ಪುಟ:ರಮಾನಂದ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೩೫ ಹಾ, ಕಷ್ಟ! ಕಷ್ಟ!! ಪ್ರಬಲನಾಗಿರುವ ಈತನ ಕಿರುಕುಳವನ್ನು ನಮ್ಮ ಕುಮಾರನು ನಿರ್ವಹಿಸುವುದೆಂದರೆ ಬಹುಕಷ್ಟ111 (ತೆರೆಯಲ್ಲಿ ) ಮಿತ್ರರೆ! ದುಷ್ಟನ ಏಳಿಗೆಯು ಸಹನಾತೀತವಾಗಿದೆ. ? ಸುಮುಖ:-(ತೆರೆಯಕಡೆ ನೋಡಿ ಗಾಬರಿಯಿಂದ) ಬಂದೇ ಬಂದನುಧೂರ್ತನಾದ ರವಿವರ್ಮನು ತನ್ನ ಸಹಚರರೊಡನೆ ಆಲೋಚಿಸುತ್ತ 5 ಬರುವಂತಿದೆ. ಈತನಲ್ಲಿ ಅಷ್ಟಾಗಿ ಭರವಸೆಯಿಡಬೇಡವೆಂದು ನಾವು ಎಷ್ಟು ಹೇಳಿದರೂ ರಮಾನಂದನು ಕೇಳದೆ, ಅಞ್ಞನೆಂದೂ ಗುರು ವೆಂದೂ ಹಿತೈಷಿಯೆಂದೂ ಗೌರವಬುದ್ದಿಯಿಂದ ನೋಡುತ್ತಿರುವನು. ಈ ಮಾಯಾವಿಯಾದರೋ ಕೃತ್ರಿಮಸಂಧಾನದಿ೦ದ, ತಮ್ಮನ ಜೀವಿತ ನನ್ನ ಕೊನೆಗಾಣಿಸಬೇಕೆಂದು ಪ್ರಯತ್ನಿ ಸುತ್ತಿ ರುವನು. ಏನು 10 ಮಾಡುವುದು? ಭಗವಂತನೇ ಸಹಾಯಕನಾಗಿರಲಿ, ನಾನು ಈಗಲೇ ಹೋಗಿ, ಶಾಲೆಗೆ ಹೊತ್ತಾಯಿತಂದು ಕುಮಾರನನ್ನು ಎಚ್ಚರಿಸಿ ಕರೆತರುವೆನು, (ಎಂದು ಹೋಗುವನು.) ( ನಳ-ಕಳಿಂಗ-ರೆಂಬ ಸಹಚರರೊಡನೆ ರವಿವರ್ಮನ ಪ್ರವೇಶ. ) ರವಿ:-ಪ್ರಿಯಮಿತ್ರರೆ! ಆ ರಮಾನಂದ-ಹಂತಕನಿಂದ ನಮ 15 ಗಾಗುತ್ತಿರುವ ಅಪಮಾನವನ್ನು ಹೇಗೆ ಸಹಿಸಬೇಕು ? ಕುಂತಲನಗರ ದಲ್ಲಿಯೇ ಇದ್ದಿದ್ದರೆ, ನಮಗೆ ಇಷ್ಟರಸಂತಾಪಕ್ಕೆ ಕಾರಣವಿರುತ್ತಿರ ಲಿಲ್ಲ, ಅಲ್ಲಿ ಮಾವನನ್ನು ವಂಚಿಸಿ, ಆತನ ಮನೆಯವರೊಡನೆ ವಿರೋಧವನ್ನು ಕಟ್ಟಿಕೊಂಡು, ಇಲ್ಲಿಗೆ ಬಂದುದಕ್ಕೆ ನಮಗಿದೆ ಸನ್ಮಾನವೇನು? ಕಳಿಂಗ:-ಕುಮಾರನ | ಮಿಂಚಿದ ಕಾವ್ಯದಲ್ಲಿ ಚಿಂತಿಸಿ ಫಲವಿಲ್ಲ ; ಮುಂದೆ ಮಂದತ್ವದಿಂದಿರುವುದು ಮಾತ್ರ ಸರಿಯಲ್ಲ. ರವಿ:-ಮಿತ್ರರೆ! ಆ ನೀಚನ ಏಳಿಗೆಯು ನನ್ನ ಸರ್ವನಾಶ ಮಾಡುವಂತಿದೆಯೆಂದೂ, ಆತನ ಕುಟಿಲನಡತೆಯಿಂದ ವಂಚಿತರಾಗಿ ರುವ ತಾಯಿತಂದೆಗಳು ನನಗೆ ವಿರೋಧಿಗಳಾಗಿಯೇ ತಿರುಗಿರುವ 25 20