ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತೀಹಿತೈಷಿಣೀ

೩೦ ಎಲ್ಲರೂ ಒಡಹುಟ್ಟಿದ ಪ್ರೀತಿಯಿಂದ ಒಕ್ಕಟ್ಟಾಗಿದ್ದು, ಒಬ್ಬರಲ್ಲಿ ಮತ್ತೊಬ್ಬರು ಸದಸದ್ವಿವೇಚನೆಯನ್ನು ಮಾಡುತ್ತ ನಿಮ್ಮ ನಿಮ್ಮ ಪಾಠ ಪ್ರವಚನಗಳನ್ನು ಕ್ರಮವಾಗಿ ನಡೆಯಿಸಿಕೊಂಡು ಬರುವ ಅಭ್ಯಾಸ ವನ್ನು ಹಿಡಿಯಬೇಕು. ನಿಮ್ಮಲ್ಲಿ ಆಹಾರ, ನಿದ್ರೆ, ವ್ಯಯಗಳೇ 5 ಮೊದಲಾದ ವ್ಯವಹಾರಗಳು ಮಿತರೂಪದಲ್ಲಿ ರಬೇಕು, ಅತಿಯಾದರೆ ನೀವೂ ದುಂದುಗಾರರೆನ್ನಿಸಿ, ನಿಮ್ಮನಿಮ್ಮ ಪಾಲಕರನ್ನೂ ದೂರಿಗೆಳೆದು ಗೋಳಿಡುವಂತೆ ಮಾಡುವಿರಿ, ಆದುದರಿಂದ, ಯಾವಾಗಲೂ ದುಂದು ವೆಚ್ಚವು ನಿಮ್ಮಲ್ಲಿ ಸೇರಲಾಗದು.
ರವಿ-ರಮಾ:-ಶಿರಸಾವಹಿಸಿದೆವು.
10 ಶ್ರೀಮ೦ತ:- ಹೂಂ!ಇನ್ನು ನಿಮಗೆ ಹೆಚ್ಚು ಹೇಳಬೇಕಾ ದುದಿಲ್ಲ, ಈವರೆಗೆ ನಾವು ಹೇಳಿರುವುದೆಲ್ಲವನ್ನೂ ನೆನಪಿನಲ್ಲಿಟ್ಟು ನಿಮ್ಮ ಗುರುಸನ್ನಿ ಧಾನದಲ್ಲಿ ಪ್ರೌಢಶಿಕ್ಷಣೆಯನ್ನು ಹೊ೦ದಿ ಬರುವಿ ರೆಂದು ದೃಢಭರವಸೆಯಿಂದ ನಿಮ್ಮನ್ನು ಬೀಳ್ಕೊಡುವೆನು, ನಿಮ್ಮ ಮೇಲಿನ ಸರ್ವ ಸ್ವಾತಂತ್ರವೂ ಇಂದಿನಿಂದ ಗುರುಗಳನ್ನೇ ಸೇರಿರು 15 ವುದು, ನಿಮ್ಮಲ್ಲಿ ತೋರಿಬರಬಹುದಾದ ನ್ಯೂನಾತಿರಿಕ್ತ ದೋಷಗಳಿಗೆ ತಕ್ಕ ದಂಡವನ್ನು ವಿಧಿಸುವುದಕ್ಕಾಗಲೀ ನಿಮ್ಮಲ್ಲಿ ಪರಮೋತೃತ್ವ ವಾದ ಸದ್ಗುಣಗಳು ತೂರಿಬಂದರೆ, ಬಹುಮಾನಿಸುವುದಕ್ಕಾಗಲಿ ಇವರು ಬಾಧ್ಯರಾಗಿರುವುದರಿಂದ, ನೀವು ಇವರ ಬಳಿಯಲ್ಲಿ ನಮ್ಮಲ್ಲಿ ರುವಂತೆಯೇ ಇರಬೇಕೆಂದು ಮತ್ತೊಂದು ಬಾರಿ ಎಚ್ಚರಿಸಿರುವೆನು.
20 ತೆರೆಯಲ್ಲಿ: ಭಗವಂತನ, ಭಾಸ್ಕರನೆ, ಭುವನತ್ರಯಾಧಾರನೆ, ಸರ್ವ ಲೋಕಸಾಕ್ಷಿವಂತನೆ! ನಿನಗಿದೆ ಅನೇಕ ವಂದನೆಗಳು, ಯಾವ ನಿನ್ನ ಉದ್ದಂಡಕಿರಣ ಸಮಹವು ಈ ಸಮಸ್ತ ಜೀವರಾಶಿಗಳಲ್ಲಿಯ ಅಡಗಿರುವ ದೋಷಗಳನ್ನು ಆಪ ಹರಿಸಿ, ಸಮಸ್ತ ಜೀವರಾಶಿಗಳೂ ವಿಗತಕಲ್ಮಷರಾಗಿ ನಿನ್ನನ್ನೇ ಭಜಿಸುವಂತೆ ಮಾಡುವ ಅದ್ಯುತಪ್ರಭಾವವುಳ್ಳವೋ, ಅಂತಹ ಚಂಡಕಿರಣದ ಮಧ್ಯಾಹ್ನ ಮಾರ್ತಾಂಡನಾಗಿ 25 ರುವ ನಿನಗಿದೋ ವಂದನೆಗಳು.”

(ವಾದ್ಯಗಳ ಕೋಲಾಹಲ)