳಲ್ಲಿ ವಿಧೇಯರಂತೆ ನಟಿಸು ವುದೂ, ಅವುಗಳನ್ನು ಆ ತಮ್ಮ ಹಿರಿಯರಿಂದ ಸಂಪಾದಿಸಿಕೊಂಡರೆ, ಆಗಲೇ, ಅದು ಮೊದಲೇ, ಆ ತಾಯಿತಂದೆಗಳಲ್ಲಿ ಉದಾಸೀನ, 5 ಮತ್ಯಾದೋಲ್ಲಂಘನ ಕ್ರೂರವರ್ತನಗಳನ್ನು ತೋರಿಸುವುದೂ ಸತ್ತು ತ್ರನನ್ನಿ ಸಬೇಕಾದ ನಿನಗೆ ತಕ್ಕುದಲ್ಲ ವೆಂದು ಚೆನ್ನಾಗಿ ನಂಬು; ಬಲ ವಾಗಿ ತಿಳಿದಿರು. - ಕುಮಾರ ಇಂದಿನವರೆಗೆ ನಿನಗಾಗಿರುವ ವೃಧಾಕಾಲಹರಣದ ಅಪಾರ ನಷ್ಟಕ್ಕೆ ಕಾರಣನು ನೀನೊಬ್ಬನೇ ಅಲ್ಲ, ಆದಿಯಲ್ಲಿ ಎಂದರೆ 10 ನಿನ್ನ ಶೈಶವದಿಂದ ಮೊದಲು, ನಿನ್ನ ಬಾಲ್ಯ ಸುಶಿಕ್ಷಣೆಯ ಸೀಮೆಯ ವರೆಗೂ ನಾವು ಕೊಡಬೇಕಾಗಿದ್ದ ಗಮನವೇ ಮರೆಯಾಗಿದ್ದು, ನಿನ್ನ ನ್ನು ಅತಿಯಾಗಿ ಮುದ್ದಿಸಿ, ಉಬ್ಬಿಸಿ, ನಿನಗೆ ಮದವೇರುವಂತೆ ನಿನ್ನ ನ್ನು ಬಗೆಬಗೆಯಾಗಿ ನಲಿದಾಡಿಸಿ, ಹಿಗ್ಗು ತ್ತಿದ್ದ ನಮ್ಮ ಅವಿಚಾ ರವೇ ಆಂಕುರವಾಯಿತು, ಸಹವಾಸದೊಷವೂ ಮತ್ತು ನಿನ್ನ ಆಲಸ್ಯ 15 ಅಭಿಮಾನ, ಆಶಾಪರತೆಗಳೂ ಅದನ್ನು ಕ್ರಮಕ್ರಮವಾಗಿ ಬೆಳೆಯಿಸಿ, ಈಗ ವೃಕ್ಷರೂಪಕ್ಕೆ ತಂದಿರುವುವು, ಇನ್ನಿ ದರ ಫಲಾನುಭವಕ್ಕೆ ನಾವೂ ಭಾಗಿಗಳಾಗಿಯೇ ಇರುವೆವ, ಆದುದರಿಂದ, ಎಲೈ ಮಗುವೆ? ನಮ್ಮ ವಿಚಾರಶೂನ್ಯತೆಗಾಗಿ ಈಗ ಪರಿತಪಿಸುತ್ತಿರುವ ನಮ್ಮನ್ನು ನೋಡಿ, ನಿನ್ನ ಈವರೆಗಿನ ವರ್ತನವನ್ನು ಪರಿವರ್ತನಕ್ಕೆ ತರುವ ಪ್ರಯತ್ನವನ್ನು 20 ಹಿಡಿ, ನಿನ್ನ ಮುಂದಿನ ಅಭ್ಯುದಯದಲ್ಲಿಯೂ ನಿನ್ನ ಜನ್ಮಧಾರಣೆಗೆ ಕಾರಣರ ಆಧಾರಭೂತರೂ ಆಗಿರುವ ಜನನೀಜನಕರನ್ನು , ಸಂ. ತೋಷಪಡಿಸಿ ಕೃತಾರ್ಥತೆಯನ್ನು ಹೊಂದಬೇಕೆಂಬ ದೃಢಸಂಕಲ್ಪ ವನ್ನು ಮಾಡಿ, ಕರ್ತವ್ಯದಲ್ಲಿ ಕನ್ನೊಡ್ಡಿ ನಿಲ್ಲು. ಇನ್ನೇನು ಹೇಳಲಿ? ಇಂದಿಗೆ, ಇಷ್ಟಕ್ಕೆ ಸಾಕಾಗಿರಲಿ, ನೀನು ಇಂದಿನ ನನ್ನ ಹಿತವಾದ 25 ವನ್ನು ಕೇಳಿ, ಮುಂದಕ್ಕೆ ಬರುವೆಯೆಂಬ ನನ್ನ ನಿರೀಕ್ಷೆಗೆ ಭಗವಂತನೇ