ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಸಚ್ಚಲಾದಿ ಮಹೌನ್ನತ್ಯಗಳೆಲ್ಲಕ್ಕೂ ತಮ್ಮ ತಾಯಿಯರೇ ಕಾರಣರೆಂದು ಹೇಳಿದ ನೆಪೋ ಲಿರ್ಯ, ಜೋಸೆಫ್, ಮೇಜಿ, ಥಿಯೋಡೋರ್ ಮೊದಲಾದ ಪ್ರಸಿದ್ಧ ಪುರುಷರನೇಕರ ಚರಿತ್ರೆಗಳಿಂದ ಕಂಡು ಬರುವುವು. ಆದರೂ ಇದನ್ನೇ ಸಾಮಾನ್ಯ ನಿಯಮವಾಗಿ ಹೇಳು ವುದು ಅಷ್ಟು ಯುಕ್ತಿಯುಕ್ತವಾದುದಲ್ಲ, ಸಕಲಸದ್ಗುಣಸಂಪನ್ನನಾಗಿ ಸುಪ್ರಸಿದ್ಧನಾದ ಪು ತ್ರನನ್ನು ಹೆತ್ತ ತಾಯಿಯ ಗರ್ಭದಲ್ಲಿಯೇ ಅವನಿಗೆ ಸಮಾನರಲ್ಲದ ಗುಣಗಳನ್ನು ಇತರ ಕ್ಷ ಮಾರರೂ ಹುಟ್ಟುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆದರೂ ಮಹಾತ್ಮ ಅಭಿವೃದ್ಧಿಗೆ ತಾಯಿತಂದೆಗಳ ಯೋಗ್ಯತಾ ವಿಶೇಷವು ಸ್ವಲ್ಪಮಟ್ಟಿಗೆ ಸಾಧನವಾಗಿರುವುದೆಂದು ಒಪ್ಪಿಕೊಳ್ಳಬಹುದು. ಹೀಗೆಯೇ ಈ ರಾಮಮೋಹನರಾಯನು ಪ್ರಸಿದ್ದವಾದ ಹೆಸರುವಾಸಿ ಯನ್ನು ಪಡೆಯತಕ್ಕವನಾದುದರಿಂದ ಆಗಿನ ಬುಧಸಮಾಜದಲ್ಲಿ ಹೆಸಗೊಂಡ ರಾಮಕಾಂತ ರಾಯರಿಗೇನೇ ಮಗನಾಗಿ ಜನಿಸಿದನು, ಮತವೈಪರೀತ್ಯವನ್ನು ತೊಲಗಿಸಿಬಿಟ್ಟು, ಮದುವೆಯ ವಿಷಯದಲ್ಲಿ ತನ್ನ ತಂದೆಯು ಮಾಡಿದ ವಾಗ್ದಾನವನ್ನು ನೆರವೇರಿಸುವುದರಲ್ಲಿ ಆತನು ತೋ ರಿಸಿದ ಧೈರ್ಯವೂ, ರಾಮಮೋಹನನಿಗೆ ವಿದ್ಯಾಬುದ್ಧಿಗಳನ್ನು ಕಲಿಸುವುದರಲ್ಲಿ ಆತನು ವಹಿ ಸಿದ ಶ್ರದ್ದೆಯೂ, ಕಾರಣಾಂತರಗಳಿಂದ ರಾಮವೇ ಹನನನ್ನು ಮನೆಯಿಂದ ಹೊರಡಿಸುವಾಗ ಆತನು ತೋರಿದ ಪ್ರೇಮಾನುಬಂಧವೂ, ಸಹಾಯವೂ, ರಾಮಕಾಂತರಾಯನ ಸಚೀಲತೆಗೆ ಸಾಕ್ಷೀಭೂತಗಳಾಗಿವೆ. ರಾಮಮೋಹನನ ತಾಯಿ ಸದಾ ಆಗಿನ ನಾರೀಮಣಿಗಳಲ್ಲಿ ಉತ್ತ ಮಳೆಂದು ಹೆಸರುಗೊಂಡಿದ್ದಳು. ಕೇವಲ ಪಾತಿವ್ರತ್ಯಸೌಂದರಾದಿಗಳಲ್ಲಿ ಮಾತ್ರವಲ್ಲ. ಮತದೀಕ್ಷೆಯಲ್ಲಿಯ, ಭಗವದ್ರಕ್ಕಿಯಲ್ಲಿಯೂ ಕೂಡ ಆಕೆ ಯು ನಿರುಪಮಾನಶ್ರದ್ಯಾವಂತ ಯಾಗಿದ್ದಳು. ಆಕೆ ಸಾಯುವುದಕ್ಕೆ ಒಂದು ವರುಷದ ಮುಂಚೆ ಆ ಸತೀಮಣಿಯು ದೇವರ ದರ್ಶನಕ್ಕೆಂದು ಜಗನ್ನಾ ಧಕ್ಕೆ ಹೊರಟಳು. ಆ ಕಾಲದಲ್ಲಿ ಶ್ರಮವನ್ನು ಸಹಿಸಿಕೊಂಡು, ಪಾ ದಚಾರಿಗಳಾಗಿ, ತೀರ್ಥಯಾತ್ರೆಗೆ ಹೋಗಿಬರುವದು ಸರ್ವೊತ್ಮಷ್ಟಕಾರವೆಂದು ನಮ್ಮವರು ನಂಬುತ್ತಿದ್ದರು, ಆದುದರಿಂದ ಆಕೆಯು ಪ್ರಯಾಣಕಾಲದಲ್ಲಿ ತಕ್ಕ ಪರಿವಾರ ವಾಹನಗಳ ಸಹಾಯವನ್ನು ಪಡೆದಿದ್ದರೂ, ಒಬ್ಬ ಸೇವಕನನ್ನಾ ದರೂ ಸಂಗಡ ಕರೆದುಕೊಳ್ಳದೆ, ಮಾರ್ಗ ದಲ್ಲಿ ಸಂಭವಿಸಿದ ತೊಂದರೆಗಳನ್ನೆಲ್ಲ ಸೈರಿಸಿಕೊಂಡು ಜಗನ್ನಾಥಕ್ಕೆ ಹೋಗಿ, ತನ್ನ ಅವಸಾನ ಕಾಲದ ತನಕ ಅಲ್ಲಿಯೇ ದೇವಾಲಯದ ಪರಿಚಾರಿಣೀ ಕಾರದಲ್ಲಿದ್ದು, ಕಾಲವನ್ನು ಕಳೆದಳ. ಮರಣಕ್ಕಿಂತ ಮುಂಚೆ ಒಂದಾನೊಂದುದಿನ ತನ್ನ ಮಗನೊಡನೆ ಹೀಗೆ ಹೇಳಿದಳಂತೆ;- ರಾವು ಮೋಹನಾ ! ನೀನು ಹೇಳಿದ ಮತಬೋಧೆಯು ನನ್ನ ಅಂತರಾತ್ಮಕ್ಕೆ ಎಷ್ಟೋ ಸಂತೋಷಕರ ವಾಗಿಯೂ, ಅಂಗೀಕಾರವಾಗಿಯೂ ಇದೆ ಆದರೆ ನಾನು ಮುದುಕಿಯಾಗಿಯ, ಸ್ತ್ರೀಜಾತಿಗೆ ಸೇರಿದವಳಾಗಿಯೂ ಇರುವುದರಿಂದ ವಿಗ್ರಹಾರಾಧನೆಯ ಚಿರಕಾಲಾಭ್ಯಾಸದಿಂದ ಉಂಟಾದ ಆನಂದವನ್ನು ಬಿಡಲಾರದೆ ಇದ್ದೇನೆ. ತಾರಣೀದೇವಿಯು ಶಾಸ್ತ್ರೀಯರ ಮನೆಯಲ್ಲಿ ಹುಟ್ಟಿದವಳಾದರೂ ತನ್ನ ಅತ್ತೆಯ ಮನೆಯವರ ಆಚಾರದಂತೆ ಅವರ ಮನೆಗೆ ಸೇರಿದ ತರುವಾಯ ವೈಷ್ಣವ ಮತವನ್ನೇ ಅವಲಂ