ರಮಾನಂದ
ಯಾಗಿ ಬಲ್ಲವರಾಡುವುದರಿಂದ, ನಿಮ್ಮ ಗುರುಕುಲವಾಸದಲ್ಲಿ ನಿಮಗೆ ಆ ಗುರು ವೇ ತಂದೆಯೆಂದೂ, ಗುರುಪತ್ನಿಯೇ ತಾಯಿಯೆಂದು , ಗುರುಪುತ್ರರೇ ನಿಮ್ಮ ಒಡಹುಟ್ಟಿದವರೆಂದೂ, ಅವರ ಆಪ್ತೇಷ್ಟರೇ ನಿಮಗೂ ಸುಹೃತ್ತುಗಳೆಂದು ಭಾವಿಸಬೇಕಾದುದು ನಿಮ್ಮ ಧರ್ಮವು. ಆದುದರಿಂದ ಅಂತಹ ಗುರುಜನರಲ್ಲಿ ನೀವು ಸರ್ವ ಪ್ರಕಾರದಿಂದಲೂ ವಿನಯ, ಭಯ, ಭಕ್ತಿಭಾವಗಳಿಂದ ಸೇವಿಸುತ್ತಿರಬೇಕೆಂಬುದನ್ನು ಹೇಗೂ ಮರೆಯಲೇಬಾರದು.
ರಮಾನಂದ:- ತಾಯೆ! ಎಲ್ಲ ವನ್ನೂ ಮನಸ್ಸಿನಲ್ಲಿಟ್ಟು, ಅದ ರಂತೆಯೇ ನಡೆಯುವೆನು. ಸಂಶಯ ಪಡದೆ ಮತ್ತೇನಿದ್ದರೂ ನಿರೂಪಿಸಿ, ಅನುಗ್ರಹಿಸಬೇಕು
ವಸು:-ಮತ್ತೇನು ಹೇಳಲಿ? ರಮಾನಂದ ನೀನೂ ,ನಿನ್ನ ಅಣ್ಣನಾದ ರವಿವರ್ಮನೂ ಏಕಕಾಲದಲ್ಲಿ ಗುರುಕುಲವಾಸಕ್ಕೆ ತೆರಳುತ್ತಿರುವಿರಾದುದರಿಂದ, ಅಲ್ಲಿ ನೀವು ಒಬ್ಬರನ್ನೊಬ್ಬರು ದ್ವೇಷಿ ಸದೆ, ಅನ್ನೋನ್ಯ ಭಾವದಿಂದ ಯಾವಾಗಲೂ ಎಡಬಿಡದಿದ್ದು ನಿಮ್ಮ ಒಡನಾಡಿಗಳಿಗೂ ಗುರುಜನಕ್ಕೂ ಮನಸ್ಸಂತೋಷವನ್ನುoಟ ಮಾಡುವಂತಿರಬೇಕು, ಒಬ್ಬರು ಮೈ ಮರೆತು ಅಕ್ರಮದಲ್ಲಿ ನಡೆಯುತ್ತಿದ್ದರೆ, ಮತ್ತೊಬ್ಬರು ಅವರನ್ನು ಎಚ್ಚರಿಸಿ, ಸರಿಯಾದ ರೀತಿಗೆ ತರಬೇಕೆಂಬುದನ್ನೂ ಇತರರ ಶ್ರೇಯೋಭಿವೃದ್ಧಿಯೇ ನಮ್ಮ ಶ್ರೇಯಸ್ವಾಧನವೆಂಬುದನ್ನೂ ನೀವು ನೆನಪಿನಲ್ಲಿಟ್ಟು ಪರಸ್ಪರ ಸಹಾ
ಯಕರಾಗಿದ್ದು, ನಿಮ್ಮ ನಿಮ್ಮ ಗುರುಕುಲವಾಸ, ವಿದ್ಯಾಭ್ಯಾಸಗಳನ್ನು 20 ಸಾಂಗವೆನ್ನಿಸಿಕೊಂಡು ಬರಬೇಕೆಂಬುದೇ ನನ್ನ ಹಿತಸೂಚನೆ.
ತೆರೆಯಲ್ಲಿ : ಸಾಧು ಸಾಧು!! ಅಹುದು; ಇದೀಗ ಸುಶಿಕ್ಷಿತಸ್ತೀಯರ ಹಿತಬೋಧೆ",
(ವಸುಮತಿಯು ಚಕಿತೆಯಾಗಿ ಕರೆಯಕಡೆ ನೋಡಿ , ಧಿಗ್ಗನೆದ್ದು ನಿಲ್ಲುವಳು, ರಮಾನಂದ--ರವಿವರ್ಮಕುಮಾರರೂ ಎದ್ದು ತಾಯಿಯ ಬಳಿಯಲ್ಲಿ ನಿಲ್ಲುವರು.) 25