ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ಕೆಲವು ರಾಜಕಾರಗಳಲ್ಲಿ ನವಾಬನ ಅಕ್ರಮಗಳನ್ನು ಸೈರಿಸದೆ, ತನ್ನ ಅಧಿಕಾರವನ್ನು ಬಿಟ್ಟು ಬಿಟ್ಟು, ಉಳಿದ ಜೀವಿತಕಾಲವನ್ನೆಲ್ಲ ಸ್ವತಂತ್ರವಾಗಿಯೇ ಕಳೆದನು. ರಾಜಾರಾಮಮೋಹನರಾಯನ ಪಿತೃವ್ಯರು (ತಂದೆಯ ಸೋದರರು) ವೈಷ್ಣವ ಮತ ವನ್ನೂ, ಮಾತೃವ್ಯರು (ತಾಯಿಯ ಸೋದರರು) ಶಾಸ್ತ್ರೀಯ ಮತವನ್ನೂ ಅವಲಂಬಿಸಿದ್ದರು. ಹೀಗೆ ಪರಸ್ಪರ ವಿರುದ್ದಗಳಾದ ಮತಗಳವರಿಗೆ ಬಾಂಧವ್ಯವು ಸೇರುವುದಕ್ಕೆ ಒಂದು ಕಾರಣ ಉಂಟಾಯಿತು. ಬಿರ್ಜೆ ಬನೂದನು ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ಪ್ರಾಪಂಚಿಕ ಸಂಬಂಧಗಳನ್ನು ತ್ಯಜಿಸಿ, ಗಂಗಾ ತೀರದಲ್ಲಿ ತಪಸ್ಸು ಮಾಡಿಕೊಂಡು ಕಾಲವನ್ನು ಕಳೆಯುತ್ತಿ ದ್ದನು, ಒಂದು ದಿನ ಛಾತ್ರಾ ಎಂಬ ಗ್ರಾಮವಾಸಿಯಾಗಿಯ, ಗೌರವಸ್ಥನಾಗಿಯೂ, ತನ್ನ ವಿದ್ಯಾಧಿಕ್ಯದಿಂದ 'ದೇಶಗುರು' ಎಂಬ ಬಿರುದು ಪಡೆದವನಾಗಿಯೂ ಇದ್ದ ಶ್ಯಾಮಭಟ್ಟಾ ಚಾರನೆಂಬ ಒಬ್ಬ ಶಾಸ್ತ್ರೀಯ ಮತಾವಲಂಬಿಯು ಇವನ ತಪೋಸ್ಥಾನಕ್ಕೆ ಬಂದು ನಿಂತು ವಿನಯದಿಂದ “ ಅಯ್ಯಾ, ನನ್ನ ಪ್ರಾರ್ಥನೆಯೊಂದುಂಟು. ತಾವು ದಯಮಾಡಿ ಅದನ್ನು ಅಲ್ಲ ಗೀಕರಿಸುವುದಾಗಿ ವಾಗ್ದಾನಮಾಡಬೇಕು ' ಎಂದು ಬೇಡಿದನು. ಬಿರ್ಜಿಬನೂದನು ಇವನ ಅಂತರಂಗವನ್ನು ತಿಳಿಯದೆ, ನನ್ನ ಮನೋವಾಕ್ಕಾಯಗಳಿಂದಲೂ ನಿಮ್ಮ ಇಷ್ಟವನ್ನು ಸಲಿಸು ವೆಸೆಂದು ಉತ್ತರವಿತ್ತನು. ಒಡನೆಯೇ ಭಟ್ಟಾಚಾರನು “ ವಿವಾಹಕ್ಕೆ ಸಿದ್ದಳಾಗಿರುವ ನನ್ನ ಕುವರಿಯನ್ನು ತಮ್ಮ ಮಕ್ಕಳಲ್ಲಿ ಒಬ್ಬನಿಗೆ ಕೊಟ್ಟು ಮದುವೆಮಾಡಲೆಳಸಿರುವೆನು ” ಎಂದು ತಿಳಿಸಿದನು, ಬರ್ಜಿಬನೂದನಿಗೆ ಈ ಸಂಬಂಧವು ಅಪೂರ್ವವಾಗಿಯೂ, ಆಶ್ಚಯ್ಯ ಜನಕವಾಗಿ ಯ ಇದ್ದರೂ ಸತ್ಯವಾಕ್ಯ ಪರಿಪಾಲನಾಧುರಂಧರನಾದುದರಿಂದ " ಹಾಗೆಯೇ ಆಗಲಿ ಎಂ ದೊಪ್ಪಿ, ತನ್ನ ಮಕ್ಕಳೇಳುಮಂದಿಯನ್ನೂ ಕರೆಸಿ, ನಿಮ್ಮಲ್ಲಿ ಯಾರು ಈ ಕನ್ವಯನ್ನು ಮದು ವೆಯಾಗುವಿರಿ ? ಎಂದು ಕೇಳಲು, ಪಿತೃವಾಕ್ಯ ಪಾಲನೆಯಲ್ಲಿ ಅತ್ಯಾಸಕ್ತನಾದ ರಾಮಕಾಂತ ರಾಯನೆಂಬ ಐದನೆಯ ಮಗು ಮುಂದೆ ಬಂದು ನಿಂತು, ಆರನೇ ಈ ಸಂಬಂಧವು ನನ್ನ ಅ೦ ತರಾತ್ಮಕ್ಕೆ ಅಂಗೀಕಾರವಾಗಿದೆಯೆಂದು ನುಡಿದನು, ಹೀಗೆ ರಾಮಕಾಂತರಾಂ.ನಿಂದ ಸರಿ ಣಯಗೊಂಡ ಶ್ಯಾಮಭಟ್ಕಾಚಾರನ ಪುಕಾರತ್ನ ವಾದ ' ಫೂಲ್‌ಠಾಕೂರಾಣೀ ' ಎಂಬ ನಾಮಾಂತರವುಳ್ಳ ತಾರಣೀದೇವಿಯ ಗರ್ಭಶುಕ್ತಿ ಮುಕ್ತಾಫಲವಾಗಿ ಜನಿಸಿದ ಪುತ್ರರತ್ನವೇ ಕಾಜಾರಾಮಮೋಹನರಾಯರು, ಆಹಾ ! ಸುಪ್ರಸಿದ್ಧನಾಗಿ, ಆಚಂದ್ರಾರ್ಕವಾದ ಕೀ ರ್ತಿಯನ್ನು ಗಳಿಸಿ, ತನ್ನ ಜೀವಿತಕಾಲವನ್ನು ಪೂಜ್ಯವಾಗಿ ಕಳೆದ ರಾಮಮೋಹನನನ್ನು ಪಡೆದ ಆ ದಂಪತಿಗಳು ಎಷ್ಟರ ಸುಕೃತಶಾಲಿಗಳೇ ! ರಾಮಮೋಹನನ ಅಣ್ಣನ ಹೆಸರು ಜಗನ್ನೊ ಹನ, ರಾಮಮೋಹನನಿಗೆ ಇವನಲ್ಲದೆ, ಬಲತಾಯಿಯ ಮಗನಾದ ರಾಮಲೋಚನನೆಂಬ ತಮ್ಮನೊಬ್ಬನಿದ್ದನು. ಈ ಕಾಲದಲ್ಲಿ ಪ್ರಸಿದ್ಧ ಪುರುಷರ ಚರಿತ್ರೆಗಳನ್ನು ಬರಿಯಕ್ಕವರೆಲ್ಲರೂ ಅಂತಹ ಪ್ರಸಿದ್ದ ಪುರುಷರ ಯೋಗ್ಯತೆಗಳಿಗೆಲ್ಲ ಅವರ ತಾಯಿಯರ ಬುದ್ದಿ ಕೌಶಲ್ಯವೇ ಕಾರಣ ಎಂಬ ಸಿದ್ಧಾಂತವನ್ನವಲಂಬಿಸಿ ಬರೆಯುತ್ತಿರುವರು. ಇದಕ್ಕೆ ದೃಷ್ಟಾಂತವಾಗಿ ತಮ್ಮ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦
ಗೋಚರ