ಪುಟ:ರಮಾನಂದ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ೮೦ ಸತೀಹಿತೈಷಿಣೀ ಹೋಗಬಾರದೆಂದು ಬಲ್ಲ ವರು ಹೀಗೆ ಹೇಳುತ್ತಿರುವರು ಕಂದು “ಸಲ್ಲದ ಬವರಮುಮಂ ತನ | ಗಲ್ಲದ ನಂಟರು ಮನಿಚ್ಛೆಯರಿಯದ ಸತಿಯುಂ | ಕೊಲ್ಲಿ ಹವ ನುಡಿವ ಮನುಜರ | ಮೆಲ್ಲನೆ ಬಿಡುವುದು ವಿವೇಕ ಚಿ೦ತಾರಾ || ರಮಾ:- ನಿಜ? ಆದರೂ ಕೇಳು. ಸ್ವಾರ್ಥಸುಖವನ್ನೇ ದೊಡ್ಡ ದೆಂದು ಭಾವಿಸಿ ತನ್ನ ಸುತ್ತುಮುತ್ತಲಿರುವ ಬಳಿಯವರನ್ನು ಉನ್ನತಿಗೆ ತರಲು ಪ್ರಯತ್ನಿ ಸದೆ, ತನ್ನ ಸುಖದದಾರಿಯೊಂದನ್ನೇ ನೋಡಿಕೊಳ್ಳು ವುದು ಸತ್ಪುರುಷರ ಲಕ್ಷಣವಲ್ಲ, ದುಸ್ಸಹವಾಸದಲ್ಲಿ ಸೇರಿ, ಯುಕ್ತಾ 10 ಯುಕ್ತ ವಿಚಾರವನ್ನು ಬಿಟ್ಟು, ಮದಾಂಧತೆಯಿ೦ದ ದುರಾಚಾರದಲ್ಲಿ ಬಿದ್ದು ಕೆಟ್ಟು ಹೋಗುತ್ತಿರುವ ಜಡರನ್ನು ಸರ್ವವಿಧದಿ೦ದಲೂ ನೀತಿ ಮಾರ್ಗಕ್ಕೆ ಕರೆತಂದು, ದೇಶಕ್ಕೆ ಹಿತವಾಗುವಂತೆ ಮಾಡಬೇಕಾದ ತಮ್ಮ ಕರ್ತವ್ಯದಲ್ಲಿ ನಿರತ ರಾಗಿರುವ ದೇ ಮಹನೀಯರ ಶೀಲವು. ಅ೦ತಹರಿಗೆ ಇವರು ತಮ್ಮವರು, ಇವರು ಪರರು, ಇವರು ದೀನರು, 15 ಇವರು ಸಂಪನ್ನ ರೆಂಬ ಪಕ್ಷಪಾತ ಬುದ್ದಿ ಯಾಗಲೀ, ಇತರ ಕಷ್ಟ ನಷ್ಟ ಗಳ ಭಯವಾಗಲೀ ಇರುವುದಿಲ್ಲ, ಇದಕ್ಕೆ ನಿದರ್ಶನವಾಗಿ ಲೋಕಾ ನುಭವಜ್ಞರ ಹಿತೋಪದೇಶವೂ ಹೇಳುವುದು. -- ವೃತ (' ಪರರಿವರ್ ಸ್ವ ಜನಕ್ಕೆ ಇವರೆಂದು || ಸ್ಮರಿಸುವ‌ ಪರಿಕಿಸಲ್ ಮತಿ ಮಂದರ್‌ | ಅರಿಯಲೀ ಸರಿಗಳಂ ಸದುದಾರರ್ | ಧರಣಿಯ ಬಳಗವೈ ಸುಜನರ್ಗೆ | ” (ಛಂದಃಸಾರ) ಸೌಮ್ಯ:- ಸಾಧು ಸಸ್ಮಿತ್ರನೇ ನಿನ್ನ ಸತ್ಸ೦ಕಲ್ಪವು ಪರಮ ನಾಧು, ಆಗಲಿ; ಇಂದಿನ ವಿಚಾರವು ಇಷ್ಟಕ್ಕೆ ನಿಂತಿರಲಿ, ಕೊತ್ತು ಮೀರಿಹೋಗಿದೆ. ಈ ನಟ್ಟಿ ರುಳಲ್ಲಿ ಇಲ್ಲಿ ಕುಳಿತಿರುವದರಿಂದ ಗುರು 25 ಗಳ ಸಂದೇಹವ ಮತ್ತೂ ಹೆಚ್ಚಬಹುದಾಗಿದೆ. 20 |