ಪುಟ:ರಮಾನಂದ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ಮನೆದಾರ್ಡ್ಯವೂ ಮತ್ತೂ ಹೆಚ್ಚು ವುದಲ್ಲದೆ ಬೇರಿಲ್ಲ. ಸೌಮ್ಯ:-ಹಾಗಿದ್ದರೆ, ನೀನೇಕೆ ಹೀಗೆ ಚಿ೦ತಾಪರವಶನಾಗಿ ಕುಳಿತಿರಬೇಕು? ರಮಾ:-ಏಕೆ೦ಬುದನ್ನು ನೀನೂ ತಿಳಿದೇ ಇರಬಹುದಲ್ಲವೆ ? ಸೌಮ್ಯ:-ಏನದು ? ಶಾಲೆಯಲ್ಲಿ ನಡೆದ ವಿದ್ಯಮಾನಗಳಿಂದ 5 ಹೀಗಾಗಿರುತ್ತೀಯಲ್ಲವೇ? ರಮ:-ನಿಜ ಆದುದರಿಂದಲೇ ಹೀಗಾಗಿರುವೆನು, ಆದರೆ ನನ್ನ ದೇಹ ಸೌಖ್ಯವನ್ನು ಕುರಿತ ಚಿ೦ತೆಯೆಂದು ಮಾತ್ರ ತಿಳಿಯ ಬೇಡ, - ಸೌಮ:-(ವಿಸ್ಮಿತನಾಗಿ) 'ಮತ್ತಾವುದನ್ನು ಕುರಿತು ಚಿಂತ?” 10 ರಮಾ:- ಮಾತ್ಸರ್ಯ ಪರವಶತೆಯಿಂದ ನನ್ನ ಒಬ್ಬನನ್ನು ಕೊಲ್ಲ ಬೇಕೆಂದು ಹಲವು ಬಗೆಯ ಮಾಟಗಳನ್ನು ಹೂಡಿರುವ ರವಿ ವರ್ಮಾದಿಗಳಿಗೆ, ಮು೦ದೆ ಒದಗಬಹುದಾಗಿರುವ ಅಲಂಷ್ಟ ಫಲಗ ಇನ್ನು ಕುರಿತು ಹೀಗೆ ವ್ಯಾಕುಲಿತನಾಗಿರುವೆನು. ಸೌಮ್ಯ:- ಇದಕ್ಕೆ ನಿನಗೇಕೆ ವ್ಯಾಕುಲವ?-'ಮಾಡಿದ್ದುಣ್ಣು 15 ಮಹಾರಾಯ' ಎಂದಿದೆಯಲ್ಲವೆ ? ಅಟ್ಟ ದನ್ನು ಚೆನ್ನಾಗಿ ಉಂಡು ತಿಂದು ತೇಗಲಿ; ಮತ್ತು ಹೇಗಾದರೂ ನರಳಲಿ. ರವಾ:-ಮಿತ್ರನೇ! ಹಾಗಲ್ಲ, ಕೇಳು-ಪರರ ಕೇಡು ತನ್ನ ಕೇಡು' ಎಂಬ ನ್ಯಾಯಕ್ಕನುಸಾರವಾಗಿ, ಕಂದ|| << ಮನದೊಳಗನ್ಯರಿಗಹಿತವು ನೆನೆದರೆ ತಾಂ ಮುನ್ನ ಕೆದುವ ತನಗಿಚ್ಚೆದ್ದಾ ಮನೆಮುನ್ನ ಬೆಂದು ಮಿಕ್ಕಿನ | ಮನೆಯಂ ಸುಡುವಂತೆ ಕಡೆಗೆ ಸುಜನೋತ್ತಂಸ | ಎಂದು ನೀತಿಯು ಹೇಳುತ್ತಿರುವುದು. ಸೌಮ್ಯ:-ಅಹುದಷ್ಟೇ. ಅದಕ್ಕೆಂದೇ ಅ೦ತಹರ ಗೊಡವೆಗೆ 25 20