ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸತೀಹಿತೈಷಿಣೀ

೩೪

ವಾಗುವಂತೆ ಮಾಡದಿರಬೇಕೆಂಬ ನಮ್ಮಿ ಪ್ರಾರ್ಥನೆಯು ನಿನ್ನಿಂದ ಅನುಗ್ರಹಿಸಲ್ಪಡಲಿ. "

(

ಸಭೆಯಕಡೆಗೆ ತಿರುಗಿ ) 

ಲೋಕದಲ್ಲಿ ಅಂತ:ಶುದ್ದಿಯಿಲ್ಲದವನಿಂದ ಯಾವ ಸತ್ಕಾರ್ಯವೂ ನೆರವೇರಲಾರದು, ಸಮಸ್ತ ಕಾರ್ಯಸಿದ್ಧಿಗೂ ಹೇತುವಾದ ಈ ಅ೦ತ: ಶುದ್ದಿಯು ಸಮಸ್ತ ಮಾನವರಿಗೂ ಅವಶ್ಯವಾಗಿರತಕ್ಕದ್ದು. ಯಾರಿಂದ ಈ ಅಂತಃಶುದ್ದಿ ಅಥವಾ ಸದ್ಭಾವನೆಯು ಅಭ್ಯಾಸಮಾಡಲ್ಪಡುವುದಿಲ್ಲವೋ, ಅವರು ಪ್ರಪಂಚಕ್ಕೆ ವಿರೋಧಿಗಳಾಗಿ ಪರಿಣಮಿಸುವರು. ಅಂತಹರಿಗೆ ಸ್ವಜನರಿಲ್ಲ; ಬಂಧುಮಿತ್ರರಿಲ್ಲ; ಗುರುಹಿರಿಯರೆಂಬ ವಿವೇಚನೆ ಮೊದಲೇ ಇರುವುದಿಲ್ಲ; ಎಂದ ಬಳಿಕ ಒಡಹುಟ್ಟಿದವರ ಮಾತೇನು? ದಾಯಾದ ಮಾತ್ಸರ್ಯವೊಂದು ಅಂತಹರಿಗೆ ಸಹಾಯಕ ವಾಗಿದ್ದು, ಕುಲಕ್ಕೂ ಮಾನಕ್ಕೂ ಧರ್ಮಕ್ಕೂ ಅಂತಕಸ್ವರೂಪ ರಾಗಿ ತಿರುಗುವಂತೆ ಮಾಡಿಬಿಡುವುದೆಂದರೆ ಸಾಕಾಗಿದೆ, ಇದಕ್ಕೆ ಬೇರೆ ನಿದರ್ಶನವೇಕೆ? ಸದ್ಭಾವನಾಯೋಗದಲ್ಲಿ ಸಿದ್ದಿ ಹೊಂದಿರುವ 15 ನಮ್ಮ ಸುಕುಮಾರ-ರಮಾನಂದನನ್ನು ನೋಡಿದರೆ, ಸಹಾಧ್ಯಾಯಿಗ ೪ಾಗಿರುವ ನಮ್ಮೆಲ್ಲರಿಗೂ ಪರಮಾನಂದವುಂಟಾಗುವುದು. ಆದರೆ, ಅಂತಹ ಬಾಲಯೋಗಿಯಮೇಲೆ ದ್ವೇಷವನ್ನು ಸಾಧಿಸುತ್ತಿರುವ ಅವನ ಅಣ್ಣ-ರವಿವರ್ಮನನ್ನು ಸ್ಮರಿಸಿದ ಮಾತ್ರಕ್ಕೆ ಭಯವೂ, ಸಂತಾಪವೂ ಏಕಕಾಲದಲ್ಲಿ ಉಂಟಾಗುತ್ತಿರುವವು, ಆತನು ಮಾವನಮನೆಯಿಂದ 20 ಬಂದ್ರು, ರಮಾನಂದನೊಡನೆ ಗುರುಕುಲವಾಸಕ್ಕೆ ಕಳುಹಲ್ಪಟ್ಟು, ಇನ್ನೂ ನಾಲ್ಕಾರುತಿಂಗಳ ಪರಮಾವಧಿಯಲ್ಲಿ ಯೇ, ಯೋಗ್ಯತಾ ಪರಿ ಶೀಲನೆಗೆಂದು ನಿಯಮಿತವಾಗಿದ್ದ ಈ ಅವಧಿಯಲ್ಲಿಯೇ, ತಮ್ಮನ ಮೇಲೆಯೂ ತಮ್ಮನಿಗೆ ಅನುಯಾಯಿಗಳಾಗಿರುವ ನಮ್ಮ ಮೇಲೆಯ ಎಷ್ಟೊಂದು ಹಗೆತನವನ್ನು ಬೆಳೆಸುತ್ತಿರುವನು / ಅಭಿನ್ನೊದರರಲ್ಲಿ 25 ಯೇ ಈಬಗೆಯ ಈರ್ಷ್ಯಾ ಸೂಯೆಗಳುಂಟಾದರೆ, ಹೇಳುವದಿನ್ನೇನು ?