ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಸತೀಹಿತೈಷಿಣೀ

ಇಲ್ಲಿಗೆ ಬರುವರೆಂಬ ವಿಚಾರವೂ ನಿಜ, ಮತ್ತೇನು ಹೇಳಬೇಕು?

ಚೇಟ:-( ತೆರೆಯಕಡೆ ನೋಡಿ ಸಂಭ್ರಮದಿಂದ ) ಮಂಗಳವಾಗಲಿ; ಸುಕುಮಾರ ರಮಾನಂದನಿಗೆ ಸುಖಾಗಮನವು.

( ರಮಾನಂದನ ಪ್ರವೇಶ. )


ರಮಾ:-(ವಿನೀತನಾಗಿ ಬಂದು ವಸುಮತೀ ದೇವಿಗೆ ವಂದಿಸಿ ಕೈಮುಗಿದು) ಪ್ರಿಯ ಜನನಿ ಗುರುಕುಲವಾಸಕ್ಕಾಗಿ ತಂದೆಯಾಣತಿಯಿಂದ ಈಗಲೇ ಹೊರಡುವೆವು. ಸಂತೋಷದಿಂದ ನನ್ನನ್ನು ಹರಸಿ ಬೀಳ್ಕೊಡಬೇಕು.

ವಸು:-(ರಮಾನಂದನ ಕೈ ಹಿಡಿದು ಬಳಿಯಲ್ಲಿ ಕುಳ್ಳಿರಿಸಿ, ಪ್ರೀತಿವ್ಯಂಜಿಕೆ ಸ್ವರದಿಂದ) ಸುಕುಮಾರ ವಿವೇಕಿಯಾಗಿಯೇ ಇರುವ ನಿನಗೆ ಬೇರೆ ಹೇಳುವುದೇನು? ಇಷ್ಟೆ; ಗುರುಕುಲವಾಸವು ನಿಮ್ಮ ಪುರೋವೃದ್ಧಿಗೆ ಕಾರಣವಾಗಿರಬೇಕಲ್ಲದೆ, ದುರಾಚಾರಕ್ಕೆ ದಾರಿಯನ್ನು ಕೊಡುವಂತಾಗಬಾರದು, ಗುರುಕುಲವಾಸವೆ೦ಬ ಈ ಬಲವತ್ತಪಶ್ಚರ್ಯೆಯೇ ನಿಮ್ಮ ಸರ್ವಾ೦ಗಕ್ಕೂ, ಅಪ್ರತಿಹತವಾದ ಕಾಂತಿಯನ್ನು ಕೊಡ ತಕ್ಕುದು ಈ ತಪಸ್ವಿಶ್ಚರ್ಯೆಯನ್ನು ಬಿಟ್ಟರೆ- ಕಾ೦ತಿಗೆ ಸ್ಥಿರತೆಯಿರುವುದಿಲ್ಲವಾದುದರಿಂದ ನೀವು ಬಹು ಜಾಗರೂಕರಾಗಿದ್ದು, ಈ ತಪೋ ವೃತ್ತಿಯಲ್ಲಿ ಕೃತಾರ್ಥರಾಗಿ ಬರಬೇಕು, ತಪಸ್ಸಿದ್ಧಿಯುಂಟಾಗುವದಕ್ಕೆ ಸತ್ಯವೂ, ವಿನಯವೂ ಸಮತೂಕವಾಗಿ ನಿಮ್ಮಲ್ಲಿ ರಬೇಕು. ಅವೆರಡರಲ್ಲಿ ಒಂದಿಲ್ಲದಿದ್ದ ರೂ ನಿಮ್ಮ ವ್ರತಕ್ಕೆ ಹಾನಿಯು ತಪ್ಪದು. ಅವೆರಡೂ ನಿಮ್ಮಲ್ಲಿ ದೃಢಮೂಲವಾಗಿರಬೇಕಾದರೆ, ನಿಮ್ಮಲ್ಲಿ ಪರಸ್ಪರ ಸೌಜನ್ಯವೂ ಬಲವಾಗಿರಬೇಕು, ನೌಜನ್ಯಕ್ಕೆ ತಾಳ್ಮೆಯೇ ಮೂಲವಾದುದರಿಂದ ಅದನ್ನು ಮೊದಲು ನೀವು ಅಭ್ಯಾಸಕ್ಕೆ ತಂದಿರ ಬೇಕು, ತಾಳ್ಮೆಯಿಲ್ಲ ದಿದ್ದರೆ ನೀವು ಗುರುಕುಲವಾಸ ಮಾಡಲು ಅರ್ಹರಾಗುವುದಿಲ್ಲ, ಏಕೆಂದರೆ... ( ಗುರುಕುಲವಾಸದಲ್ಲಿರುವ ವಿದ್ಯಾರ್ಥಿಗೆ ಗುರುವೇ ತ೦ದೆ, ಗುರುವೇ ತಾಯಿ, ಗುರುವೇ ದೈವ, ಗುರುವೇ ಸಮಸ್ತ ಸುಖ ಸಾಧನೆಗಳಿಗೂ ಮೂಲ ” ಎಂದೀ ಬಗೆ